ಭೂಮಿಯ ಒಳಭಾಗದಿಂದ ಹೊರಹೊಮ್ಮಿದ ಕೆಂಪುಜ್ವಾಲೆ

ಚಳ್ಳಕೆರೆ

    ಬಹುವರ್ಷಗಳ ನಂತರ ಮಳೆಯಿಲ್ಲದೆ ಬೆಳೆಯಿಲ್ಲದೆ ಬರಡಾದ ಈ ಭಾಗದ ಭೂಮಿಯಲ್ಲೂ ಸಹ ಚಮತ್ಕಾರಗಳು ನಡೆಯಲು ಪ್ರಾರಂಭವಾಗಿದ್ದು, ಇದನ್ನು ಕಂಡ ರೈತರು ಗಾಬರಿಯಾಗಿದ್ದಾರೆ. 

    ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಮನಮೈನಹಟ್ಟಿ ಗ್ರಾಮದ ತಿಪ್ಪೇಸ್ವಾಮಿ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಅ.2ರ ಮಂಗಳವಾರ ಸಂಜೆ 4 ಗಂಟೆ ಸುಮಾರಿನಲ್ಲಿ ಜಮೀನ ಒಂದು ಭಾಗದಲ್ಲಿ ಭೂಮಿಯ ಒಳಭಾಗದಿಂದ ಕೆಂಪು ಜ್ಞಾಲೆಯೊಂದು ಹೊರಹೊಮ್ಮುತ್ತಿದ್ದನ್ನು ಕಂಡು ಗಾಬರಿಯಾಗಿ ಗ್ರಾಮದ ಜನರಿಗೆ ವಿಷಯ ತಿಳಿಸಿ ಇಲ್ಲಿನ ಪೊಲೀಸರಿಗೂ ಸಹ ಈ ಬಗ್ಗೆ ಮಾಹಿತಿ ನೀಡಿದ್ದಾನೆ.

    ಕೂಡಲೇ ಇಲ್ಲಿನ ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ, ನಾಯಕನಹಟ್ಟಿ ಪಿಎಸ್‍ಐ ಮೋಹನ್‍ಕುಮಾರ್ ಮುಂತಾದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಭೂಗರ್ಭ ಇಲಾಖೆಯ ಅಧಿಕಾರಿಗಳಿಗೂ ಸಹ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿದ ನಂತರ ಖಚಿತ ತೀರ್ಮಾನ ಕೈಗೊಳ್ಳಲು ಸಾಧ್ಯವೆಂದು ತಿಳಿದು ಬಂದಿದೆ. ಕೆಲವರು ಇದನ್ನು ಲಾವರಸ ಉಕ್ಕುತ್ತಿದ್ದು, ಭೂಮಿಯ ಒಳಭಾಗದಲ್ಲಿ ಉಷ್ಣಾಂಶ ಹೆಚ್ಚಿದಾಗ ಈ ರೀತಿಯಾಗುತ್ತದೆ ಎಂದಿದ್ಧಾರೆ.

    ಅ.2ರಂದು ಕಂಡ ಈ ಕೆಂಪುಜ್ವಾಲೆ ಕೇವಲ ಕೆಲವೇ ಹೊತ್ತು ಕಾಣಿಸಿಕೊಂಡಿದ್ದು, ಇದನ್ನು ಹಲವಾರು ವೀಕ್ಷಿಸಿದ್ದಾರೆ. ಮತ್ತೊಂದು ವಿಶೇಷವೆಂದರೆ ಸದರಿ ಜ್ವಾಲೆಯ ಪಕ್ಕದಲ್ಲೇ ವಿದ್ಯುತ್ ಕಂಬವೊಂದುವಿದ್ದು ಕಂಬದ ಕೆಳಭಾಗದ ಕಬ್ಬಿಣಿದ ರಾಡಿಗೂ ಸಹ ಜ್ವಾಲೆ ತಗುಲಿದೆ. ವಿದ್ಯುತ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದಾವಿಸಿ ಅಪಾಯವನ್ನು ಅರಿತು ಕೂಡಲೇ ಕಂಬವನ್ನು ಬದಲಾಯಿಸಿದ್ಧಾರೆ. ಭೂಮಿಯ ಒಳಭಾಗದಿಂದ ಬಂದ ಕೆಂಪು ಜ್ವಾಲೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈಗಾಗಲೇ ಭೂಗರ್ಭ ಇಲಾಖೆ ಹಿರಿಯ ಅಧಿಕಾರಿಗಳಿಗೆ ವರದಿ ಕಳುಹಿಸಿದ್ದು, ವರದಿ ಬಂದ ನಂತರ ಸ್ವಷ್ಟ ಕಾರಣ ತಿಳಿದು ಬರಲಿದೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap