ಹಗರಿಬೊಮ್ಮನಹಳ್ಳಿ
ತಾಲೂಕಿನ ಪಿಂಜಾರ್ ಹೆಗ್ಡಾಳ್‍ಬಳಿ ಇರುವ ವಸಂತ ಮಾಲವಿ ಎನ್ನುವವರ ತೋಟದಲ್ಲಿರುವ ಚಿರತೆದಾಳಿಯಿಂದ ಆಕಳು ಕರು ಬಲಿಯಾಗಿರುವ ಘಟನೆ ನಡೆದಿದೆ.ಸೋಮವಾರ ರಾತ್ರಿ ದಾಳಿಮಾಡಿದೆ ಎನ್ನಲಾದ ಚಿರತೆ ಹಾವಳಿಯಿಂದ ಸುಮಾರು 25ಸಾವಿರ ರೂ. ಬೆಲೆ ಬಾಳುವ ಆಕಳ ಗಿರ್ ತಳಿಯ ಹೋರಿಕರು ಬಲಿಯಾಗಿದೆ. ಇದರಿಂದ ಸುತ್ತಮುತ್ತಲಿನ ಸಾರ್ವಜನಿಕರು ಹಾಗೂ ರೈತರು ಆತಂಕಗೊಂಡಿದ್ದಾರೆ.
ಪಕ್ಕದಲ್ಲಿರುವ ಆನೇಕಲ್ಲು ಗುಡ್ಡಕ್ಕೆ ಕೆಲವಾರು ದಿನಗಳ ಹಿಂದೆ ಬೆಂಕಿ ಹಚ್ಚಿದ್ದರ ಪರಿಣಾಮ ಅಡವಿಯಲ್ಲಿರುವ ಕಾಡುಪ್ರಾಣಿಗಳು ಊರುಗಳತ್ತ ದಾವಿಸುತ್ತಿವೆ ಎಂದು ಕರು ಕಳೆದುಕೊಂಡಿರುವ ಮಾಲೀಕ ವಸಂತ ಮಾಲವಿ ಆತಂಕ ವ್ಯಕ್ತಪಡಿಸುತ್ತಾರೆ.ಘಟನಾ ಸ್ಥಳಕ್ಕೆ ಪಶುವೈದ್ಯ ರಾಘವೆಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಇದು ಚಿರತೆಯ ದಾಳಿ ಎಂದು ಖಚಿತ ಪಡಿಸಿದ್ದಾರೆ. ಅಲ್ಲದೆ, ಅರಣ್ಯಾಧಿಕಾರಿ ರವೀಂದ್ರನಾಯ್ಕ ಕೂಡ ಭೇಟಿ ನೀಡಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.