ಹರಪನಹಳ್ಳಿ
ತಾಲ್ಲೂಕಿನ ಮೈದೂರು ಗ್ರಾಮ ಪಂಚಾಯ್ತಿ ಉದ್ಯೋಗ ಖಾತ್ರಿಯ ಕೂಲಿ ಹಣ ನೀಡುತ್ತಿಲ್ಲ ಹಾಗೂ ಎನ್‍ಎಂಆರ್ ದಾಖಲಾತಿ ಮಾಡುತ್ತಿಲ್ಲ ಎಂದು ಆಗ್ರಹಿಸಿ ಕೂಲಿ ಕಾರ್ಮಿಕರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಗ್ರಾಮ ಪಂಚಾಯ್ತಿಗೆ ಶುಕ್ರವಾರ ಮುತ್ತಿಗೆ ಹಾಕಿದ ಕೂಲಿ ಕಾರ್ಮಿಕರು ಈ ಹಿಂದೆ ಕೂಲಿ ಕೆಲಸ ಮಾಡಿದಕ್ಕೆ ಪಿಡಿಓ ಮಂಜುನಾಥ ಹಣ ಪಾವತಿಸುತ್ತಿಲ್ಲ, ಎನ್‍ಎಂಆರ್ ದಾಖಲು ಮಾಡಬೇಕು ಎಂದರು ಉದ್ಠಟನದಿಂದ ಮಾತನಾಡುತ್ತಾರೆ ಕೂಲಿ ಹಣ ಪಾವತಿಸಿಲ್ಲ ಎಂದು ಈ ಹಿಂದೆ ಪ್ರತಿಭಟನೆ ಮಾಡಿದ್ದರೂ ಸೊಪ್ಪು ಹಾಕದ ಪಿಡಿಓಗೆ ದಿಕ್ಕಾರ ಹಾಕಿದರು.
ಸ್ಥಳಕ್ಕೆ ಆಗಮಿಸಿದ ಇಓ ಮಮತಾ ಗೌಡ ಕೂಲಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ, ನರೇಗ ಯೋಜನೆಯಲ್ಲಿ ಕೆಲಸ ಮಾಡಿದವರಿಗೆ ಕೂಲಿ ಹಣವನ್ನು ಪಾವತಿಸಲು ಶೀಘ್ರ ಕ್ರಮ ಜರುಗಿಸುತ್ತೇನೆ. ಇನ್ನೂ ಮುಂದೆ ಕೂಲಿ ಕಾರ್ಮಿಕರಿಗೆ ತೊಂದರೆಯಾಗದಂತೆ ಎಚ್ಚರಿಕ್ಕೆ ವಹಿಸುತ್ತೇವೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
