ಹೊಸಪೇಟೆ :
ತಾಲೂಕಿನ ಬೈಲುವದ್ದಿಗೇರಿ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಭಾನುವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಪ್ರಾಥಮಿಕ ಆರೋಗ್ಯ ಕೇಂದ್ರ ಗಾದಿಗನೂರು, ವಿಮ್ಸ್ ರಕ್ತ ಭಂಡಾರ ಬಳ್ಳಾರಿ. ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ರಕ್ತದಾನ ಶಿಬಿರಕ್ಕೆ ಸ್ಥಳೀಯ ವೈಧ್ಯಾಧಿಕಾರಿ ಡಾ.ದಿವ್ಯಶ್ರೀ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ರಕ್ತದಾನ ಮಾಡುವುದರಿಂದ ದೇಹದಲ್ಲಿ ಕೊಬ್ಬಿನಾಂಶ ಕಡಿಮೆ ಮಾಡಲು, ಹೃದಯಾಘಾತವನ್ನು ಶೇ.80ರಷ್ಟು ಜಾಸ್ತಿ ತಡೆಯಲು ಸಹಾಯಕವಾಗುತ್ತದೆ. ರಕ್ತದೊತ್ತಡ, ಸಕ್ಕರೆ ಖಾಯಿಲೆಗಳನ್ನು ನಿಯಂತ್ರಿಸುತ್ತದೆ. ಹೀಗಾಗಿ 18ರಿಂದ 60 ವರ್ಷ ವಯಸ್ಸಿನ ಪ್ರತಿಯೊಬ್ಬರೂ ರಕ್ತದಾನ ಮಾಡಬಹುದು ಎಂದರು.
ಇದೇ ವೇಳೆ ಕಾಕುಬಾಳು ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲೂ ಸಹ ರಕ್ತದಾನ ಶಿಬಿರ ನಡೆಯಿತು. 2 ಹಳ್ಳಿಗಳಿಂದ ಒಟ್ಟು 52 ಜನ ರಕ್ತದಾನ ಮಾಡಿದರು.ಈ ಸಂಧರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಎಚ್.ಮೂಕಪ್ಪ, ರೇವಯ್ಯಸ್ವಾಮಿ, ಮಾಜಿ ತಾ.ಪಂ.ಸದಸ್ಯ ಕೋರಿ ಪಕ್ಕೀರಪ್ಪ, ಗ್ರಾ.ಪಂ.ಸದಸ್ಯ ವಿ.ರಾಮಕೃಷ್ಣ, ಜಿ.ಎಚ್.ರೆಡ್ಡಿ, ವೈ.ಎರ್ರಿಸ್ವಾಮಿ, ರಾಮಲ್ಲಿ, ರಾಜೀವ, ಪಾಂಡುರಂಗ, ಅಂಬಿಕಾ, ಚೌಮ್ಯ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
