ಶಿಗ್ಗಾವಿ :
“ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ”, ಬರಗಾಲ ವಿದ್ದಾಗ ನೀರಿನ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಬರಗಾಲ ಮುಗಿದ ಮೇಲೆ ತಾಲೂಕಿನ ಅಧಿಕಾರಿಗಳು ಕೆಲಸ ಮಾಡುತ್ತಿದ್ದೀರಿ. ಇದು ನಿಮ್ಮ ಕಾರ್ಯವೈಖರಿಯೇ ? ಎಂದು ಶಾಸಕ ಬಸವರಾಜ ಬೊಮ್ಮಾಯಿ ತಾಲೂಕಿನ ಟಾಸ್ಕ್‍ಪೋರ್ಸ ಅಧಿಕಾರಿ ಸಯ್ಯದ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ತಾಪಂನ ಸಭಾ ಭವನದಲ್ಲಿ ನಡೆದ ಟಾಸ್ಕ್‍ಪೋರ್ಸ ಸಭೆಯಲ್ಲಿ ಜರುಗಿತು.
ಕಳೆದ ಸಭೆಯಲ್ಲಿಯೇ ತಿಳಿಸಿದಂತೆ ಎಲ್ಲ ಕಡೆಯು ಬೊರ ವೆಲ್ ಕೊರೆದಿದೆ ಅದರೆ ಪೈಪ್ ಲೈನ್ ಅಳವಡಿಕೆಯಾಗಿಲ್ಲ ಬರಗಾಲ ಮುಗಿದ ಮೇಲೆ ಪೈಪ್ ಲೈನ್ ಅಳವಡಿಸುತ್ತೀರಾ ? ಎಂದು ಹರಿಹಾಯ್ದ ಬೋಮ್ಮಾಯಿ ತಾಲೂಕಿನಲ್ಲಿ ಕೆಲಸಗಳು ತಡವಾಗಿ ಆಗುತ್ತವೆ ಅಂದರೆ ಅದರಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದರ್ಥ ಎಂದರು.
ಇನ್ನು ಬರಗಾಲ ವೀಕ್ಷಣೆಗೆ ಬಂದ ಮಂತ್ರಿಗಳು ಕೇವಲ ಬಂದು ಹೋಗುತ್ತಾರೆ ಆದರೆ ಬರಗಾಲ ನಿರ್ವಹಣೆಯ ಹಣದ ಬಿಡುಗಡೆ ಕುರಿತು ತಿರುಗಿಯೂ ನೋಡಿಲ್ಲ ಇದು ಆಡಳಿತ ಸರಕಾರದ ವೈಪಲ್ಯ, ಈ ಸಮ್ಮಿಶ್ರ ಸರಕಾರದಲ್ಲಿ ಕೆಲಸಗಳಾಗದೇ ಬಿಲ್‍ಗಳು ಪಾಸ್ ಆಗುತ್ತಿವೆ ಅಲ್ಲದೆ ಅಧಿಕಾರಗಳಿಗೆ ಹೇಳುವವರೆ ಇಲ್ಲವಾಗಿದೆ. ಮೇಲಾಧಿಕಾರಿಗಳಿಗೆ ತಳಮಟ್ಟದ ಅಧಿಕಾರಿಗಳು ಕಿಮ್ಮತ್ತು ನೀಡುತ್ತಿಲ್ಲ, ಅಧಿಕಾರಿಗಳಾದವರು ಒಳ್ಳೆಯ ಕೆಲಸ ಮಾಡಬೇಕಾದರೆ ಒಂದೆ ಕಾರಣ ಸಾಕು, ಮಾಡಬಾರದು ಎಂದರೆ ಅದಕ್ಕೆ ಹಲವಾರು ಕಾರಣಗಳು ಸಿಗುತ್ತವೆ.
ಸರಕಾರ ಸತ್ತಿಲ್ಲ ಜೀವಂತವಾಗಿದೆ ಎಂಬುದನ್ನು ತಿಳಿಯಲು ಬರಗಾಲದಲ್ಲಿ ಕಾರ್ಯನಿರ್ವಹಿಸುವ ಮೂಲಕ ಅರಿಯಬಹುದಾಗಿದೆ ಇದ್ಯಾವುದನ್ನೂ ಈ ಸರಕಾರ ಮಾಡಿಲ್ಲ ಎಂದು ರಾಜ್ಯ ಸಮ್ಮಿಶ್ರ ಸರಕಾರದ ವಿರುದ್ದ ಹರಿಹಾಯ್ದರು..
ಇನ್ನು ಕೆಂಗಾಪೂರ ಗ್ರಾಮದಲ್ಲಿ ತೀರ್ವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮ ಅಲ್ಲಿಯೇ ಕಾರ್ಯವನ್ನು ತಡವಾಗಿ ನಿರ್ವಹಿಸುತ್ತಿದ್ದೀರಿ, ಮುಖ್ಯವಾದ ನೀರಿನ ಸಮಸ್ಯೆ ಇರುವಲ್ಲಿ ಸಮಸ್ಯೆ ಬಗೆಹರಿಸದ ಅಧಿಕಾರಿಗಳು ಏತಕ್ಕೆ ಬೇಕು ? ಅಧಿಕಾರಿಗಳ ಹತ್ತಿರ ಯಾವುದಕ್ಕೂ ಉತ್ತರವಿಲ್ಲ ಆಡಳಿತ ಅರಾಜಕತೆಯಿಂದ ಕೂಡಿದೆ, ಮತ್ತು ಗಂಗೆನೂರಿನಲ್ಲಿ ನಳದ ನೀರು ಹಾಳಾಗುವುದನ್ನ ನಾನೇ ಕಂಡಿದ್ದೇನೆ ಸ್ಥಳೀಯ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಅದರ ಅರಿವೇ ಇಲ್ಲ, ಅಲ್ಲಿ ನೀರು ಸುಮ್ಮನೆ ಹಾಳಾಗುತ್ತಿದೆ ಎಂದರಲ್ಲದೆ ತಾಲೂಕಿನ ಪಿಡಿಓಗಳಿಗೆ ಉಪ ವಿಭಾಗಾಧಿಕಾರಿಗಳು ನೋಟಿಸ್ ನೀಡಿ, ಅಂದಾಗ ಅದರ ಬಗ್ಗೆ ಜನರಿಗೆ ತಿಳುವಳಿಕೆ ನೀಡುತ್ತಾರೆ ಪಿಡಿಓಗಳ ಮನೆಗಳಿಗೆ ಒಂದು ದಿನ ನೀರು ಬರದಿದ್ದಾಗಾ ಜನರ ಸಮಸ್ಯೆ ಅರ್ಥವಾಗುತ್ತದೆ ಕಾರ್ಯನಿರ್ವಾಹಕ ಅಧಿಕಾರಿಗೂ ಮತ್ತು ಪಿಡಿಓಗಳಿಗೂ ವ್ಯತ್ಯಾಸ ಇಲ್ಲದಾಗಿದೆ, ನಿಮ್ಮ ಹದ್ದ ಬಸ್ತಿನಲ್ಲಿ ಪಿಡಿಓಗಳು ಇಲ್ಲ ಎಂದು ಇಓ ಚಂದ್ರು ಪೂಜಾರಿ ಅವರಿಗೆ ಬೊಮ್ಮಾಯಿ ಮಾತಿನಲ್ಲಿಯೇ ತಿವಿದರು.
ಸಭೆಯಲ್ಲಿ ತಾಪಂ ಅದ್ಯಕ್ಷೆ ಪಾರವ್ವ ಆರೇರ, ಉಪಾದ್ಯಕ್ಷೆ ಪದ್ಮಾವತಿ ಪಾಟೀಲ, ಸವಣೂರ ಉಪವಿಭಾಗಾಧಿಕಾರಿ ಹರ್ಷಲ್ ಬೋಯಾರ್ ನಾರಾಯಣರಾವ್, ತಾಪಂ ಇಓ ಚಂದ್ರು ಪೂಜಾರ, ಜಿಪಂ ಕಾರ್ಯನಿರ್ವಾಹಕ ಅಭಿಯಂತರ ಸಯ್ಯದ್ ಸೇರಿದಂತೆ ತಾಲೂಕಿನ ಪಿಡಿಓಗಳು ಹಾಗೂ ಸಿಬ್ಬಂದಿ ಇದ್ದರು.