ಬಿರುಕು ಬಿಟ್ಟ ಶಾಲೆ : ಬಯಲಲ್ಲೆ ನಡೆಯುತ್ತಿವೆ ತರಗತಿಗಳು

ಕೊಟ್ಟೂರು

     ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮ ಪಂಚಾಯಿತಿ ಚಿನ್ನೇನಹಳ್ಳಿ ಸರ್ಕಾರಿ ಶಾಲೆಯಲ್ಲಿರೋ ಕೊಠಡಿಯು ಎರೆಡೂ ಕಡೆ ಗೋಡೆಗಳು ಭಾಗಶಃ ಬಿರುಕುಬಿಟ್ಟಿವೆ. ಅದು ಬಲಿಗಾಗಿ ಬಾಯ್ತೆರೆ ಕಾದುಕುಳಿತ ಭೂತದಂತೆ ಗೋಚರಿಸುತ್ತವೆ.

     2003-04ನೇ ಸಾಲಿನ ನಬಾರ್ಡ್ ಯೋಜನೆಯಲ್ಲಿ ಶಾಲೆಯ ನೂತನ ಕೊಠಡಿಗಳು ನಿರ್ಮಾಣವಾಗಿದ್ದು ಕಾಮಗಾರಿಯು ತೀರಾಕಳಪೆಯಾದ್ದಾಗಿದೆ ಎಂದು ದೂರಲಾಗಿದೆ. ಸರಕು ಸಾಮಾಗ್ರಿಗಳಲ್ಲಿ ಗುಣಮಟ್ಟ ಕಾಯ್ದುಕೊಂಡಿಲ್ಲ ಹಾಗೂ ನಿರ್ಮಾಣ ಹಂತದ ಕಟ್ಟಡಕ್ಕೆ ಪ್ರಾರಂಭದಲ್ಲಿ ಸಮರ್ಪಕವಾಗಿ ನೀರುಣಿಸಿಲ್ಲ ಎಂದು ಎಸ್.ಡಿ.ಎಂ.ಸಿ. ಪದಾಧಿಕಾರಿಗಳು ಮತ್ತು ಮುಖಂಡರು ಗಂಭೀರವಾಗಿ ಆರೋಪಿಸಿದ್ದಾರೆ.

    ಗೋಡೆ ಬಹುತೇಕ ಬಿರುಕುಬಿಟ್ಟಿದ್ದು ಯಾವ ಕ್ಷಣದಲ್ಲಾದರೂ ಬೀಳಬಹುದೇನೋ ಎಂಬ ಆತಂಕ ವೀಕ್ಷಿಸಿದವರಿಗೆ ಅನ್ನಿಸದೇ ಇರಲಾರದು.ಶಿಕ್ಷಣಾಧಿಕಾರಿ ಸೂಕ್ತ ಮುಂಜಾಗೃತ ಕ್ರಮಗಳನ್ನು ಶೀಘ್ರವೇ ಕೈಗೊಳ್ಳಬೇಕು ಎಂದು ಮುಖಂಡರು ಈ ಮೂಲಕಾಗ್ರಹಿಸಿದ್ದಾರೆ.

    ಅಧಿಕಾರಿಗಳ ನಿರ್ಲಕ್ಷದಿಂದ ಭವಿಷ್ಯದಲ್ಲಿ ಅಕಸ್ಮಾತ್ ಸಂಭವಿಸಬಹುದಾದ ದುರ್ಘಟನೆಗಳಿಗೆ ಅವರೇ ನೇರಹೊಣೆ ಹೊರಬೇಕಾಗುತ್ತದೆ. ಶಾಲೆಗಳಲ್ಲಿ ಮಕ್ಕಳಿಗೆ ಶುದ್ಧಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ. ಶಾಲಾ ಸುತ್ತಲೂ ನೈರ್ಮಲ್ಯದ ಕೊರತೆ ಇದೆ. ಸ್ವಚ್ಚತೆ ಇಲ್ಲದ ಕಾರಣ ಮಕ್ಕಳ ಪೋಷಕರಲ್ಲಿ ಅನಾರೋಗ್ಯದ ಭೀತಿ ಇದೆ ಎಂದು ಕೊಟ್ಟೂರು ತಾಲೂಕು ಎಸ್.ಡಿ.ಎಂ.ಸಿ. ಅಧ್ಯಕ್ಷ ಕೆ.ಎಸ್.ಹರೀಶ ಸೇರಿದಂತೆ ಗ್ರಾಮದ ಹಿರಿಯುರು ಈ ಮೂಲಕ ಎಚ್ಚರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link