ಗರಿಗೆದರಿದ ಕ್ರಿಸ್ ಮಸ್ ಸಂಭ್ರಮ

ಬೆಂಗಳೂರು

       ನಗರ ಸೇರಿ ರಾಜ್ಯದೆಲ್ಲೆಡೆ ಕ್ರಿಸ್‍ಮಸ್ ಆಚರಣೆಯ ಸಂಭ್ರಮ ಮನೆಮಾಡಿದೆ.ಹಬ್ಬದ ಆಚರಣೆಗೆ ಮೂರು ದಿನ ಮಾತ್ರ ದಿನಗಳ ಬಾಕಿ ಉಳಿದಿದ್ದು ಹಬ್ಬಕ್ಕಾಗಿ ಭರದ ಸಿದ್ದತೆಗಳು ನಡೆದಿವೆ.

          ನಗರ ಸೇರಿ ರಾಜ್ಯದ ಎಲ್ಲಾ ಚರ್ಚ್‍ಗಳಿಗೆ ಸುಣ್ಣ ಬಣ್ಣ ಬಳಿದು ಬಣ್ಣಬಣ್ಣದ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ. ನಕ್ಷತ್ರಗಳ ಮಿಂಚು, ಬಲೂನುಗಳ ಚಿತ್ತಾರ, ಹಚ್ಚ ಹಸುರಿನ ಕ್ರಿಸ್‍ಮಸ್ ಟ್ರೀ, ವಿಭಿನ್ನ ವಿನ್ಯಾಸದ ಕ್ರಿಬ್ (ಗೋದಲಿ)ಗಳು, ಸಾಂತಾ ಕ್ಲಾಸ್‍ನ ಪ್ರತಿಬಿಂಬ, ಶುಭ ಸಂಕೇತದ ಗಂಟೆ ಹಬ್ಬದ ಸಂಭ್ರಮವನ್ನು ಹೆಚ್ಚಿಸಿವೆ.

           ಶಾಂತಿಧೂತ ಏಸುಕ್ರಿಸ್ತನ ಸಂದೇಶ ಸಾರುವ ಕ್ರಿಸ್‍ಮಸ್‍ಗೆ ಬಗೆಯ, ನಾನಾ ವಿನ್ಯಾಸ ಮತ್ತು ಸ್ವಾದದ ಕೇಕ್‍ಗಳು ಕಣ್ಣು ಮುಂದೆ ಸುಳಿಯುತ್ತವೆ.ಹಬ್ಬದ ಸಂಭ್ರಮಕ್ಕೆಬೇಕರಿಯವರು ಈಗಾಗಲೇ ತರಹೇವಾರಿ ಕೇಕುಗಳನ್ನು ತಯಾರಿಸಿದ್ದಾರೆ. ಮತ್ತೊಂದೆಡೆ ಕ್ರಿಸ್‍ಮಸ್ ಆಚರಣೆಯ ಸಾಮಗ್ರಿಗಳ ಆಕರ್ಷಕ ಜೋಡಿಸಿರುವ ಮಾರಾಟಗಾರರು ಗ್ರಾಹಕರನ್ನು ಕೈಬಿಸಿ ಕರೆಯುತ್ತಿದ್ದಾರೆ.

ಹ್ಯಾಪಿ ಕ್ರಿಸ್‍ಮಸ್

           ಶಿವಾಜಿನಗರ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಹಲಸೂರು, ಎಂ.ಜಿ. ರಸ್ತೆ, ಜೆ.ಪಿ. ನಗರ ಹೀಗೆ ನಗರದ ನಾನಾ ಭಾಗಗಳಲ್ಲಿ ಕ್ರಿಸ್‍ಮಸ್‍ನ ಅಲಂಕಾರಿಕ ವಸ್ತುಗಳ ಮಾರಾಟ ವಹಿವಾಟು ಜೋರಾಗಿಯೇ ನಡೆದಿದ್ದು ಮಕ್ಕಳಿಂದ ವದ್ಧರವರೆಗೆ ಹಲವು ವಸ್ತುಗಳ ಖರೀದಿ ನಡೆಯುತ್ತಿದೆ. ನಾನಾ ಗಾತ್ರ, ವಿನ್ಯಾಸದ ಕ್ರಿಸ್‍ಮಸ್ ಟ್ರೀ, ಬಣ್ಣದ ಸ್ಟಾರ್‍ಗಳು, ಸಾಂತಾಕ್ಲಾಸ್ ಬೊಂಬೆಗಳು, ಬೆಲ್, ಗ್‍ಟಿ ಬಾಕ್ಸ್, ಕ್ರಿಬ್‍ಗಳು, ತೋರಣಗಳು, `ಹ್ಯಾಪಿ ಕ್ರಿಸ್‍ಮಸ್’ ಸಂದೇಶದ ಸ್ಟಿಕ್ಕರ್‍ಗಳು ಹೀಗೆ ಹಲವು ಪರಿಕರಗಳ ಮಾರಾಟ ಜೋರಾಗಿದೆ. ಬೆಲೆಗಳು 20 ರೂ.ನಿಂದ ಆರಂಭಗೊಂಡು 3 ಸಾವಿರ ರೂ.ವರೆಗೆ ಮಾರಾಟವಾಗುತ್ತಿವೆ.

            ಕ್ರಿಸ್‍ಮಸ್ ವಸ್ತುಗಳಲ್ಲಿ ಪ್ರತಿ ವರ್ಷ ಬೆಲೆಗಳಲ್ಲಿ ಏರಿಕೆಯಾಗುತ್ತಲೇ ಇವೆ. ಆದರೂ ಗ್ರಾಹಕರ ಕೈಗೆಟುಕುವಂತೆ ಬೇರೆ ಬೇರೆ ವಿನ್ಯಾಸದ ಸ್ಟಾರ್‍ಗಳ ತಯಾರಿ, ಶುಭ ಸಂಕೇತದ ಗಂಟೆ, ನಾನಾ ಆಕಾರ ಅಥವಾ ಗಾತ್ರದ ಕ್ರಿಸ್‍ಮಸ್ ಟ್ರೀ ಇತ್ಯಾದಿಗಳನ್ನು ಮಾರಲಾಗುತ್ತಿದೆ.

             ಅವರವರ ಆರ್ಥಿಕ ಸಾಮಥ್ಯಕ್ಕೆ ತಕ್ಕಂತೆ ಕನಿಷ್ಠ 15 ರೂ.ನಿಂದ 1,000 ರೂ.ವರೆಗೆ ಸ್ಟಾರ್‍ಗಳು ಮಾರಾಟವಾದರೆ, ಕ್ರಿಸ್‍ಮಸ್ ಟ್ರೀಗಳು ಎತ್ತರಕ್ಕೆ ತಕ್ಕಂತೆ 100 ರೂ. ನಿಂದ ಸಾವಿರಾರು ರೂ.ವರೆಗೆ ಮಾರಾಟವಾಗುತ್ತಿವೆ.

ಬೆಲೆಯಲ್ಲಿ ವ್ಯತ್ಯಾಸ

             ವರ್ಷದಿಂದ ವರ್ಷಕ್ಕೆ ಕ್ರಿಸ್‍ಮಸ್ ಹಬ್ಬದ ಸಂದರ್ಭದಲ್ಲಿ ಸ್ವಲ್ಪ ಮಟ್ಟಿಗೆ ಬೆಲೆಗಳಲ್ಲಿ ಹೆಚ್ಚಳವಾಗುತ್ತದೆ. ಆದರೆ, ನಮ್ಮ ವ್ಯಾಪಾರದಲ್ಲಿ ಯಾವುದೇ ತೊಂದರೆಯಾಗಲ್ಲ. ಒಂದೊಂದು ಬಾರಿ ಕಡಿಮೆಯಾಗುತ್ತದೆ. ಮತ್ತೊಂದು ಸಲ ಹೆಚ್ಚು ವ್ಯಾಪಾರವಾಗುತ್ತದೆ. ಇನ್ನು ಕ್ರಿಸ್‍ಮಸ್ ಜತೆಗೆ ಹೊಸ ವರ್ಷ ಬರುವುದಿರಂದ ಉಡುಗೊರೆ, ಗ್ರೀಟಿಂಗ್ ಕಾಡ್ರ್ಸ್ ಇತ್ಯಾದಿಗಳಿಗೆ ಬೇಡಿಕೆ ಹೆಚ್ಚಿರುತ್ತದೆ ಎಂದು ಕಮರ್ಷಿಯಲ್ ಸ್ಟ್ರೀಟ್‍ನ ವ್ಯಾಪಾರಿ ಸ್ಟೀಫನ್ ಅಭಿಪ್ರಾಯಪಟ್ಟಿದ್ದಾರೆ.

            ಕ್ರೈಸ್ತ ಸಮುದಾಯದ ಪ್ರಮುಖ ಹಬ್ಬವಾದ ಕ್ರಿಸ್‍ಮಸ್ ಆಚರಣೆಗೆ ನಗರದಾದ್ಯಂತ ಇರುವ ಎಲ್ಲ ಚರ್ಚ್‍ಗಳು ಸಿಂಗಾರಗೊಳ್ಳುತ್ತಿವೆ. ಕ್ರಿಶ್ಚಿಯನ್ ಸಮುದಾಯದ ಶಾಲಾ-ಕಾಲೇಜುಗಳಲ್ಲಿ ಕ್ರಿಸ್‍ಮಸ್‍ನ ಸಡಗರ ಆರಂಭವಾಗಿದೆ. ಹಬ್ಬಕ್ಕೆಂದೇ ವಿದ್ಯಾರ್ಥಿ ಮತ್ತು  `ಕಾರ್ನಿವಲ್’ ಉತ್ಸವಗಳು ನಡೆಯುತ್ತಿವೆ. ಬಹತ್ ಹೋಟೆಲ್‍ಗಳು, ಮಾಲ್‍ಗಳು, ಕೆಲವು ಕಚೇರಿಗಳಲ್ಲೂ ಹಬ್ಬದ ಸಂಭ್ರಮದ ವಾತಾವರಣವಿದೆ.

ತರಾವರಿ ಕೇಕ್

           ಒಣ ಹಣ್ಣು ಮಿಶ್ರಿತ ಪ್ಲಂ ಕೇಕ್, ಬ್ಲಾಕ್‍ರೆಸ್ಟ್ ಕೇಕ್, ತುಪ್ಪದಲ್ಲಿ ತಯಾರಿಸಿದ ಘೀ ಕೇಕ್, ಪೇಸ್ಟ್ರಿ, ಬ್ಲಾಕ್ ಕರೆಂಟ್, ಅನಾನಸ್, ಬಟರ್ ಸ್ಕ್ರಾಚ್, ಸ್ಟ್ರಾಬೆರಿ, ಚಾಕೊಲೇಟ್, ವೆನಿಲಾ ಸೇರಿದಂತೆ ನಾನಾ ಬಗೆಯ ಪರಿಮಳ ಭರಿತ ಕೇಕ್‍ಗಳು, ಬಾದಾಮಿ-ಚಾಕೊಲೇಟ್-ವೆನಿಲಾದಿಂದ ತಯಾರಾದ ಕೇಕ್‍ರೋಲ್‍ಗಳು, ಮೊಟ್ಟೆ ರಹಿತ ಮತ್ತು ಮೊಟ್ಟೆ ಸಹಿತ ಕೇಕ್‍ಗಳು ಬೇಕರಿಗಳಲ್ಲಿ ಸಿದ್ಧಗೊಂಡಿವೆ.

           ನಗರದಲ್ಲಿ ಬಿಡುವಿಲ್ಲದ ಕೆಲಸಗಳ ನಡುವೆ ಕೆಲವರು ಮಾರುಕಟ್ಟೆಗಳಿಗೆ ಹೋಗಿ ಬೇಕಾದ ಸಾಮಗ್ರಿಗಳನ್ನು ಖರೀದಿಸಲು ಸಮಯಾವಕಾಶ ಸಿಗುವುದಿಲ್ಲ ಎನ್ನುವವರಿಗಾಗಿ ಪ್ರೀಮಿಯಂ ಕೇಕ್‍ಗಳಿಂದ ಹಿಡಿದು ತಮಗೆ ಬೇಕಾದ ಸ್ಟಾರ್, ಕ್ರಿಸ್‍ಮಸ್ ಟ್ರೀ ಇತ್ಯಾದಿ ಕೇಕ್‍ಗಳು ಅಲಂಕಾರಿಕಾ ವಸ್ತುಗಳ ಖರೀದಿ ಆನ್‍ಲೈನ್ ಮೂಲಕ ನಡೆಯುತ್ತಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap