ವಚನ ಧರ್ಮ ಮಾನವೀಯ ಮೌಲ್ಯಗಳ ಆಗರ

ಹೊನ್ನಾಳಿ:

       ಜಗತ್ತಿನ ಎಲ್ಲ ಜೀವಿಗಳಿಗೂ ಒಳಿತನ್ನೇ ಬಯಸುವ ವಚನ ಧರ್ಮ ಮಾನವೀಯ ಮೌಲ್ಯಗಳ ಆಗರವಾಗಿದೆ ಎಂದು ಸಾಹಿತಿ ಎಸ್.ಟಿ. ಶಾಂತಗಂಗಾಧರ್ ಹೇಳಿದರು.

       ತಾಲೂಕಿನ ಯಕ್ಕನಹಳ್ಳಿ ಗ್ರಾಮದ ಶ್ರೀ ಬೀರಲಿಂಗೇಶ್ವರ ವಿದ್ಯಾ ಸಂಸ್ಥೆಯಲ್ಲಿ ತಾಲೂಕು ಕಸಾಪ ವತಿಯಿಂದ ಸೋಮವಾರ ಹಮ್ಮಿಕೊಂಡ “ಶ್ರೀಮತಿ ಶ್ರೀ ಗುರುನಂಜಪ್ಪ, ಶ್ರೀಮತಿ ಶ್ರೀ ಗೌಡ್ರ ಹನುಮಂತಪ್ಪ, ಶ್ರೀಮತಿ ಪಂಕಜ, ಶ್ರೀ ಶರತ್‍ಕುಮಾರ್ ಎಸ್. ಪಾಟೀಲ್ ಹಾಗೂ ಶ್ರೀಮತಿ ಕೆಂಚಮ್ಮ ಕುಂದೂರು ಗೌಡರ ಹನುಮಂತಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ”ದಲ್ಲಿ “ಅಕ್ಕಮಹಾದೇವಿ ಹಾಗೂ ಬಸವಣ್ಣನವರ ವಚನಗಳು” ಎಂಬ ವಿಸಯದ ಬಗ್ಗೆ ಅವರು ಉಪನ್ಯಾಸ ನೀಡಿದರು.ದೇಹದ ನಿರಾಕರಣೆಯನ್ನು ಕಲಿಸಿದ್ದು ವಚನ ಧರ್ಮ.

       ಮನುಷ್ಯನ ಅಹಮಿಕೆಯನ್ನು ತುಳಿದು, ಬದುಕನ್ನು ಸಾರ್ಥಕಗೊಳಿಸಿಕೊಳ್ಳುವುದನ್ನು ಕಲಿಸಿದ ಧರ್ಮ ವಚನ ಧರ್ಮ. ಜನರ ಆಶಯಗಳಿಗೆ ಪ್ರಮಾಣ ಕೊಡುವ ಮಾಧ್ಯಮ ವಚನ ಧರ್ಮ. ಅತ್ಯದ್ಭುತ ಆರ್ಥಿಕ ಸಮಾನತೆ ಸಮಾನತೆ ತಂದಿದ್ದು ವಚನ ಧರ್ಮ. ಅಂಥ ಉದಾತ್ತ ಚಿಂತನೆಯ ವಚನ ಧರ್ಮ ಇಂದು ಸಮಾಜದಲ್ಲಿ ತೀರಾ ಕೆಳ ಹಂತ ತಲುಪಿರುವುದು ಖೇದಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ಅಪರೂಪದ ಮನುಷ್ಯ ಸಂಬಂಧಗಳನ್ನು ಕಲಿಸಿದ ಧರ್ಮ ವಚನ ಧರ್ಮ. ಕನ್ನಡ ಭಾಷೆಯಲ್ಲಿ ಸುಮಾರು 180ಕ್ಕೂ ಅಧಿಕ ಸಂಬಂಧ ವಾಚಕಗಳಿವೆ. ಆದರೆ, ಇಂದಿನ ದಿನಗಳಲ್ಲಿ ಎಲ್ಲಾ ಸಂಬಂಧಗಳೂ ಮಾಯವಾಗುತ್ತಿವೆ. “ಅಂಕಲ್”, “ಆಂಟಿ” ಸರ್ವಸ್ವ ಆಗಿಬಿಟ್ಟಿವೆ ಎಂದು ವಿಷಾದಿಸಿದರು.

      ಅನನ್ಯ ಸಾಮಾಜಿಕ ಚಿಂತನೆಯ ಮೇಲೆ ಸಮಾಜವನ್ನು ಕಟ್ಟಿದ ಮಹಾನುಭಾವರು ಕ್ರಾಂತಿಯೋಗಿ ಬಸವಣ್ಣ. ಹಾಗಾಗಿ, ಅವರು ಇಡೀ ಜಗತ್ತಿಗೇ ಅಣ್ಣನ ಸಮಾನ. ಅದೇ ರೀತಿ, ಅಂದಿನ ಸಮಾಜದಲ್ಲಿ ಹೆಣ್ಣಿಗೆ ಯಾವ ಸ್ಥಾನಗಳೂ ಇಲ್ಲದಿರುವಾಗ ಬಸವಣ್ಣನವರು ಜಾರಿಗೆ ತಂದ ಸ್ತ್ರೀ ಸಮಾನತೆಯಿಂದಾಗಿ ಧಾರ್ಮಿಕ ಕ್ಷೇತ್ರದಲ್ಲಿ ಅನುಪಮ ಸಾಧನೆ ಮಾಡುವ ಮೂಲಕ ಅಕ್ಕಮಹಾದೇವಿ ಜಗತ್ತಿನ ಗಮನ ಸೆಳೆದಿದ್ದಾರೆ. ಲೌಕಿಕ, ಸಾಂಸ್ಕøತಿಕ, ಆರ್ಥಿಕ ಆಲೋಚನೆಯಿಂದ ಧಾರ್ಮಿಕ ಆಲೋಚನೆಯತ್ತ ಹೊರಳಿದ ಮಹಾಶರಣೆ ಅಕ್ಕಮಹಾದೇವಿ ವಚನ ಧರ್ಮದ ಮಹಾನ್ ಪ್ರತಿಪಾದಕರಾಗಿದ್ದಾರೆ ಎಂದು ವಿವರಿಸಿದರು.

       ದತ್ತಿ ದಾನಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕುಂದೂರು ಜಿ. ಹನುಮಂತಪ್ಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಯಕ್ಕನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಬಿ. ಬಸವರಾಜಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದತ್ತಿ ದಾನಿ, ಶಿಮುಲ್ ಮಾಜಿ ಅಧ್ಯಕ್ಷ ಕುಂದೂರು ಡಿ.ಜಿ. ಷಣ್ಮುಖ ಪಾಟೀಲ್, ತಾಲೂಕು ಕಸಾಪ ಅಧ್ಯಕ್ಷ ಕತ್ತಿಗೆ ಗಂಗಾಧರಪ್ಪ, ಹತ್ತೂರು ಜಯಪ್ಪ, ಬಿ. ಆಂಜನೇಯ ಇತರರು ಮಾತನಾಡಿದರು. ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.

        ಶ್ರೀ ಬೀರಲಿಂಗೇಶ್ವರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಿ. ಕರಿಬಸಪ್ಪ, ಎಸ್‍ಡಿಎಂಸಿ ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್. ರುದ್ರಾನಾಯ್ಕ, ಯಕ್ಕನಹಳ್ಳಿ ಗ್ರಾಪಂ ಸದಸ್ಯೆ ಶಶಿಕಲಾ ಅಶೋಕ್, ಮಾಜಿ ಸದಸ್ಯ ಎಸ್. ಬಸವರಾಜಪ್ಪ, ಮುಖಂಡ ಟಿ.ಎಸ್. ಅಶೋಕ್, ತಾಲೂಕು ಕಸಾಪ ಕಾರ್ಯದರ್ಶಿ ಕೆ.ಜಿ. ಕರಿಬಸಪ್ಪ, ಶೇಖರಪ್ಪ, ಕೋಶಾಧ್ಯಕ್ಷ ಬಿ.ಎನ್. ಮಹೇಶ್ವರಪ್ಪ, ಮಾಜಿ ಅಧ್ಯಕ್ಷ ಎಂ.ಎಸ್. ರೇವಣಪ್ಪ, ಎಂ.ಎಸ್. ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಯು.ಎನ್. ಸಂಗನಾಳಮಠ, ಶ್ರೀ ಬೀರಲಿಂಗೇಶ್ವರ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕರಾದ ಜಿ.ಬಿ. ಲಿಂಗೇಶ್, ಬಿ.ಸಿ. ಕರಿಗೌಡರ್, ಶಿಕ್ಷಕ ಎಚ್.ಎಂ. ಜಯದೇವಯ್ಯ, ನಿವೃತ್ತ ಶಿಕ್ಷಕ ಲೋಕೇಶಪ್ಪ, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

    ತಾಲೂಕು ಕಸಾಪ ವತಿಯಿಂದ ಹೊನ್ನಾಳಿಯಲ್ಲಿ ನಿರ್ಮಾಣಗೊಳ್ಳಲಿರುವ “ಕನ್ನಡ ಭವನ”ಕ್ಕೆ 50 ಸಾವಿರ ರೂ.ಗಳನ್ನು ನೀಡುವುದಾಗಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕುಂದೂರು ಜಿ. ಹನುಮಂತಪ್ಪ ವಾಗ್ದಾನ ಮಾಡಿದರು.

      ದತ್ತಿ ದಾನಿಗಳಾದ ಕುಂದೂರು ಜಿ. ಹನುಮಂತಪ್ಪ, ಕುಂದೂರು ಡಿ.ಜಿ. ಷಣ್ಮುಖ ಪಾಟೀಲ್ ಮತ್ತು ಉಪನ್ಯಾಸ ನೀಡಿದ ಸಾಹಿತಿ ಎಸ್.ಟಿ. ಶಾಂತಗಂಗಾಧರ್ ಅವರನ್ನು ತಾಲೂಕು ಕಸಾಪ ಅಧ್ಯಕ್ಷ ಕತ್ತಿಗೆ ಗಂಗಾಧರಪ್ಪ ಸನ್ಮಾನಿಸಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap