ಬೆಂಗಳೂರು
ಪೊಲೀಸರಂತೆ ಸಮವಸ್ತ್ರ ಧರಿಸಿ ವಾಕಿಟಾಕಿಯಲ್ಲಿ ಮಾತನಾಡುತ್ತಾ ವಯಸ್ಸಾದ ಮಹಿಳೆಯರ ಗಮನ ಬೆರೇಡೆ ಸೆಳೆದು ಚಿನ್ನದ ಸರಗಳನ್ನು ಕಳವು ಮಾಡುತ್ತಿದ್ದ ಖತರ್ನಾಕ್ ಕಳ್ಳ ಚಂದ್ರಲೇಔಟ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಪೊಲೀಸರಿಗೆ ಸಿಕ್ಕಿಬಿದ್ದಿರುವ ಕಳ್ಳ ಚಂದ್ರಲೇಔಟ್ನ ಸೈಯದ್ ಅಬೂಬಕ್ಕರ್ನಿಂದ ಬರೋಬರಿ 50 ಲಕ್ಷ ರೂಪಾಯಿ ಮೌಲ್ಯದ 40 ಚಿನ್ನದಸರಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
ಆರೋಪಿಯು ಪೊಲೀಸ್ ಸಮವಸ್ತ್ರ ಧರಿಸಿ ಕೈಯಲ್ಲಿ ವಾಕಿಟಾಕಿ ಹಿಡಿದುಕೊಂಡು 50 ವರ್ಷ ದಾಟಿದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಚಿನ್ನದ ಸರ ಅಭರಣಗಳನ್ನು ಮಾಡುತ್ತಿದ್ದನು.ನಗರದಲ್ಲಿ ಹಲವಡೆ ಇಂತಹ ಕೃತ್ಯಗಳನ್ನು ನಡೆಸಿ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದ.
ಚಂದ್ರಲೇಔಟ್ ಪೊಲೀಸ್ ಠಾಣಾ ವ್ಯಾಫ್ತಿಯಲ್ಲಿ ನಡೆದಿದ್ದ ಗಮನ ಬೆರೇಡೆ ಸೆಳೆದು ಕಳವು ಮಾಡಿದ್ದ ಕೃತ್ಯವನ್ನು ಬೆನ್ನತ್ತಿ ಆರೋಪಿಯನ್ನು ಬಂಧಿಸಿ ನಡೆಸಿದ ವಿಚಾರಣೆಯಲ್ಲಿ ಕೆಎಸ್ಆರ್ಪಿ ಪೆÇಲೀಸರೊಬ್ಬರಿಂದ ಸಮವಸ್ತ್ರ,ಸೆಕ್ಯೂರಿಟಿ ಗಾರ್ಡ್ ಒಬ್ಬನಿಂದ ವಾಕಿಟಾಕಿ ಕಳ್ಳತನ ಮಾಡಿ ಅವುಗಳನ್ನು ಧರಿಸಿ ಕೃತ್ಯ ನಡೆಸುತ್ತಿರುವುದನ್ನು ಒಪ್ಪಿಕೊಂಡಿದ್ದಾನೆ.
ನಿರ್ಜನ ಪ್ರದೇಶದಲ್ಲಿ ಸಂಚರಿಸುತ್ತಾ ಪಕ್ಕದ ರಸ್ತೆಯಲ್ಲಿ ಸರಗಳ್ಳತನ ನಡೆದಿದೆ ಚಿನ್ನದ ಸರವನ್ನು ತೆಗೆದು ಬ್ಯಾಗ್ನಲ್ಲಿ ಹಾಕಿಕೊಳ್ಳಿ ಎಂದು ಹೇಳುತ್ತಾನೆ.ವಾಕಿಟಾಕಿಯಲ್ಲಿ ಎಸ್ ಸರ್, ಎಸ್ ಸರ್ ಎಂದು ಮಾಃಇತಿ ನೀಡುವಂತೆ ನಾಟಕ ಮಾಡಿ ಮಹಿಳೆಯರ ಗಮನ ಬೆರೇಡೆ ಸೆಳೆದು ಸರ ಕಳವು ಮಾಡಿ ಪರಾರಿಯಾಗುತ್ತಿದ್ದ.ಬಂಧಿತ ಆರೋಪಿಯು 40 ಅಪರಾಧ ಕೃತ್ಯದಲ್ಲಿ ತೊಡಗಿರುವುದು ತನಿಖೆಯಲ್ಲಿ ಕಂಡುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








