ಚಿನ್ನದ ಸರಕ್ಕಾಗಿ ಮಹಿಳೆಯ ಕೊಲೆ..!!

ಬೆಂಗಳೂರು

    ಚಿನ್ನದ ಸರಕ್ಕಾಗಿ ಮಹಿಳೆಯೊಬ್ಬರ ಕತ್ತು ಕೊಯ್ದು ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿರುವ ದುರ್ಘಟನೆ ಕಗ್ಗಲಿಪುರದ ಬಳಿ ನಡೆದಿದೆ.

      ಕಗ್ಗಲಿಪುರದ ಲಕ್ಷ್ಮಿಪುರದಲ್ಲಿನ ಗಾಯಿತ್ರಿ (29)ಎಂದು ಕೊಲೆಯಾದವರನ್ನು ಗುರುತಿಸಲಾಗಿದೆ,ಬುಧವಾರ ಬೆಳಿಗ್ಗೆ ಮನೆಯಿಂದ ಹತ್ತಿರದಲ್ಲಿದ್ದ ಶಾಲೆಗೆ ಮಕ್ಕಳನ್ನು ಬಿಟ್ಟು ಬಂದು ಗಾಯಿತ್ರಿ ಒಂಟಿಯಾಗಿದ್ದರು.ಮನೆಯಲ್ಲಿ ಗಾಯಿತ್ರಿ ಒಂಟಿಯಾಗಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಬಾಗಿಲು ಬಡಿದಿದ್ದು ಬಾಗಿಲು ತೆಗೆದ ಕೂಡಲೇ ಒಳನುಗ್ಗಿ ಮಾಂಗಲ್ಯಸರಕ್ಕೆ ಕೈ ಹಾಕಿದ್ದಾರೆ ಮಹಿಳೆಯು ಸರವನ್ನು ಗಟ್ಟಿಯಾಗಿ ಹಿಡಿದುಕೊಂಡು ರಕ್ಷಣೆಗಾಗಿ ಕೂಗಿಕೊಂಡಾಗ ಚಾಕುವಿನಿಂದ ಕತ್ತು ಕೊಯ್ದು ಸರ ದೋಚಿ ಪರಾರಿಯಾಗಿದ್ದಾರೆ.ಚಾಕು ಆಳವಾಗಿ ಕುತ್ತಿಗೆಗೆ ಇಳಿದಿದ್ದರಿಂದ ತೀವ್ರ ರಕ್ತಸ್ರಾವ ಉಂಟಾಗಿ ಗಾಯಿತ್ರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

      ಮಕ್ಕಳು ಶಾಲೆಯಿಂದ ಮನೆಗೆ ವಾಪಸ್ ಬಂದಾಗ ಘಟನೆ ಬೆಳಕಿಗೆ ಬಂದಿದೆ.ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕಗ್ಗಲಿಪುರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ಕೃತ್ಯ ನಡೆಸಿದ ದುಷ್ಕರ್ಮಿಗಳ ಬಂಧನಕ್ಕೆ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ ಎಂದು ರಾಮನಗರ ಎಸ್‍ಪಿ ಚೇತನ್ ಸಿಂಗ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link