ಕಾಶ್ಮೀರದಿಂದ ಆಪಲ್ ಖರೀದಿಗೆ ಮುಂದಾದ ಕೇಂದ್ರ ಸರ್ಕಾರ.!

ನವದೆಹಲಿ

        ಜಗತ್ತಪ್ರಸಿದ್ಧ ಕಾಶ್ಮೀರದ ಸೇಬನ್ನು  ನೇರವಾಗಿ ಖರೀದಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಸರ್ಕಾರ ನಡೆಸುತ್ತಿರುವ ನ್ಯಾಷನಲ್ ಅಗ್ರಿಕಲ್ಚರ್ ಕೋ-ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ ಆಫ್ ಇಂಡಿಯಾ ಮೂಲಕ ಖರೀದಿಸಲು ನಿರ್ಧರಿಸಲಾಗಿದೆ.

   ಈ ಪ್ರಕ್ರಿಯೆ ಡಿ.15ರಿಂದ ಪ್ರಾರಂಭವಾಗಲಿದೆ.ತಾವು ಬೆಳೆದು ಸೇಬು ಹಣ್ಣುಗಳನ್ನು ಮಾರಾಟ ಮಾಡಬೇಡಿ ಎಂದು ಉಗ್ರರು ರೈತರಿಗೆ ಬೆದರಿಕೆ ಹಾಕಿರುವ ಕಾರಣ ಸರ್ಕಾರವು ಈ ನಿರ್ಧಾರಕ್ಕೆ ಬಂದಿದೆ. ಪರಿಚ್ಛೇದ 370 ರದ್ದಾದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನವನ್ನೂ ಹಿಂಪಡೆಯಲಾಗಿತ್ತು. ಜೊತೆಗೆ ಅವುಗಳನ್ನು ಕೇಂದ್ರಾಡಳಿತ ಪ್ರದೇಶವಾಗಿ ವಿಂಗಡಣೆ ಮಾಡಲಾಗಿತ್ತು. ಇದಕ್ಕೇ ಕೋಪಗೊಂಡಿರುವ ಪಾಕಿಸ್ತಾನವು ರೈತರಿಗೆ ಅವರು ಬೆಳೆದ ಸೇಬು ಹಣ್ಣುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವಂತಿಲ್ಲ ಎಂದು ಬೆದರಿಕೆ ಹಾಕಿತ್ತು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link