ಚುನಾವಣೆಗಳಲ್ಲಿ ಇವಿಎಮ್ ಬೇಡ ಬ್ಯಾಲೆಟ್ ಪೆಪರ್ ಬಳಸಿ: ಡಾ.ಬಿ.ಪುಷ್ಪ ಅಮರನಾಥ್

ಬೆಂಗಳೂರು

      ಚುನಾವಣೆಗಳಲ್ಲಿ ಮತದಾನಕ್ಕೆ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಳಸುವುದನ್ನು ವಿರೋಧಿಸಿ ಮುಹಿಳಾ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪತ್ರ ಚಳವಳಿ ನಡೆಸಿದರು.

     ಜಿಪಿಓ ವೃತ್ತದಲ್ಲಿರುವ ಕೇಂದ್ರ ಅಂಚೆ ಕಚೇರಿ ಮುಂಭಾಗ ಸೇರಿದ ನೂರಾರು ಮುಹಿಳಾ ಕಾಂಗ್ರೆಸ್ ಕಾರ್ಯಕರ್ತರು ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತಕ್ಕೆ ವಿದ್ಯುನ್ಮಾನ ಮತಯಂತ್ರ ಮಾರಕವಾಗಿ ಪರಿಣಮಿಸಿದ್ದು ಮೊದಲಿನಂತೆ ಮತಪತ್ರ ಮೂಲಕ ಚುನಾವಣೆ ನಡೆಸಬೇಕೆಂದು ರಾಷ್ಟ್ರಪತಿ ಅವರಿಗೆ ಪತ್ರ ಬರೆದು ಒತ್ತಾಯಿಸಿದರು.

     ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಬಿ.ಪುಷ್ಪ ಅಮರನಾಥ್ ರಾಷ್ಟ್ರದ ಬಹುತೇಕ ರಾಜಕೀಯ ಪಕ್ಷಗಳು ವಿದ್ಯುನ್ನ ಮತಯಂತ್ರ ಬೇಡ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದೆ. ಆದರೆ ಭಾರತೀಯ ಜನತಾ ಪಕ್ಷ ಮಾತ್ರ ವಿದ್ಯುನ್ಮಾನ ಮತಯಂತ್ರ ಇರಬೇಕೆಂದು ಒತ್ತಾಯಿಸುತ್ತಿರುವುದು ಸರಿಯಲ್ಲ ಎಂದರು.

    ತಾಂತ್ರಿಕವಾಗಿ ಭಾರತಕ್ಕಿಂತಲೂ ಮುಂದುವರೆದಿರುವ ರಾಷ್ಟ್ರಗಳಾದ ಅಮೆರಿಕ, ಜರ್ಮನಿ, ಮುಂತಾದ ರಾಷ್ಟ್ರಗಳಲ್ಲಿ ಇಂದಿಗೂ ಚುನಾವಣೆಗಳ£ಮತಪತ್ರ ಮೂಲಕವೇ ನಡೆಸುತ್ತಿವೆ. ಆದರೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ವಿದ್ಯುನ್ಮಾನ ಮತಯಂತ್ರ ನಮಗೇಕೆ ಬೇಕು ಎಂದು ಅವರು ಪ್ರಶ್ನಿಸಿದರು.

    ರಾಜ್ಯ ಮಹಿಳಾ ಕಾಂಗ್ರೆಸ್ ವಿದ್ಯುನ್ಮಾನ ಮತಯಂತ್ರ ಬೇಡ ಎನ್ನುವ ಮೊದಲ ಹಂತದ ಪತ್ರ ಚಳವಳಿಯನ್ನು ಒಂದು ಲಕ್ಷ ಪತ್ರವನ್ನು ರಾಷ್ಟ್ರಪತಿಗಳಿಗೆ ಬರೆಯುವ ಮೂಲಕ ಆರಂಭಿಸಿದೆ.ರಾಜ್ಯದ ಎಲ್ಲಾ ಮಹಿಳಾ ಘಟಕ ಹಾಗೂ ಜಿಲ್ಲಾ ಮಹಿಳಾ ಘಟಕಗಳು ಈ ಚಳವಳಿಯಲ್ಲಿ ಭಾಗವಹಿಸಿ ರಾಜ್ಯದ ಮೂಲೆಮೂಲೆಗಳಿಂದ ವಿದ್ಯುನ್ಮಾನ ಮತಯಂತ್ರ ಬಳಕೆ ಬೇಡ ಎಂದು ಒತ್ತಾಯಿಸಿ ರಾಷ್ಟ್ರಪತಿಗಳಿಗೆ ಪತ್ರ ಬರೆಯಲಿದ್ದೇವೆ.

     ಕಾಂಗ್ರೆಸ್‍ನ ಮಹಿಳಾ ಕಾರ್ಯಕರ್ತರು, ಪದಾಧಿಕಾರಿಗಳು, ಅಂಚೆ ಕಾರ್ಡ್‍ನಲ್ಲಿ ಕೈಬರಹದ ಮೂಲಕ ರಾಷ್ಟ್ರಪತಿಗಳಲ್ಲಿ ತಮ್ಮ ಹಕ್ಕೊತ್ತಾಯ ಮಂಡಿಸಲಿದ್ದಾರೆ ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದ ಮಂಜುಳ ನಾಯ್ಡು, ಶಾಂತ ಕೃಷ್ಣಮೂರ್ತಿ, ಸಲ್ಮಾ ತಾಜ್, ಶಾಂಭವಿ ಶೇಖರ್, ಇನ್ನಿತರ ಮುಖಂಡರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap