ಹಗರಿಬೊಮ್ಮನಹಳ್ಳಿ
ತಾಲೂಕಿನ ಬಾಚಿಗೊಂಡನಹಳ್ಳಿ ಗ್ರಾಮದ ವೃತ್ತದ ಬಳಿ ಸರ್ಕಾರಿ ವೈನ್‍ಷಾಪ್ ತೆಲೆ ಎತ್ತಿರುವುದರಿಂದ ಸಾರ್ವಜನಿಕರಿಗೆ ಬಾರಿ ಕಿರಿಕಿರ ಉಂಟಾಗುತ್ತಿದ್ದು, ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ಸೇನೆಯ ತಾಲೂಕು ಘಟಕ ಪದಾಧಿಕಾರಿಗಳು ಗ್ರಾ.ಪಂ.ಪಿಡಿಓ ಮಾಗಳದ ನಿಂಗಪ್ಪರಿಗೆ ಶನಿವಾರ ಮನವಿ ಸಲ್ಲಿಸಿದರು.
ಮನವಿ ನೀಡಿದ ಕರಸೇ ಸಂಘಟನೆಯ ಅಧ್ಯಕ್ಷ ಜಿ.ಶಿವಕುಮಾರ್ ಮಾತನಾಡಿ, ಬಾಚಿಗೊಂಡನಹಳ್ಳಿ ವೃತ್ತದ ಹತ್ತಿರ, ಅಂದರೆ, ಎರಡನೇ ಬಾಚಿಗೊಂಡನಹಳ್ಳಿಗೂ, ಹಗರಿ ಕ್ಯಾದಿಗಿಹಳ್ಳಿ, ಕಡಲಬಾಳು ಹಾಗೂ ಅಂಕಸಮುದ್ರ ಗ್ರಾಮಗಳ ಕೂಡು ರಸ್ತೆಗೆ ಹತ್ತಿರದಲ್ಲಿಯೇ ಸರ್ಕಾರದ ಎಂ.ಎಸ್.ಐ.ಎಲ್. ವೈನ್‍ಷಾಪ್ ತೆರೆದಿದೆ. ಇದಕ್ಕೆ ಹೊಂದಿಕೊಂಡಿರುವಂತೆ ರಸ್ತೆಯ ಇನ್ನೊಂದು ಭಾಗದಲ್ಲಿ ಷಾಪ್ ಎದುರಿಗೆ ಎಗ್‍ರೈಸ್ ಅಂಗಡಿ ತೆರೆದುಕೊಂಡಿದ್ದು, ಕುಡುಕರಿಗೆ ಇದೊಂದು ಬಾರ್ ಆಂಡ್ ರೆಸ್ಟೋರೆಂಟ್‍ತರ ಆಗಿದೆ ಎಂದು ಆರೋಪಿಸಿದರು.
ಮುಂದುವರೆದು ಈ ವೈನ್ಸ್ ಮುಂದಿನ ರಸ್ತೆಯಿಂದ ಕೌದಿಮಹಾಂತೇಶ್ವರ ಪ್ರೌಢಶಾಲೆ, ಕಾಲೇಜ್‍ಗೆ ತೆರಳುವ ವಿದ್ಯಾರ್ಥಿನಿಯರಿಗೆ ಮುಜುಗರ ಮತ್ತು ಕಿರಿಕಿರಿ ಉಂಟಾಗುತ್ತಿದೆ. ಕೃಷಿ ಭೂಮಿಗೆ ಬರುವ ಕೂಲಿ ಮಹಿಳೆಯರಿಗೂ ಇದಕ್ಕಿಂತ ಭಿನ್ನವೇನಿಲ್ಲ, ಈ ಬಗ್ಗೆ ಶಾಲೆಯ ಮುಖ್ಯೋಪಾಧ್ಯಯ, ಮಹಿಳಾ ಸಂಘಟನೆಗಳು ಹಾಗೂ ನೇತಾಜಿ ಯುವಕ ಸಂಘ ದೂರುಗಳನ್ನು ಬರೆದಿದ್ದಾರೆ.
ಆದರೂ ಕುಡಿದು, ತಿಂದು ತೇಗಿದ ಕುಡುಕರು ಕೃಷಿ ಭೂಮಿಯಲ್ಲಿಯೇ ಬಾಟಲಿಗಳನ್ನು, ಬಳಸಿದ ಪ್ಲಾಸ್ಟಿಕ್‍ಗಳನ್ನು ಬಿಸಾಡಿ ಹೋಗುತ್ತಿದ್ದಾರೆ, ಆದ್ದರಿಂದ ಸಂಬಂಧ ಪಟ್ಟ ಇಲಾಖೆಯವರು ಇತ್ತ ಗಮ ಹರಿಸುವ ಮೂಲಕ ಮತ್ತು ಗ್ರಾ.ಪಂ.ಆಡಳಿತ ಅಥವಾ ಅಧಿಕಾರಿಗಳು ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಶಿವಕುಮಾರ್ ಆಗ್ರಹಿಸಿದರು.ಈ ಸಂದರ್ಭದಲ್ಲಿ ಹಿರಿಯರಾದ ವೀರನಗೌಡ, ಬಸವನಗೌಡ, ಸದಸ್ಯರಾದ ಎಸ್.ಚೌಡಪ್ಪ, ವಿಶ್ವನಾಥ, ಶಿವಕುಮಾರ್, ಜಿ.ಮಂಜುನಾಥ ಸೇರಿದಂತೆ ಅನೇಕರು ಇದ್ದರು.