ರಾಹುಲ್ ಸಭೆ ಬಳಿಕ ಹೆಚ್ಚಾದ ಪೈಪೋಟಿ

ಹಾವೇರಿ

        ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಹಾವೇರಿಯಲ್ಲಿ ಕಳೆದ ಮಾ. 9 ರಂದು ಬೃಹತ್ ಸಾರ್ವಜನಿಕ ರ್ಯಾಲಿಯನ್ನು ಉದ್ಧೇಶಿಸಿ ಮಾತನಾಡಿದರು. ಅಂದಾಜು ಲಕ್ಷದಷ್ಟು ಅಭಿಮಾನಿಗಳು ರಾಹುಲ್ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಈ ರ್ಯಾಲಿಯ ಬಳಿಕ ಈ ಕ್ಷೇತ್ರದ ಕೈ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿದೆ.

         ಈ ಬಾರಿ ಟಿಕೆಟ್‍ಗಾಗಿ ಪ್ರಮುಖವಾಗಿ ಮೂರು ಜನ ಆಕಾಂಕ್ಷಿಗಳು ಬಾರಿ ಪೈಪೋಟಿ ನಡೆಸಿದ್ದಾರೆ. ಇದರಲ್ಲಿ ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತರು ಇದ್ದಾರೆ. ಆ ಕಾರಣದಿಂದ ಲಿಂಗಾಯತರಿಗೆ ಟಿಕೆಟ್ ನೀಡಿದರೆ, ಕಾಂಗ್ರೆಸ್ ಕೋಟೆಯನ್ನು ಮರಳಿ ಪಡೆದುಕೊಳ್ಳುವದರಲ್ಲಿ ಸಂಶಯವಿಲ್ಲ. ಹಾಗಾಗಿ ಪಕ್ಷದ ಮುಖಂಡರು ಲಿಂಗಾಯತರಿಗೆ ಮಣೆ ಹಾಕುವ ಸಾಧ್ಯತೆ ಹೆಚ್ಚಾಗಿದೆ. ಏನೇ ಆದರೂ ರಾಹುಲ್ ಗಾಂಧಿ ಆಗಮನದ ಬಳಿಕ ಜಿಲ್ಲಾ ಕಾಂಗ್ರೆಸ್‍ನಲ್ಲಿ ನವ ಚೈತನ್ಯ ತುಂಬಿದ್ದು, ಯಾರಿಗೆ ಟಿಕೆಟ್ ಸಿಕ್ಕರು, ಗೆಲ್ಲಿಸಿಕೊಂಡು ಬರುತ್ತೇವೆ ಎನ್ನುತ್ತಾರೆ ಪಕ್ಷದ ಕಾರ್ಯಕರ್ತರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link