ಕೇಂದ್ರ ಸರ್ಕಾರದ ಆಯವ್ಯಯ ಜನವಿರೋಧಿ ನೀತಿಗಳಿಂದ ಕೂಡಿದೆ : ದಿನೇಶ್‍ಗುಂಡೂರಾವ್

ಚಳ್ಳಕೆರೆ/ಬೆಂಗಳೂರು :

    ಎರಡನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಎನ್‍ಡಿಎ ನೇತೃತ್ವದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸರ್ಕಾರದ ಅವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಮಂಡಿಸಿದ ಬಜೆಟ್‍ನಲ್ಲಿ ಯಾವುದೇ ವಿಶೇಷತೆ ಇಲ್ಲ. ಕೇಂದ್ರ ಸರ್ಕಾರ ನಿರುದ್ಯೋಗಿ ನಿವಾರಣೆ, ಕೈಗಾರಿಕೆ ಅಭಿವೃದ್ದೀಕರಣ, ರೈತರಿಗೆ ನೆರವಾಗುವ ನಿರ್ಧಿಷ್ಟ ಯೋಜನೆ ರೂಪಿಸಿಲ್ಲ, ಕಳೆದ ಹಲವಾರು ದಶಕಗಳಿಂದ ಕೇಂದ್ರ ಸರ್ಕಾರದ ಅಧೀನದಲ್ಲಿದ್ದ ಜೀವವಿಮೆ, ಬಿಎಸ್‍ಎನ್‍ಎಲ್, ರೈಲ್ವೆ, ಏರ್ ಇಂಡಿಯಾ ಮುಂತಾದ ಕೇಂದ್ರ ಸೌಮ್ಯದ ಸಂಸ್ಥೆಗಳನ್ನು ಖಾಸಗೀಕರಣಕ್ಕೆ ವರ್ಗಾಯಿಸುವ ಉದ್ದೇಶ ಕೇಂದ್ರ ಸರ್ಕಾರ ಹೊಂದಿದೆ ಎಂದು ರಾಜ್ಯ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಕೇಂದ್ರ ಸರ್ಕಾರದ ಪ್ರಸ್ತುತ ವರ್ಷದ ಆಯವ್ಯಯದ ಬಗ್ಗೆ ಟೀಕಾಪ್ರಹಾರ ನಡೆಸಿದರು.

    ಅವರು, ಶನಿವಾರ ಖಾಸಗಿ ಕಾರ್ಯನಿಮಿತ್ತ ಮೊಳಕಾಲ್ಮೂರಿಗೆ ಭೇಟಿ ನೀಡಿ ವಾಪಾಸ್ ಬರುವಾಗ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಶಾಸಕ ಡಿ.ಸುಧಾಕರವರ ಸಮ್ಮುಖದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸರ್ಕಾರ ಆಯವ್ಯಯದ ಬಗ್ಗೆ ಅಸಮದಾನ ವ್ಯಕ್ತ ಪಡಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಜನಪರ ಯೋಜನೆಗಳಿಗೆ ಹಣ ನೀಡುತ್ತಿಲ್ಲ.

    ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದಗಳ ಅಭಿವೃದ್ಧಿಯ ಬಗ್ಗೆ ಎರಡೂ ಸರ್ಕಾರಕ್ಕೂ ಯಾವುದೇ ಕಾಳಜಿ ಇಲ್ಲ. ಪ್ರಧಾನ ಮಂತ್ರಿ ನರೇಂದ್ರಮೋದಿ ಸಾರ್ವಜನಿಕ ಸಭೆಗಳಲ್ಲಿ ಹೇಳುವ ಯಾವುದೇ ಭರವಸೆ ಇದುವರೆಗೂ ಈಡೇರಿಲ್ಲ. ಈಗಾಗಲೇ ಕೇಂದ್ರ ಸರ್ಕಾರ ರಿಜರ್ವ ಬ್ಯಾಂಕ್‍ನಲ್ಲಿದ್ದ ಸುಮಾರು ಒಂದು ಲಕ್ಷ ಕೋಟಿ ಹಣವನ್ನು ಪಡೆದು ಬಳಸಿದೆ. ಇದರಿಂದ ಕೇಂದ್ರ ಸರ್ಕಾರದಲ್ಲಿ ಅಭಿವೃದ್ಧಿ ಕೈಗೊಳ್ಳಲು ಹಣಕಾಸಿನ ತೊಂದರೆ ಉಂಟಾಗಿದೆ.

   ರಾಜ್ಯದಲ್ಲೂ ಸಹ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸರ್ಕಾರ ಜನಹಿತ ಕಾರ್ಯಗಳನ್ನು ಮರೆತು ರಾಜಕೀಯದಲ್ಲಿ ತೊಡಗಿದೆ. ಮಂತ್ರಿಮಂಡಲ ವಿಸ್ತರಣೆ, ಯಾರಿಗೆ ಸಚಿವ ಸ್ಥಾನ ನೀಡಬೇಕಂಬ ಚರ್ಚೆಗೆ ಆದ್ಯತೆಯಾಗಿದೆ. ಕಳೆದ ಆರು ತಿಂಗಳಿನಿಂದ ರಾಜ್ಯದ ಅಭಿವೃದ್ಧಿಗ ಅದೋಗತಿಗಿಳಿದಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರವೇ ಗ್ರಾಮೀಣಾಭಿವೃದ್ಧಿ ಯೋಜನೆಯನ್ನು ಸಹ ಸ್ಥಗಿತಗೊಳಿಸುವುದರಲ್ಲಿ ಅನುಮಾನವಿಲ್ಲವೆಂದರು.

   ಕಳೆದ ಹಲವಾರು ವರ್ಷಗಳಿಂದ ಜನರ ಸೇವೆಯನ್ನು ಸಲ್ಲಿಸುತ್ತಿದ್ದ ಬಿಎಸ್‍ಎನ್‍ಎಲ್ ಸ್ಥಗಿತಗೊಳಿಸುವ ಉದ್ದೇಶದಿಂದ ಪ್ರಧಾನ ಮಂತ್ರಿಯವರ ದುರುದ್ದೇಶ ಅಡಗಿದೆ. ಅಂಬಾನಿಯವರ ಜಿಯೋ ಸಹಕರಿಸಲು ಬಿಎಸ್‍ಎನ್‍ಎಲ್‍ನ್ನು ಸ್ಥಗಿತಗೊಳಿಸುವ ಹುನ್ನಾರ ಮಾಡುತ್ತಿದ್ಧಾರೆ. ಕೇಂದ್ರ ಸರ್ಕಾರ ಖಾಸಗೀಕರಣದತ್ತ ಹೆಚ್ಚು ಗಮನ ನೀಡುತ್ತಿದೆ ಎಂದು ಆರೋಪಿಸಿದರು.

   ಕಳೆದ ಸಾಲಿನ ಮಾಜಿ ಮುಖ್ಯಮಂತ್ರಿ ನೇತೃತ್ವದ ಸರ್ಕಾರದ ಅನೇಕ ಯೋಜನೆಗಳು ಇಂದು ಹಣವಿಲ್ಲದೆ ತಟಸ್ಥವಾಗಿವೆ. ರಾಜ್ಯದ ಯಾವುದೇ ಭಾಗದಲ್ಲಿ ವಸತಿ ನಿರ್ಮಾಣವಾಗುತ್ತಿಲ್ಲ. ವಸತಿ ಯೋಜನೆಯ ಬಗ್ಗೆ ಸಂಬಂಧಪಟ್ಟ ಸಚಿವರೇ ಮೌನಕ್ಕೆ ಶರಣಾಗಿದ್ಧಾರೆ. ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ. ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಜನರಿಗೆ ನೀಡಿದ ಸರ್ಕಾರದ ಚೆಕ್‍ಗಳು ಹಣವಿಲ್ಲದೆ ವಾಪಾಸ್ ಆಗಿವೆ ಇದು ರಾಜ್ಯ ಸರ್ಕಾರದ ದಿವಾಳಿತನವನ್ನು ತೋರುತ್ತಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಾದ ಜನೋಪಯೋಗಿ ಕಾರ್ಯಕ್ರಮಗಳು ಈ ಸರ್ಕಾರದಲ್ಲಿ ಕಣ್ಮರೆಯಾಗಿವೆ.

    ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅನುಷ್ಠಾನಗೊಳಿಸಲಾದ ನೂರಾರು ಕಾಮಗಾರಿಗಳನ್ನು ಪೂರ್ಣಗೊಳಿಸಲು ಸರ್ಕಾರಕ್ಕೆ ಆಸಕ್ತಿಯೂ ಇಲ್ಲ, ಹಣವೂ ಇಲ್ಲ. ಇದು ಪ್ರಸ್ತುತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರದ ದುಸ್ಥಿತಿ ರಾಜ್ಯದ ಜನತೆ ಈ ಸರ್ಕಾರದ ಬಗ್ಗೆ ಈಗಾಗಲೇ ನಿರಾಶಗೊಂಡಿದ್ಧಾರೆಂದರು

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link