ಬಳ್ಳಾರಿ
ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಜೆ.ಎಸ್.ಆಂಜನೇಯಲು ಅವರು ಪಕ್ಷದ ಕಾರ್ಯಕರ್ತರಾಗಿ ಕೆಲಸ ಮಾಡದೇ ಜಿಲ್ಲಾ ಉಸ್ತುವಾರಿ ಸಚಿವ ಡಿಕೆ.ಶಿವಕುಮಾರ ಅವರ ಕಲೆಕ್ಷನ್ ಏಜೆಂಟ್ ಮತ್ತು ಬ್ರೋಕರ್ ಎಂದು ಹೇಳುವ ಮೂಲಕ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚದ ಅಧ್ಯಕ್ಷೆ ಶಶಿಕಲಾ ಮೋಹನ್ ಅವರು ಸೋಮುವಾರ ಬಿಜೆಪಿ ಕಛೇರಿಯಲ್ಲಿ ಪ್ರಚಾರ ಸಮಿತಿಯ ಅಧ್ಯಕ್ಷ ಜೆ.ಎಸ್.ಆಂಜಿನೇಯಲು ವಿರುದ್ದ ತರಾಟೆಗೆ ತೆಗೆದುಕೊಂಡರು.
ಪಕ್ಷದ ರಾಜ್ಯ ಉಪಾಧ್ಯಕ್ಷ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಬಗ್ಗೆ ಹಗುರವಾಗಿ ಮಾತನಾಡಿದ್ದು ಖಂಡನೀಯ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಶ್ರೀರಾಮುಲು ಅವರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಹೊಂದಿಲ್ಲ ಎಂದರು. ಮತ್ತು ಅವರು ಬಳ್ಳಾರಿಯಲ್ಲಿ ಎಲ್ಲಾ ಕಛೇರಿಗೆ ಹೋಗಿ ಹಪ್ತಾ ವಸೂಲಿ ಮಾಡಿವ ಒಬ್ಬ ಬ್ರೋಕರ್ ಇದ್ದ ಹಾಗೆ ಎಂದು ವಿವರಿಸಿದರು.
ಅಂತೆಯೇ ಕನಕದುರ್ಗಮ್ಮ ದೇವಸ್ಥಾನದ ಬಳಿ ಇರುವ ಕಾಂಗ್ರೆಸ್ ಪಕ್ಷದ ಆಸ್ತಿ ಈಗ ಮ್ಯಾಕ್ಷ ಬಟ್ಟೆ ಶೋರೂಂ ಆಗಿದ್ದು. ಈ ವಿಷಯದಲ್ಲಿ ಅವರ ಪಕ್ಷದ ಮುಖಂಡರ ಮೇಲೆ ಆರೋಪ ಮಾಡಿದ ಜೆ.ಎಸ್.ಆಂಜನೇಯಲು ನಂತರ ಅವರ ಮನೆಗೆ ತೆರಳಿ ತಣ್ಣನೆಯ ಜ್ಯೂಸ್ ಕುಡಿದು ಸುಮ್ಮನಾಗಿರುವುದು ಇದರ ಹಿನ್ನಲೆ ಏನು? ಎಂದು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಪ್ರಶ್ನಿಸಿದರು. ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಈತ ನಡೆಸಿದ ಅವ್ಯೆವಾರಗಳ ಬಗ್ಗೆ ತನಿಖೆ ನಡೆಸಬೇಕು.
ನಗರದ ಅನೇಕ ಬಡಾವಣೆಗಳಿಗೆ ಕಾನೂನು ಬಾಹಿರವಾಗಿ ಅನುಮತಿ ನೀಡಿದ್ದು ಈಗ ಆ ಬಡಾವಣೆಗೆಳಿಗೆ ಅರ್ಹತೆ ಇಲ್ಲದ ಬಡಾವಣೆಗೆಳಾಗಿ ಉಳಿದಿವೆ. ಇದಕ್ಕೆ ಅನುಮತಿ ನೀಡುವಾಗ ಲಂಚವನ್ನು ಪಡೆದಿದ್ದಾರೆ ಎಂದು ಆರೋಪಿಸಿದರು. ಇದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಿದ್ದೇವೆ.
ಬುಡಾ ಕಚೇರಿಯ ಸರಕಾರಿ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆ ಮುದ್ರಣ ಮಾಡಿಸುವಲ್ಲಿ ಮಾಮೂಲಿ ಪಡೆದ ಈ ನಾಯಕ ಇಂತಹ ವಸೂಲಿ ನಾಯಕನಿಗೆ ನಾವು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದರು. ಅಲ್ಲದೇ ಪ್ರಚಾರ ಸಮಿತಿಯ ಅಧ್ಯಕ್ಷರಾದ ಜೆ.ಎಸ್.ಆಂಜನೇಯಲು ಪುಟ್‍ಬಾತ್ ರಾಜಕಾರಣಿ ಏಕ ವಚನದಲ್ಲಿ ಮಾತನಾಡುವ ಸಂಸ್ಕತಿ ಇಲ್ಲದ ನಾಲಿಗೆ ಇತನದ್ದು ಎಂದರು.
ಶ್ರೀರಾಮುಲು ಅವರ ವಿರುದ್ದ ಸ್ಪರ್ಧೆ ಮಾಡುವುದಾಗಿ ಮಾತನಾಡುವ ಆಂಜನೇಯಲು ನಗರ ಪಾಲಿಕೆಯ 39 ವಾರ್ಡಗಳಲ್ಲಿ ಯಾವುದನ್ನು ಆಯ್ದುಕೊಳ್ಳಲಿ ಅಲ್ಲಿ ನನ್ನ (ಶಶಿಕಲಾ) ವಿರುದ್ದ ಸ್ಪರ್ಧೆ ಮಾಡಿಗೆದ್ದು ನಂತರ ಶ್ರೀರಾಮುಲು ಅವರ ಬಗ್ಗೆ ಮಾತನಾಡಲಿ ಎಂದು ಸವಾಲೆಸೆದರು. ಈ ಸುದ್ದಿಗೋಷ್ಟಿಯಲ್ಲಿ ಮಾಜಿ ಮೇಯರ್ ಇಬ್ರಾಹಿಂ ಅವರು ಆಂಜಿನೇಯಲು ಅವರು ಕೆಎಸ್‍ಎಫ್‍ಸಿಗೆ 40 ಕೋಟಿ ರೂ ಪಂಗನಾಮ ಹಾಕಿದ್ದಾರೆ. ಈ ಬಗ್ಗೆ 2015ರಲ್ಲಿ ಲೋಕಯುಕ್ತರಲ್ಲಿ ಪ್ರಕರಣ ದಾಖಲಾಗಿದೆ. ಇಂತಹ ಬ್ರೋಕರ್ ಈಗ ರಾಷ್ಟ್ರಮಟ್ಟದ ನಾಯಕರ ಮೇಲೆ ಮಾತನಾಡದೇ ಬಾಯಿಯನ್ನು ಬಿಗಿ ಹಿಡಿಬೇಕು ಎಂದು ಎಚ್ಚರಿಕೆ ನೀಡಿದರು.
ಇತನ ಪ್ರಕರಣದಲ್ಲಿ ಆಂಜನೇಯಲು ಜೈಲು ಸೇರುವ ಪರಿಸ್ಥಿತಿ ಬಂದಿರುವುದರಿಂದ ಬಾಯಿಗೆ ಬಂದಹಾಗೆ ಮಾತನಾಡುತ್ತಾರೆ ಎಂದು ದಾಖಲಾತಿಯನ್ನು ತೋರಿಸುತ್ತಾ ವಿವರಿಸಿದರು. ಈ ಸಂದರ್ಭದಲ್ಲಿ ಮಾಜಿ ಮೇಯರ್ ಗೋವಿಂದರಾಜುಲು, ಪಕ್ಷದ ಮುಖಂಡ ಹನುಮಂತಪ್ಪ, ಸಂಜೆಯ ಬಟಗೇರಿ, ಸೇರಿದಂತೆ ಹಲವಾರು ಮುಖಂಡರು ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ