ಕರ್ನಾಟಕದ ಹೆಮ್ಮೆಯ ಗರಿ ಡಾ. ಚಂದ್ರಶೇಖರ ಕಂಬಾರ : ಕುಲಪತಿ ಡಾ. ಸ.ಚಿ.ರಮೇಶ,

ಹೊಸಪೇಟೆ

     ಡಾ. ಚಂದ್ರಶೇಖರ ಕಂಬಾರ ಅವರು ಅನೇಕ ಪ್ರತಿಭೆಗಳನ್ನು ನಾಡಿಗೆ ಪರಿಚಯಿಸಿದ ಮಹಾನ್ ವ್ಯಕ್ತಿ, ಗುಡ್ಡಗಾಡು, ಕಲ್ಲುಮುಳ್ಳುಗಳಿಂದ ಕೂಡಿದ ಅರಣ್ಯದಲ್ಲಿ ಕರ್ನಾಟಕದ ಹೆಮ್ಮೆಯ ಕನ್ನಡ ವಿಶ್ವವಿದ್ಯಾಲಯ ಎನ್ನುವ ವಿದ್ಯಾರಣ್ಯ ಸೃಷ್ಟಿಸಿದ ಮಹಾನ್ ಚೇತನ. ಕನ್ನಡ ವಿಶ್ವವಿದ್ಯಾಲಯದ, ಕರ್ನಾಟಕದ ಹಾಗೂ ಕನ್ನಡ ಸಾಹಿತ್ಯದ ಹೆಮ್ಮೆಯ ಗರಿ ಡಾ. ಚಂದ್ರಶೇಖರ ಕಂಬಾರರು ಎಂದರೆ ತಪ್ಪಾಗಲಿಕ್ಕಿಲ್ಲ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಸ.ಚಿ. ರಮೇಶ ಅವರು ಅಭಿಪ್ರಾಯಪಟ್ಟರು.

     ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಡಾ. ಚಂದ್ರಶೇಖರ ಕಂಬಾರ ಅವರ 83ನೇ ಜನ್ಮದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ನಾಡೋಜ ಡಾ. ಚಂದ್ರಶೇಖರ ಕಂಬಾರ : ಸೃಷ್ಟಿ ಮತ್ತು ದೃಷ್ಟಿ ಎನ್ನುವ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ನಾವು ಯಾವತ್ತೂ ಚರಿತ್ರೆಯನ್ನು ಮರೆಯಬಾರದು. ಈ ನಿಟ್ಟಿನಲ್ಲಿ ಕನ್ನಡ ವಿಶ್ವವಿದ್ಯಾಲಯವನ್ನು ಡಾ. ಚಂದ್ರಶೇಖರ ಕಂಬಾರ ಅವರು ತಮ್ಮ ದೃಷ್ಟಿಕೋನದಲ್ಲಿ ಯಾವ ರೀತಿ ಕಟ್ಟಿದ್ದಾರೆ ಎನ್ನುವ ವಿಚಾರವನ್ನು ತಿಳಿಯಲು ಇಂದು ನಾವು ಕನ್ನಡ ವಿಶ್ವವಿದ್ಯಾಲ ಯದ ಸ್ಥಾಪಕ ಕುಲಪತಿಗಳಾದ ಡಾ. ಚಂದ್ರಶೇಖರ ಕಂಬಾರ ಅವರ ನೆನಪುಗಳನ್ನು ಅವಲೋಕನ ಮಾಡಿಕೊಳ್ಳಲು ಈ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ. ಹಾಗೂ ಮುಖ್ಯವಾಗಿ ಶೈಕ್ಷಣಿಕವಾಗಿ, ಆಡಳಿತಾತ್ಮಕವಾಗಿ ಕ್ಷೇತ್ರಕಾರ್ಯದ ಮೂಲಕ ಪುಸ್ತಕಗಳನ್ನು, ಕಾದಂಬರಿಗಳನ್ನು, ಕಥೆ, ಸಾಹಿತ್ಯ, ವಿಶ್ವಕೋಶಗಳನ್ನು ಹೇಗೆ ರಚಿಸಬೇಕು ಎನ್ನುವ ವಿಧಾನವನ್ನು ಕಲಿಸಿಕೊಟ್ಟಂತ ಮಹಾನ್ ವ್ಯಕ್ತಿ ನಮ್ಮ ಡಾ. ಚಂದ್ರಶೇಖರ ಕಂಬಾರ ಎಂದು ತಿಳಿಸಿದರು.

     ಕಾರ್ಯಕ್ರಮ ಉದ್ಘಾಟಿಸಿ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಗುರುಲಿಂಗ ಕಾಪಸೆ ಅವರು ಮಾತನಾಡಿ, ಡಾ. ಚಂದ್ರಶೇಖರ ಕಂಬಾರ ಅವರು ಒಬ್ಬ ಮಹಾನ್ ವ್ಯಕ್ತಿತ್ವವುಳ್ಳವರು. ಅವರು ಸಾಮಾನ್ಯ ಕುಟುಂಬದಲ್ಲಿ ಬೆಳೆದು ಕನ್ನಡ ನಾಡಿನ ಗಣ್ಯರ ಸಾಲಿನಲ್ಲಿದ್ದಾರೆ. ವಾಸ್ತವಾಂಶಗಳನ್ನು ಇಟ್ಟುಕೊಂಡು ಕಲ್ಪನೆಗಳ ಮೂಲಕ ನಾಟಕ, ಕಥೆ, ಕಾದಂಬರಿ ಹಾಗೂ ಸಾಹಿತ್ಯಗಳನ್ನು ರಚನೆ ಮಾಡುವ ವಿಶಿಷ್ಟ ದೃಷ್ಟಿಕೋನದ ವ್ಯಕ್ತಿ ನಾಡೋಜ ಡಾ. ಚಂದ್ರಶೇಖರ ಕಂಬಾರ ಅವರು ಎಂದು ತಿಳಿಸಿದರು.

     ಸಾಹಿತ್ಯದ ಮೂಲ ದೃಷ್ಟಿ. ದೃಷ್ಟಿಯ ಮೂಲಕ ಸಾಹಿತ್ಯವನ್ನು ಹೇಗೆ ರಚಿಸಲಾಗಿದೆ ಎನ್ನುವುದನ್ನು ಕಲಾತ್ಮಕವಾಗಿ ತಿಳಿಸುವ ವ್ಯಕ್ತಿ ಕಂಬಾರರು. ಕಂಬಾರರು ಬೆಳೆಯುತ್ತಿದ್ದ ಸಂದರ್ಭದಲ್ಲಿ ವರಕವಿ ಬೇಂದ್ರೆಯವರ ಪ್ರಭಾವವೂ ಇತ್ತು. ದತ್ತವಾಣಿಯ ಪ್ರಕಾರಗಳ ಹೊತ್ತಿನಲ್ಲಿಯೂ ಕಂಬಾರರು ಜನಪದ ಕವಿಯಾಗಿ ಬೆಳೆದಂಥವರು. ತೇಜಸ್ವಿ, ಕಂಬಾರ ಹಾಗೂ ಲಂಕೇಶ ಅವರು ಸ್ವತಂತ್ರವಾಗಿ ಬೆಳೆದಂತ ಸಾಹಿತಿಗಳು. ಕಂಬಾರರು ರಚಿಸಿರುವ ಚಕೋರಿ ನಾಟಕವು ಅತ್ಯಂತ ಶ್ರೇಷ್ಠ್ಠವಾದದ್ದು. ಡಾ. ಚಂದ್ರಶೇಖರ ಕಂಬಾರ ಅವರು ಸೋಬದ್ಧತೆವುಳ್ಳವರು. ಇವರು ಯಾರನ್ನೂ ಅನುಕರಣೆ ಮಾಡಿದಂತ ವ್ಯಕ್ತಿಯಲ್ಲ. ಮುಖ್ಯವಾಗಿ ಭಾರತದ ಸಾಹಿತ್ಯ ಕ್ಷೇತ್ರದಲ್ಲಿ ಎದ್ದು ಕಾಣುವ ನಿಟ್ಟಿನಲ್ಲಿ ಬೆಳೆದು ಜ್ಞಾನಪೀಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಂತ ಮಹಾನ್ ವ್ಯಕ್ತಿ ಕಂಬಾರರು ಎಂದರು.

    ಸಾಂಸ್ಕೃತಿಕ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ ಅವರು ಕಾರ್ಯಕ್ರಮದ ಆಶಯ ನುಡಿಗಳನ್ನಾಡಿದರು.
ಕುಲಸಚಿವ ಡಾ. ಎ. ಸುಬ್ಬಣ್ಣ ರೈ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶೈಕ್ಷಣಿಕ ಉಪಕುಲಸಚಿವ ಡಾ. ಎಸ್.ವೈ. ಸೋಮಶೇಖರ ಅವರು ನಿರೂಪಿಸಿದರು. ಉಪಕುಲಸಚಿವ ಡಾ. ಎ. ವೆಂಕಟೇಶ ಅವರು ವಂದಿಸಿದರು. ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap