ಉತ್ಸವ ರಾಕ್ ಗಾರ್ಡನ್‍ನಲ್ಲಿ, ಮಕ್ಕಳಿಗೆ ಕಲೆ ಪರಿಚಯ

ಶಿಗ್ಗಾವಿ:

        ರಾಣೆಬೆನ್ನೂರಿನ ಪರಿಣಿತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಗೊಟಗೋಡಿಯ ಉತ್ಸವರಾಕ್‍ಗಾರ್ಡನ್ ಹಾಗೂ ಇಂಡಿಯನ್ ಗಾರ್ಡನ್‍ಗೆ ಭೇಟಿ ನೀಡಿ ಕಲೆ ಮತ್ತು ಸಂಸ್ಕತಿಯ ಪರಿಚಯ ಪಡೆದು ಸಂಭ್ರಮಿಸಿದರು.

       ಗಾರ್ಡನ್‍ನ ಪ್ರವೇಶದ್ವಾರದಲ್ಲಿನ ರಾಜ್‍ಕುಮಾರ್ ಸರ್ಕಲ್ ವೀಕ್ಷಿಸುತ್ತಿದ್ದಾಗ, ಅವರಕಣ್ಣು ಮೊದಲು ಬಿದ್ದದ್ದು ಅಣ್ಣಾವ್ರ‘ಆಕಸ್ಮಿಕ’ಚಿತ್ರದ ಶಿಲ್ಪದ ಮೇಲೆ. ನೋಡ್ರೋ ! ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು.. ಹಾಡಿನ ದೃಶ್ಯ ಎಂದು ತಮ್ಮೊಳಗೆ ಸಂಭ್ರಮದಿಂz ಚರ್ಚಿಸುತ್ತಿದ್ದುದು ಕಂಡು ಬಂತು. ಜತೆಗಿದ್ದ ಶಿಕ್ಷಕರು ತದ್ರೂಪ ರಾಜಣ್ಣನಂತಿರುವ ಶಿಲ್ಪಗಳನ್ನು ನೋಡಿ ಚಕಿತರಾದರು.
ಗ್ರಾಮ ಹಾಗೂ ಉತ್ತರ ಕರ್ನಾಟಕ ಹಿಂದಿನ ಗ್ರಾಮ ಸಂಸ್ಕತಿಯ ಗ್ಯಾಲರಿಗಳು ತಮ್ಮ ಬಾಲ್ಯಾವಸ್ಥೆಯನ್ನು ನೆನಪಿಸಿದವು. ಮಕ್ಕಳು ಇದೇನ್ ಸರ್ !, ಇದೇನ್ ಸರ್!

       ಎಂದು ಶಿಕ್ಷಕರಿಗೆ ಪ್ರಶ್ನೆಗಳ ಸುರಿಮಳೆ ಗೈಯಲು ಪ್ರಾರಂಭಿಸಿದರು ಎಂದು ಶಾಲೆಯ ಮುಖ್ಯ ಶಿಕ್ಷಕಿ ವಿದ್ಯಾ ಹೇಳಿದರು.
ಇಂದಿನ ಮಕ್ಕಳಿಗೆ ಹಿಂದಿನ ಗ್ರಾಮೀಣ ಕಲೆ, ಸಂಸ್ಕತಿ ಹಾಗೂ ಬದುಕಿನ ಪರಿಚಯ ಮಾಡಿಸಬೇಕೆಂದರೆ ಮಕ್ಕಳೊಂದಿಗೆ ಶಿಕ್ಷಕರು ಒಮ್ಮೆ ಉತ್ಸವ ರಾಕ್ ಗಾರ್ಡನ್‍ಗೆ ಭೇಟಿ ನೀಡಬೇಕು ಎಂದು ಅಭಿಪ್ರಾಯಪಟ್ಟರು.

        ಇಂಡಿಯನ್ ಗಾರ್ಡನ್‍ನಲ್ಲಿನ ಸಾಹಸಮಯ ಆಟಗಳು, ನೀರಾಟ, ಎತ್ತಿನ ಗಾಡಿ-ಟಾಂಗಾ ಸವಾರಿ, ದೋಣಿ ವಿಹಾರ, ಮಳೆ ಸ್ನಾನಗಳು ವಿದ್ಯಾರ್ಥಿಗಳನ್ನು ಭರಪೂರ ರಂಜಿಸಿದವು ಎಂದು ಸಹ ಶಿಕ್ಷಕರು ನುಡಿದರು.

        ಉತ್ಸವ ರಾಕ್ ಗಾರ್ಡನ್ ನಿಜವಾಗಿಯೂ ಶೈಕ್ಷಣಿಕ ಹಾಗೂ ಸಾಂಸ್ಕತಿಕ ಕೇಂದ್ರ. ಜಾನಪದ ರಂಗಮಂದಿರವಂತೂ ನಮ್ಮ ನಾಡು,ನುಡಿ ಸಂಸ್ಕತಿಯ ಮೆರಗೂ ಹೆಚ್ಚಿಸಿದೆ ಎಂದು ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

          ಗಾರ್ಡನ್‍ನ ಪ್ರತಿಯೊಂದು ಶಿಲ್ಪಗಳು ನಮ್ಮನ್ನು ಮಾತನಾಡಿಸಿ ಮುಂದೆ ಹೋಗಿ ಎಂದು ಪ್ರವಾಸಿಗರಿಗೆ ಹೇಳುತ್ತಿರುವಂತೆ ಭಾಸ ಆಗುತ್ತದೆ. ಗ್ರಾಮೀಣ ಸಾಮ್ರಾಜ್ಯದ ಪರಿಚಯದೊಂದಿಗೆ ಗ್ರಾಮೀಣರ ವೃತ್ತಿಗಳ ಬಗ್ಗೆಯೂ ಶಿಲ್ಪಗಳ ಮೂಲಕ ಅದ್ಭುತವಾಗಿ ಗಾರ್ಡನ್‍ನಲ್ಲಿ ತೋರಿಸಲಾಗಿದ್ದು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಉಪಯುಕ್ತಕಾರಿ ಆಗಿದೆ ಎಂದು ತಂಡದೊಂದಿಗಿದ್ದ ಸಹ ಶಿಕ್ಷಕರು ವಿವರಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link