ಹೊಸಪೇಟೆ:
ಸಮೀಪದ ಮಲಪನಗುಡಿ ತಾಂಡದ ಬಳಿ ಹಾದು ಹೋಗಿರುವ ತುಂಗಭದ್ರಾ (ಎಲ್ಎಲ್ಸಿ) ಕಾಲುವೆಯಲ್ಲಿ ಕಾರೊಂದು ಉರುಳಿ ಬಿದ್ದು, ಚಾಲಕ ನಾಪತ್ತೆಯಾದ ಘಟನೆ ಸೋಮವಾರ ರಾತ್ರಿ ನಡೆದಿದೆ. ಕೆಎ-53,ಎನ್-6613 ನಂಬರ್ಇಟಿಎಸ್ ಕಂಪನಿಯ ಕಾರು ಕಾಲುವೆಯಲ್ಲಿ ಮುಗಿಚಿ ಬಿದ್ದಿದೆ. ಅಗ್ನಿಶಾಮಕ ಸಿಬ್ಬಂದಿ, ನುರಿತ ಈಜು ಪಟುಗಳ ಸಹಾಯದಿಂದ ಪೊಲೀಸ್ರು ಕಾರ್ಯಾಚರಣೆ ನಡೆಸಿ ಕಾರನ್ನು ಕಾಲುವೆಯಿಂದ ಹೊರ ತಗೆದಿದ್ದಾರೆ. ಆದರೆ, ಕಾರಿನಲ್ಲಿ ಯಾವುದೇ ಮೃತ ದೇಹ ಪತ್ತೆಯಾಗಿಲ್ಲ. ಕಾರು ಚಾಲಕ ಅಥಾವ ಮಾಲೀಕ ಯಾರೆಂಬುದಾಗಲಿ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ