ಮಧುಗಿರಿ:
ಉಪ್ಪು ತಿಂದ ಮೇಲೇ ನೀರು ಕುಡಿಯಲೆ ಬೇಕು ಎಂಬ ಗಾಧೆ ಮಾತು ಎಲ್ಲಾರಿಗೂ ತಿಳಿದಿರುವ ವಿಚಾರ ಆದರೆ ಅಡುಗೆ ಮಾಡಲು ಬಳಸುವ ತ್ರಿಬಲ್ ರೀಫೈನ್ಡ್ ಉಪ್ಪಿನ ಪ್ಯಾಕೆಟ್‍ನಲ್ಲಿ ಹೆಚ್ಚಾಗಿ ಉಪ್ಪಿನ ಬದಲು ಮಣ್ಣಿದೆ ಎಂದು ಗ್ರಾಹಕರೊಬ್ಬರು ಆರೋಪಿಸಿದ್ದಾರೆ.
ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಾಲಯದ ಕಾಲನಿ ವಾಸಿ ಉಪ್ಪಾರಹಳ್ಳಿ ಶಿವಕುಮಾರ್ ಎಂದಿನಂತೆ ತಮ್ಮ ಮನೆಗೆ ಐಎಸ್‍ಓ 9001:2015 ರೀಫೈನ್ಡ್ ಅಯೋಡೈಜ್ಡ್ ಸಾಲ್ಟ್ ತ್ರಿಬಲ್ ಫಿಲ್ಟರ್ ಸೀ ಗೋಲ್ಡ್ ಕಂಪನಿಗೆ ಸೇರಿದ ಸುಮಾರು 3ಕೆಜಿ ಯಷ್ಟು ಉಪ್ಪಿನ ಪ್ಯಾಕೆಟ್‍ನ್ನು 54 ರೂ ಗಳನ್ನು ಕೊಟ್ಟು ಖರೀದಿಸಲಾಗಿದೆ. 908005529002 ಸಂಖ್ಯೆಯ ಬ್ಯಾಚ್ ನಂ12 ಹಾಗೂ ಡಿಸೆಂಬರ್ 2018 ರಲ್ಲಿ ತಯಾರಿಸಿದ ಉಪ್ಪಿನ ಪ್ಯಾಕೆಟ್ಗಳನ್ನು ಪಟ್ಟಣದ ಅಂಗಡಿಯೊಂದರಿಂದ ಖರೀದಿಸಿ ಮನೆಯಲ್ಲಿ ಅಡುಗೆ ಮಾಡಲು ಬಳಸಿದ್ದು ತಿನ್ನುವ ಆಹಾರದಲ್ಲಿ ಕಲ್ಲುಗಳು ಪತ್ತೆಯಾಗಿವೆ.
ಶಿವಕುಮಾರ್ ಮತ್ತು ಅವರ ಪತ್ನಿ ಮನೆಯಲ್ಲಿದ್ದ ಅಕ್ಕಿ ಹಾಗೂ ಸಂಬಾರು ಪದಾರ್ಥಗಳನ್ನು ಪರೀಕ್ಷೆ ಮಾಡಿದರೂ ಕಲ್ಲುಗಳು ಪತ್ತೆಯಾಗಲಿಲ್ಲ ಆದರೂ ಊಟದಲ್ಲಿ ಕಲ್ಲುಗಳು ಹೇಗೆ ಬಂದವು ಎಂದು ಮಾತನಾಡಿಕೊಳ್ಳುವಾಗ ಹೊಸದಾಗಿ ಖರೀದಿಸಿದ್ದ ಉಪ್ಪಿನ ಪ್ಯಾಕೆಟ್‍ನ್ನು ಒಮ್ಮೆ ಪರೀಕ್ಷಿಸಿ ನೋಡೋಣಾ ಎಂದು ಪ್ಯಾಕೆಟ್ ಒಂದನ್ನು ತೆರೆದು ಒಂದು ಲೋಟಕ್ಕೆ ನೀರಿನ ಜೊತೆಗೆ ಉಪ್ಪನ್ನು ಹಾಕಿ ಪರೀಕ್ಷೆ ಮಾಡಿದರೆ ಉಪ್ಪೆಲ್ಲಾ ನೀರಾಗಿ ಕರಗಿ ಲೋಟದ ತಳಭಾಗದಲ್ಲಿ ಅರ್ಧ ಚಮಚದಷ್ಟು ಸಣ್ಣ ಸಣ್ಣ ಕಲ್ಲುಗಳು ಹಾಗೂ ಮರಳು ಗೋಚರವಾಗಿವೆ.
ಕಳಪೆ ಗುಣಮಟ್ಟದ ಉಪ್ಪು ಖರೀದಿಸುತ್ತಿರುವವರು ನೀರು ಕುಡಿಯುವ ಸಂಧರ್ಭ ಈಗ ಎದುರಾಗಿದೆ.ಈ ರೀತಿಯಾಗಿ ಕಡಿಮೆ ಬೆಲೆಯ ಉಪ್ಪು ಸೇರಿದಂತೆ ಮತ್ತಿತತರ ಆಹಾರ ಪದಾರ್ಥಗಳನ್ನು ಏಜೆಂಟರು ಹೆಚ್ಚಿನ ಕಮೀಷನ್ ಆಸೆಗಾಗಿ ಮಾರಾಟ ಗ್ರಾಹಕರಿಗೆ ಮಾಡುತ್ತಿದ್ದಾರೆ ಕಳಪೆ ಮಟ್ಟದ ಆಹಾರ ಪದಾರ್ಥಗಳ ಮಾರಾಟದಿಂದಾಗಿ ಗ್ರಾಹಕರಿಗೆ ಬಾರಿ ಅನಾನುಕೂಲ ವಾಗುತ್ತಿದ್ದು ಮಣ್ಣಿನಿಂದ ಕೂಡಿದ ಕಳಪೆ ಗುಣಮಟ್ಟದ ಉಪ್ಪುನ್ನು ಮಾರಾಟ ಮಾಡಿರುವ ಕಂಪನಿಯ ವಿರುದ್ಧ ಸಂಭಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ನಾಗರೀಕರಿಗೆ ಆಹಾರ ಭದ್ರತೆಯನ್ನು ಒದಗಿಸಿಕೊಡುವಂತೆ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
