ಗ್ರಾಮೀಣ ಪ್ರದೇಶಗಳಲ್ಲಿ ಸಮಾಜ ಸೇವಕರಿಗೆ ಸಹಕಾರ ಮುಖ್ಯ:-ಗೀತಾಬಾಯಿ ಭೀಮಾನಾಯ್ಕ

ಹಗರಿಬೊಮ್ಮನಹಳ್ಳಿ:

         ಪ್ರತಿಯೊಂದು ಹಳ್ಳಿಹಳ್ಳಿಗಳಲ್ಲಿ ಸಮಾಜ ಸೇವಕರು ಹುಟ್ಟಿಕೊಳ್ಳುವ ಮೂಲಕ ಸಮಾಜವನ್ನು ಸದೃಢಮಾಡುವಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ಸಮಾಜ ಸೇವಕಿ ಗೀತಾಬಾಯಿ ಭೀಮಾನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದರು.

         ಅವರು ಪಟ್ಟಣದ ಗಂ.ಭೀ.ಸ.ಪ.ಪೂ.ಕಾಲೇಜ್ ಆವರಣಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ಜಿಲ್ಲಾ ಕೃಷಿ ಉತ್ಸವದ ಎರಡನೇ ದಿನ ಭಾನುವಾರದ ವೇದಿಕೆಯಲ್ಲಿ, ಬಳ್ಳಾರಿ ಜಿಲ್ಲೆ ಮಹಿಳಾ ಪರ ನಿಲುವುಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಮಾಜ ಸೇವಕರು ಎಂದರೆ ಸರ್ಕಾರದ ಸೌಲಭ್ಯಗಳನ್ನು ಸಾಮಾನ್ಯ ಜನರಿಗೆ ಪ್ರಮಾಣಿಕ ಮುಟ್ಟಿಸುವಂತ ಕಾರ್ಯ ಅವರು ಮಾಡಬೇಕು. ಅವರಿಗೆ ಸಾಮಾನ್ಯವಾಗಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.

          ಇತ್ತೀಚಿನ ದಿನಗಳಲ್ಲಿ ದೂರದರ್ಶನಗಳಲ್ಲಿ ಕೌಟಂಬಿಕ ದಾರವಾಹಿಗಳಲ್ಲಿ ಹೆಚ್ಚಾಗಿ ಮಹಿಳೆಯರನ್ನು ಅತ್ಯಂತ ಕೆಟ್ಟದಾಗಿ ವಿಲನ್ ರೂಪದಲ್ಲಿ ತೋರಿಸುತ್ತಿದ್ದಾರೆ, ಇದರಿಂದ ಕುಟುಂಬದಲ್ಲಿರುವ ಅತ್ತೆ-ಸೊಸೆ ಹಾಗೂ ಮಕ್ಕಳು, ಮೈದುನರಲ್ಲಿ ಕೆಟ್ಟಪರಿಣಾಮ ಬೀರುತ್ತಿದೆ. ಇದು ಬದಲಾಗಬೇಕು. ಜೊತೆಗೆ ರಬ್ಬರ್‍ಂತೆ ಎಳೆಯುವ ದಾರವಾಹಿಗಳನ್ನು ನೋಡುವುದನ್ನು ಬಿಟ್ಟು ದೂರವಿರುವ ಜೊತೆಗೆ, ಆ ಸಮಯವನ್ನು ಇಂತಹ ಪ್ರಗತಿಪರ ಸಂಘಟನೆಗಳೊಂದಿಗೆ ಚರ್ಚೆ ನಡೆಸುತ್ತ ಇನ್ನಷ್ಟು ಅಭಿವೃದ್ಧಿಯಾಗಬೇಕು. ಕುಟುಂಬಗಳ ಹೊಣೆಯನ್ನು ಹೊತ್ತು ಪ್ರಗತಿಯತ್ತ ಸಾಗಬೇಕು.

          ಬೆಳ್ತಂಗಡಿಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಿರ್ದೇಶಕರಾದ ವಿವೇಕ್ ವಿ.ಪಾಯಸ್ ವ್ಯಸನ ಮುಕ್ತ ಕುಟುಂಬ ನಿರ್ಮಾಣ ವಿಷಯ ಕುರಿತು ಉಪನ್ಯಾಸ ನೀಡಿ, ಕುಟುಂಬದಲ್ಲಿ ಒಬ್ಬ ವ್ಯಸನಿ ಇದ್ದರೆ, ಅದು ಸಂಪೂರ್ಣ ಕುಟಂಬದಲ್ಲಿ ವ್ಯತಿರಿಕ್ತವಾಗಿ ಪರಿಣಾಮ ಬೀರಿ ಆ ಕುಟುಂಬ ಜೀವನ ನಿರ್ವಹಣೆಯಲ್ಲಿ ಅಸ್ತವ್ಯಸ್ತವಾಗುತ್ತದೆ ಎಂದರು. ಜಗತ್ತಿನಲ್ಲಿ ಭಾರತ ಮದ್ಯಮಾರಾಟದಲ್ಲಿ ಮೂರನೇ ಸ್ಥಾನದಲ್ಲಿದೆ.

         ಅಂದರೆ ಈ ದೇಶದಲ್ಲಿ ವ್ಯಸನಕ್ಕೆ ದಾಸರಾದವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರ್ಥ. ಕರ್ನಾಟಕದಲ್ಲಿ ಶೇ.18ರಷ್ಟು ಅಬಕಾರಿ ಶುಲ್ಕ ಮದ್ಯ ಮಾರಾಟದಿಂದ ಬರುತ್ತಿದೆ. ಇದನ್ನು ಮನಗಂಡ ಧರ್ಮಸ್ಥಳ ಸಂಸ್ಥೆಯು ಸಮಾಜವನ್ನು ವ್ಯಸನ ಮುಕ್ತ ಸಮಾಜವನ್ನಾಗಿ ಮಾಡಬೇಕು ಎಂದು ಪಣ ತೊಟ್ಟು. ಅಂತಹ ಶಿಬಿರಗಳ ಮೂಲಕ ವ್ಯಸನಮುಕ್ತರನ್ನಾಗಿಸಲು ಪ್ರಯತ್ನಿಸುತ್ತಿದೆ. ಇದೊಂದು ಶ್ಲಾಘನೀಯ ಕಾರ್ಯವೆಂದರು. ನಮ್ಮ ಸಮಾಜದಲ್ಲಿ ನೀರಲ್ಲಿ ಬಿದ್ದು ಸತ್ತರಿಗಿಂತ ವ್ಯಸನ ಚಟಕ್ಕೆ ಗಂಟುಬಿದ್ದು ಚಟ್ಟಕ್ಕೇರಿದವರೇ ಹೆಚ್ಚು ಎಂದು ಹೇಳುವ ಜೊತೆಗೆ ನಿಮ್ಮ ನಿಮ್ಮ ಕುಟುಂಬದಲ್ಲಿ ವ್ಯಸನಮುಕ್ತರನ್ನಾಗಿ ಮಾಡಿ ಎಂದು ಕರೆ ನೀಡಿದರು.

         ಗಿರ್‍ತಳಿಯ ಹೈನುಗಾರಿಕೆಯಿಂದ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡ ಕೂಡ್ಲಿಗಿ ತಾಲೂಕಿನ ಹುಲಿಕೇರಿ ಗ್ರಾಮದ ಸುಲೋಚನಾ ಸಜ್ಜನ್ ನಂತರ ಮಾತನಾಡಿ, ನಾವು ಸಮಾಜದಲ್ಲಿ ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಮನಸ್ಸುಮಾಡಿದ ನಾವುಗಳು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಿಂದ ಸಹಾಯ ಧನ ಪಡೆದು ಹಂತಹಂತವಾಗಿ ಬೆಳೆಯುತ್ತಾ ಬಂದೆವು. ಇಂದು ನಮ್ಮ ಮನೆಯಲ್ಲಿ ಉತ್ಪಾದನೆಮಾಡುತ್ತಿರುವ ಸಮಾಗ್ರಿಗಳನ್ನು ನಮ್ಮ ಮನೆಯವರು ಮಾರುಕಟ್ಟೆಗೆ ಪರಿಚಾಯಿಸುವ ಮೂಲಕ ಒಂದು ಹಂತದಲ್ಲಿ ಬೆಳೆದಿದ್ದೆವೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ ಎಂದು ತಿಳಿಸುತ್ತ ತಮ್ಮ ಅನುಭವನ್ನು ಹಂಚಿಕೊಂಡರು.

          ಕಾರ್ಯಕ್ರಮದ ಅಧ್ಯಕ್ಷತೆ ಪೂರ್ಣಿಮ ದಪ್ತರದಾರ, ಕಾಂಗ್ರೆಸ್ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಯಶೋಧ ಮಂಜುನಾಥ, ಸಮಾಜ ಕಲ್ಯಾಣ ಇಲಾಖೆಯ ಬಿ.ಶೋಭಾ ನಾಗರಾಜ್, ಹೈ.ಕ.ಪ್ರದೇಶಿಕ ನಿರ್ದೇಶಕ ಗಂಗಾಧರ ಪೈ ಇದ್ದರು.ಸಂಘಟನೆಯ ಹೈ.ಕ.ಪ್ರದೇಶಿಕ ವಿಭಾಗದ ತಾಂತ್ರಿಕ ಪ್ರಬಂಧಕರಾದ ವೈಷ್ಣವಿ ರೆಡ್ಡಿ ನಿರ್ವಹಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link