ಬೆಂಗಳೂರು
ಪ್ರಜಾಪ್ರಭುತ್ವ ತೀರ್ಪು ವಿರೋಧಿಸಿ ತಮ್ಮ ಸ್ವಹಿತಕ್ಕಾಗಿ ನಡೆಯುವ ಜನಪ್ರತಿನಿಧಿಗಳ ವಿರುದ್ಧ ಜನಾದೋಂಲನ ರೂಪಿಸಬೇಕು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಅವರು ಒತ್ತಿ ಹೇಳಿದರು.ನಗರದ ಶಾಸಕರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಚಲಿತ ರಾಜ್ಯ ರಾಜಕೀಯ ವ್ಯಾಪಾರೀಕರಣದ ಕುರಿತು ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ
ಅವರು ಜನಪ್ರತಿನಿಧಿಗಳು ಜನರ ಸೇವಕರಾಗಿ ಇರಬೇಕು.
ಆದರೆ, ಇಂದಿನ ಕಾಲಘಟ್ಟದಲ್ಲಿ ಇದು ಬದಲಾಗಿದೆ.ಅಷ್ಟೇ ಅಲ್ಲದೆ, ಜನರ ನಿರ್ಧಾರಕ್ಕೂ ಬೆಲೆ ನೀಡುವುದಿಲ್ಲ. ಹಾಗಾಗಿ, ಸಮಯ ಸಾಧಕರಿಗೆ ಜನರು ಬುದ್ದಿ ಕಲಿಸಬೇಕು ಎಂದು ಕಿಡಿಕಾರಿದರು.ಬಿಜೆಪಿಯವರು ದೇಶಾದ್ಯಂತ ಕುದುರೆ ವ್ಯಾಪಾರ ಮಾಡುತ್ತಿದ್ದಾರೆ. ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆಯನ್ನು ಮಾಡಿಕೂಳ್ಳುತ್ತಿದ್ದಾರೆ.ಆದರೆ, ಇದನ್ನು ಪ್ರಶ್ನೆ ಮಾಡಬೇಕಿದ್ದ, ಇದರ ವಿರುದ್ಧ ಧ್ವನಿಗಟ್ಟಿಗೊಳಿಸಬೇಕಾಗಿದ್ದ ಜನರು,ಮಾಧ್ಯಮಗಳು ಸುಮ್ಮನೆ ಇರುವುದು ಸಂವಿಧಾನಕ್ಕೆ ಮಾರಕ ಎಂದು ಹೇಳಿದರು.ಕೆಲ ಶಾಸಕರು ತಮ್ಮ ಭವಿಷ್ಯ ನೋಡಿಕೂಳ್ಳುತ್ತಾರೆ ಹೊರತು, ಜನಕ್ಕಾಗಿ ದುಡಿಯುತ್ತಿಲ್ಲ.ಇಂತಹ ವ್ಯಕ್ತಿಗಳಿಗೆ ಬುದ್ಧಿ ಕಲಿಸಬೇಕು ಎಂದು ತಿಳಿಸಿದರು.
ಜನಾಂದೋಲನ:
ಜನಪ್ರತಿನಿಧಿಗಳ ದೋಷಗಳನ್ನು ನೇರವಾಗಿ ಜನರಿಗೆ ಮುಟ್ಟಿಸಬೇಕು.ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಯವ ಅವಶ್ಯಕತೆ ಇದ್ದು, ಗಟ್ಟಿಯಾಗಿ ಯಾದ ಜನಾಂದೋಲನ ರೂಪಿಸಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಮರುಳಸಿದ್ದಪ್ಪ, ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ, ಮಾಜಿ ಶಾಸಕರಾದ ವೈ.ಎಸ್.ವಿ.ದತ್ತಾ, ಶ್ರೀರಾಮರೆಡ್ಡಿ, ಪತ್ರಕರ್ತ ದಿನೇಶ್ ಅಮಿನ್ ಮಟ್ಟು, ಲಲಿತಾನಾಯ್ಕ್ ಪ್ರಮುಖರು ಅನರ್ಹ ಶಾಸಕರ ನಡೆಯನ್ನು ಖಂಡಿಸಿದರು.
ಮೈತ್ರಿ ಸರ್ಕಾರದ ಪತನದ ಬಳಿಕ, ರಾಜಕೀಯ ಪ್ರಕ್ರಿಯೆ ಗಮನಿಸಿದರೆ, ಹೆದರಿಕೆ ಉಂಟಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪೂರ್ಣವಾಗಿ ಅರ್ಥಹೀನಗೊಳಿಸುವಂತ ಸಾಗಿದ್ದು, ಹಣವಂತರಿಗೆ ರಾಜಕೀಯ ಪ್ರಾಬಲ್ಯ ಮೆರೆಯುವ ಅವಕಾಶ ಹೆಚ್ಚಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








