ಹಾವೇರಿ:
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಬದುಕಿನ ಜೊತೆ ಆಟವಾಡುತ್ತಿದ್ದು, ಇಂತಹ ಭೀಕರ ಬರಗಾಲದಲ್ಲಿಯೂ ರೈತರ ಬಗ್ಗೆ ಕಾಳಜಿ ತೊರುತ್ತಿಲ್ಲ ಎಂದು ಸರ್ಕಾರಗಳ ರೈತ ವಿರೋಧಿ ನೀತಿಯನ್ನು ಹೋರಾಟದ ಮೂಲಕ ಖಂಡಿಸಿಲು ರೈತರು ಮುಂದಾಗಬೇಕು ಎಂದು ಉತ್ತರ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಹನಮಂತಪ್ಪ ದೀವಿಗಿಹಳ್ಳಿ ಹೇಳಿದರು.
ನಗರದ ಮುರುಘರಾಜೇಂದ್ರ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ ಹಾವೇರಿ ತಾಲೂಕ ಘಟಕ ಉದ್ಘಾಟನೆ ನೇರವೇರಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಸತತವಾಗಿ ಬರಗಾಲ ಆವರಿಸಿದೆ. ರಾಜ್ಯ ಸರ್ಕಾರ ಸಾಲಮನ್ನಾ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಅದಕ್ಕೆ ಸ್ಪಷ್ಟವಾದ ನಿಯಮ ಹೇಳುತ್ತಿಲ್ಲ. ಇದರಿಂದ ರೈತರು ಸಾಲಮನ್ನಾ ವಿಷಯವಾಗಿ ಗೊಂದಲದಲ್ಲಿ ಇದ್ದಾರೆ.
ಮಾನ್ಯ ಮುಖ್ಯಮಂತ್ರಿಗಳು ರೈತರ ಪರವಾಗಿ ಇದ್ದಾರೆ ಎಂಬುವುದಾದರೆ ರೈತರಿಗೆ ಸ್ಪಷ್ಟ ಮಹಿತಿ ನೀಡಿ ರೈತರು ನೆಮ್ಮದಿಯ ಬದುಕಿಗೆ ನೆರವಾಗಬೇಕು. ಕೇಂದ್ರ ಸರ್ಕಾರ ರೈತರ ನೆರವಿಗೆ ಧಾವಿಸಿ ರೈತರ ಸಂಪೂರ್ಣ ಸಾಲಮನ್ನಾ ಮಾಡವ ಕಾಯಕ ಮಾಡಿದರೆ ರೈತರ ಬಗ್ಗೆ ಕಾಳಜಿ ಇದೆ ಎಂದು ಗೊತ್ತಾಗುತ್ತದೆ. ಪ್ರಧಾನ ಮಂತ್ರಿಗಳು ಬಾಯಿ ಮಾತಿನಿಂದ ಮಾತನಾಡಿದರೆ ಸಾಲದು ಕೊಡಲೇ ರೈತರ ನೆರವಿಗೆ ಬರಬೆಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ರೈತರು ಸಂಘಟನಾತ್ಮಕ ಮನೋಭಾವನೆ ಬೆಳಿಸಿಕೊಳ್ಳಬೇಕು ಎಂದು ಹನಮಂತಪ್ಪ ದೀವಿಗಿಹಳ್ಳಿ ಹೇಳಿದರು. ನಂತರ ಮಾತನಬಾಡಿದ ರಾಜ್ಯ ಪ್ರ.ಕಾ ರಾಜಶೇಖರ ದೂದಿಹಳ್ಳಿ ಜಿಲ್ಲೆಯ ಎಲ್ಲ ತಾಲೂಕಿನಲ್ಲಿಯೂ ಘಟಕಗಳನ್ನು ರಚನೆ ಮಾಡಿ ಯಾವುದೇ ನಮ್ಮ ರೈತರಿಗೆ ಅನ್ಯಾಯವಾದರೆ ಹೋರಾಟಕ್ಕೆ ಸಜ್ಜಾಗಬೇಕು.
ಅಂದಾಗ ಸರ್ಕಾರಗಳು ಹಾಗೂ ಅಧಿಕಾರಿಗಳು ರೈತರ ನೆರವಿಗೆ ಬರುತ್ತಾರೆ. ಸಂಘಟನೆ ಕೇವಲ ಹುದ್ದೆ ನೀಡುವುದಲ್ಲ ಅದರಿಂದ ರೈತರಿಗೆ ಅನಕೂಲವಾಗಬೇಕು. ಈ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ತಾವುಗಳು ತಮ್ಮ ಜವಾಬ್ದಾರಿಗಳನ್ನು ನಿಷ್ಠೆಯಿಂದ ಮಾಡಬೇಕು ಎಂದು ಸಲಹೆ ನೀಡಿದರು. ತಾಲೂಕ ಅಧ್ಯಕ್ಷರಾಗಿ ಪಕ್ಕೀರಗೌಡ ಗಾಜಿಗೌಡ್ರ,ಗೌರವಾಧ್ಯಕ್ಷ ಶಿವಾನಂದಪ್ಪ ಮತ್ತಿಹಳ್ಳಿ.
ಕಾರ್ಯಾಧ್ಯಕ್ಷ ತೋಟಪ್ಪ ಹೊಸಳ್ಳಿ.ಉಪಾಧ್ಯಕ್ಷ ಬಸಪ್ಪ ಮೂಲಿಮನಿ.ಪ್ರ.ಕಾ ಮಾಲತೇಶ ಬಡಿಗೇರ.ಸ.ಕಾ.ನಾಗಪ್ಪ ರಾಮಜ್ಜನವರ .ಕುಮಾರ ಹರಮಗಟ್ಟಿ.ಸದಸ್ಯರಾಗಿ ಮಂಜುನಾಥ ಹಿರೇಮಠ. ಪ್ರಕಾಶ ಬೂಸನಗೌಡ್ರ.ಗದಿಗೆಪ್ಪ ಹಡಪದ.ಮಮಹೇಶ ಮಲ್ಲಾಡದ.ದುರಗಪ್ಪ ಹರಿಜನ. ಷಣ್ಮುಖಪ್ಪ ಗಿರ್ಜಿ.ಮಾಲತೇಶ ಮಣ್ಣೂರ.ಜಗದೇಶ ಕೋಳೂರ.ಸಿದ್ದಪ್ಪ ಮಲ್ಲಪ್ಪನವರ ತಾಲೂಕ ಘಟಕದ ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಫಕ್ಕಿರೇಶ ಡಿ ಕಾಳಿ.ಶ್ರೀಮತಿ ಸರೋಜಮ್ಮ ಕರ್ಜರಿ.ಶ್ರೀಮತಿ ಗಿರಿಜಮ್ಮ ಕಾಸಂಭಿ.ಫಕ್ಕಿರೇಶ ಮಲಗುಂದ.ರಾಮನಗೌಡ ತರ್ಲಗಟ್ಟ.ಜಗದೇಶ ಕುಸಗೂರ ರೈತರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ