ಹರಪನಹಳ್ಳಿ
ಕೊಟ್ಟಿಗೆಯಲ್ಲಿ ಕಟ್ಟಿದ್ದ ಹೋರಿಕರ(ಎತ್ತು) ನಾಗರ ಹಾವು ಕಚ್ಚಿದ ಪರಿಣಾಮ ಸಾವನಪ್ಪಿದ ಘಟನೆ ತಾಲೂಕಿನ ಹಾರಕನಾಳು ದೊಡ್ಡತಾಂದಲ್ಲಿ ಶುಕ್ರವಾರ ಜರುಗಿದೆ.
ಗ್ರಾಮದ ಮಂಜ್ಯನಾಯ್ಕರವರಿಗೆ ಸೇರಿದ ಎತ್ತು(ಹೋರಿ)ಯಾಗಿದ್ದು, ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹೋರಿಗೆ ಗುರುವಾರ ರಾತ್ರಿ ನಾಗರ ಹಾವು ಕಚ್ಚಿದೆ, ಕೂಡಲೇ ಚಿಕಿತ್ಸೆ ನೀಡಿದರು ಫಲಕಾರಿಯಾಗದೆ ಶುಕ್ರವಾರ ರಾತ್ರಿ ಎಂಟು ಗಂಟೆಗೆ ಮೃತಪಟ್ಟಿದೆ.ಇತ್ತೀಚಿಗೆ ಖಾಸಗಿ ವ್ಯಕ್ತಿಯಿಂದ ಬಡ್ಡಿಯಂತೆ ಸಾಲ ಮಾಡಿ 1.5ಲಕ್ಷ ರೂ.ಗಳಿಗೆ ಖರೀದಿ ಮಾಡಿದ್ದರು, ಅಲ್ಲದೇ ಬಿತ್ತನೆ ಸಮಯದಲ್ಲಿ ಇನ್ನೂ ಜೋಡಿ ಎತ್ತು ಖರೀದಿಸಿ ವ್ಯವಸಾಯ ಮಾಡಲ್ಲ ಎಂದು ರೈತ ಮಂಜ್ಯ ನಾಯ್ಕ ಅಳಲು ತೊಡುತಿದ್ದಾರೆ. ಇಂತಹ ಹೋರಿ ಸಾವನ್ನಪ್ಪಿದ್ದರಿಂದ ಕುಟುಂಬದವರಿಗೆ ತುಂಬಲಾರದ ನಷ್ಟವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
