ಬೆಂಗಳೂರು
ಮಾರಕಾಸ್ತ್ರಗಳಿಂದ ಕೊಚ್ಚಿ ಕಬಾಬ್ ವ್ಯಾಪಾರಿ ಉಮೇಶ್ ಕೊಲೆಗೈದ ದುಷ್ಕರ್ಮಿಗಳ ಸುಳಿವು ಪತ್ತೆಯಾಗಿದ್ದು ಅವರ ಬಂಧನಕ್ಕೆ ರಾಜಗೋಪಾಲನಗರ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.ಹೆಗ್ಗನಹಳ್ಳಿ ಕ್ರಾಸ್‍ನ ಬಳಿ ಭಾನುವಾರ ರಾತ್ರಿ 10ರ ವೇಳೆ ನಡೆದಿರುವ ಉಮೇಶ್ ಕೊಲೆ ಕೃತ್ಯದಲ್ಲಿ ಪತ್ನಿಯ ಕೈವಾಡವಿರುವ ಶಂಕೆ ಪೊಲೀಸ್ ತನಿಖೆಯಲ್ಲಿ ವ್ಯಕ್ತವಾಗಿದೆ.ಉಮೇಶ್(35) ಪತ್ನಿ ರೂಪ ಬೇರೊಬ್ಬರ ಜೊತೆ ಅನೈತಿಕ ಸಂಬಂಧ ಹೊಂದಿರುವುದೇ ಕೊಲೆ ಕಾರಣ ಎನ್ನುವುದು ಕಂಡುಬಂದಿದ್ದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಹೆಗ್ಗನಹಳ್ಳಿ ಕ್ರಾಸ್‍ನ ಬಳಿ ರಾತ್ರಿ 10ರ ವೇಳೆ ಏಕಾಏಕಿ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಉಮೇಶ್ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದರು ಕೆಲ ಸಮಯದಲ್ಲಿಯೇ ಕಿಶೋರ್ ಎಂಬಾತ ರೂಪ ಅವರ ಮೊಬೈಲ್‍ಗೆ ಕರೆಮಾಡಿ ನಿನ್ನ ಪತಿಯ ಕತೆ ಮುಗಿಯುತು ಇನ್ನು ಸಂತೋಷ್ ಕತೆ ಮುಗಿಸಿದರೆ ನೀನು ನನ್ನವಳು ಎಂದು ಹೇಳಿದ್ದಾನೆ.
ಈ ಮಾಹಿತಿ ತಿಳಿಯುತ್ತಿದ್ದಂತೆ ಕಿಶೋರ್ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಕೈಗೊಂಡ ಬೆನ್ನಲ್ಲೇ ಆತ ಪರಾರಿಯಾಗಿದ್ದಾನೆ ಸಂತೋಷ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ ಎಂದು ಡಿಸಿಪಿ ಶಶಿಕುಮಾರ್ ಅವರು ತಿಳಿಸಿದ್ದಾರೆ.
ಕಿಶೋರ್ ಜೊತೆ ಮೊದಲು ಸಲುಗೆಯಿಂದಿದ್ದ ರೂಪ ನಂತರ ಅಂತರ ಕಾಯ್ದುಕೊಂಡಿದ್ದರು ಇವರಿಬ್ಬರು ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ನಂತರ ರೂಪ ಸಂತೋಷ್ ಜೊತೆ ಸಲುಗೆಯಿಂದಿರುವುದು ಕಂಡುಬಂದಿದೆ .ರೂಪಾಳೇ ತನ್ನ ಪ್ರಿಯಕರರ ಜೊತೆ ಸೇರಿ ಅಣ್ಣನನ್ನು ಕೊಲೆಗೈದಿದ್ದಾಳೆ ಎಂದು ಉಮೇಶ್‍ನ ತಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ,ಈ ಸಂಬಂಧ ರಾಜಗೋಪಾಲನಗರ ಪೆಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.