ಪಾಟ್ನಾ
ಬಿಜೆಪಿ ರಾಷ್ಟ್ರೀಯತೆಯ ಘೋಷಣೆಯನ್ನು ತನ್ನ ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ದೇಶದ ಸಂಪೂರ್ಣ ಸರ್ಕಾರ ಹಾಗೂ ರಾಷ್ಟ್ರೀಯ ಆರ್ಥಿಕತೆ ಗುಜರಾತ್ ನ ಹತೋಟಿಗೆ ಸಿಲುಕಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿದೆ.
ಆಮ್ ಆದ್ಮಿ ಪಕ್ಷದ ಕಾರ್ಯಕಾರಿಣಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಹಾರದ ಪಕ್ಷದ ವ್ಯವಹಾರಗಳ ಉಸ್ತುವಾರಿ ಹಾಗೂ ಸಂಸದ ಸಂಜಯ್ ಸಿಂಗ್, ರಾಷ್ಟ್ರೀಯತೆಯನ್ನು ಬಿಜೆಬಿ ರಾಜಕೀಯ ಲಾಭಕ್ಕಾಗಿ ಮಾತ್ರ ಬಳಸಿಕೊಳ್ಳುತ್ತಿದೆಯಷ್ಟೇ ಎಂದು ಆರೋಪಿಸಿದರು.
ನರೇಂದ್ರ ಮೋದಿ ಅವರು ಮೂಲತಃ ಗುಜರಾತಿನವರು, ಗೃಹ ಸಚಿವ ಅಮಿತ್ ಶಾ ಕೂಡಾ ಅದೇ ರಾಜ್ಯದವರು. ದೊಡ್ಡ ಉದ್ಯಮಿಗಳಾದ ಅಂಬಾನಿ ಮತ್ತು ಅದಾನಿ ಕೂಡ ಗುಜರಾತ್ ಗೆ ಸೇರಿದವರಾಗಿದ್ದಾರೆ. ಮೋದಿ ಅವರು ರಾಷ್ಟ್ರೀಯತೆಗೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಲು ಗೃಹ ಸಚಿವ ಸ್ಥಾನಕ್ಕೆ ಅಮಿತ್ ಶಾ ಬದಲಿಗೆ ಬೇರೆ ರಾಜ್ಯದ ಸಂಸದರನ್ನು ಆಯ್ಕೆ ಮಾಡಬೇಕಿತ್ತು ಎಂದು ಸಿಂಗ್ ತಿಳಿಸಿದ್ದಾರೆ.
ಇಡೀ ಸರ್ಕಾರ ಮತ್ತು ರಾಷ್ಟ್ರೀಯ ಆರ್ಥಿಕತೆ ಗುಜರಾತ್ ಹಿಡಿತದಲ್ಲಿ ತಳ್ಳಲ್ಪಟ್ಟಿರುವಾಗ ಬಿಜೆಪಿ ಯಾವ ಬಗೆಯ ರಾಷ್ಟ್ರೀಯತೆಯ ಬಗ್ಗೆ ಮಾತನಾಡುತ್ತಿದೆ ಎಂದು ಅವರು ವ್ಯಂಗ್ಯವಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
