ನಗರದಲ್ಲಿ ಬಿ ಎಸ್ ಪಿ ಇಂದ ಭರ್ಜರಿ ಪ್ರಚಾರ

ಹಾವೇರಿ :

     ಹಾವೇರಿ ಲೋಕಸಭಾ ಕ್ಷೇತ್ರದ ಬಿಎಸ್‍ಪಿ ಪಕ್ಷದ ಅಭ್ಯರ್ಥಿ ಎ,ಎ ಪಠಾಣ ,ಪಕ್ಷ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲೆಯ ಕಾಗಿನೆಲೆ,ಹಂಸಬಾವಿ,ಚಿಕ್ಕೆರೂರು ರಟ್ಟಿಹಳ್ಳಿ, ಹಿರೇಕೆರೂರ, ಮಾಸೂರ, ಕೊಟಾ ಹಲಗೇರಿ ಇನ್ನೂ ಅನೇಕ ಗ್ರಾಮಗಳಲ್ಲಿ ಬಿರುಸಿನ ಭರ್ಜರಿ ಪ್ರಚಾರ ಕೈಗೊಂಡರು.

      ಬಿಎಸ್ಪಿ ಬಿಎಸ್‍ಪಿ ಪಕ್ಷದ ಅಭ್ಯರ್ಥಿ ಎ,ಎ ಪಠಾಣ ಮಾತನಾಡಿ ನಾವು ಪ್ರಚಾರ ಕೈಗೊಂಡ ಎಲ್ಲ ಗ್ರಾಮಗಳಲ್ಲಿ ಬಿಎಸ್ಪಿ ಪಕ್ಷಕ್ಕೆ ಉತ್ತಮ ಸ್ಪಂದನೆ ದೊರುತ್ತಿದೆ. ಇಷ್ಟು ವರ್ಷ ರಾಜಕೀಯ ಮಾಡಿದ ನಾಯಕರು ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿದ್ದು,ಬಿಜೆಪಿ ಮತ್ತು ಕಾಂಗ್ರೇಸ್ ಉಭಯ ಪಕ್ಷಗಳ ನಾಯಕರುಗಳ ಕಾಲಹರಣದಿಂದ ಬೇಸತ್ತು ಹೋಗಿದ್ದಾರೆ.

       ಈ ಬಾರಿ ಉ.ಪ್ರ ಮಾಜಿಮುಖ್ಯಮಂತ್ರಿ ಅಕ್ಕ ಮಾಯಾವತಿಯವರ ಜನಪರ ಆಡಳಿತದ ಕೆಲಸಗಳನ್ನು ಮೆಚ್ಚಿ ಆನೆ ಗುರುತಿಗೆ ಮತದಾನ ಮಾಡಲು ಹಾಗೂ ಬೆಂಬಲ ನೀಡಲು ಸ್ವಯಂ ಪ್ರೇರಿತವಾಗಿ ಮುಂದಾಗುತ್ತಿದ್ದಾರೆ. ಒಂದು ಓಟು-ಒಂದು ರೂಪಾಯಿ ಎಂಬಂತೆ ಜನರು ಪಕ್ಷಕ್ಕೆ ಒಂದು ರೂಪಾಯಿ ನೀಡುವ ಮೂಲಕ ಬೆಂಬಲ ನೀಡುತ್ತಿದ್ದು, ಈ ಬಾರಿ ಜಯ ಗಳಿಸುವುದು ಖಚಿತ ಎಂದು ಎ,ಎ ಪಠಾಣ ವಿಶ್ವಾಸ ವ್ಯಕ್ತ ಪಡಿಸಿದರು.

     ಪಕ್ಷದ ಜಿಲ್ಲಾಧ್ಯಕ್ಷರಾದ ಅಶೋಕ ಮರೆಣ್ಣನವರ ಪಕ್ಷದ ಅಭ್ಯರ್ಥಿ ಎ,ಎ ಪಠಾಣ ಮತ ನೀಡಿ ಹಾವೇರಿ ಲೋಕಸಭಾ ಕ್ಷೇತ್ರ ಮಾದರಿ ಎಂಬಂತೆ ಕೆಲಸ ಮಾಡಲು ಅವಕಾಶ ನೀಡಿ ಎಂದು ಮತ ಯಾಚಿಸಿದರು. ಪ್ರಚಾರದಲ್ಲಿ ಬಿಎಸ್ಪಿ ಪಕ್ಷ ಮುಖಂಡರಾದ ವಿಜಯಕುಮಾರ ವಿರಕ್ತಮಠ.ಶಿವಕುಮಾರ ತಳವಾರ.ಶಂಭುಲಿಂಗಯ್ಯ ಹನಗೋಡಿಮಠ.ಅಬ್ದುಲ್‍ಖಾದರ ಧಾರವಾಡ, ,ನೀಲಕಂಠಪ್ಪ ಗುಡಗೂರ, ಎಂ.ಕೆ ಮಖಬೂಲ್.ನಾಗರಾಜ ಅಂಗಡಿ.ಅನ್ವರಸಾಬ ಚಿಮ್ಮಲಗಿ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link