ಪುಲ್ವಾಮ ದಾಳಿ ಹೇಳಿಕೆ : ಸಿಎಂ ವಿರುದ್ಧ ವಿಧಾನಸೌಧ ಠಾಣೆಗೆ ಬಿಜೆಪಿ ದೂರು

ಬೆಂಗಳೂರು:

      ಪುಲ್ವಾಮಾ ದಾಳಿ ಕುರಿತು ಸಂಚು ತಮಗೆ ಎರಡು ವರ್ಷಗಳ ಹಿಂದೆಯೇ ತಿಳಿದಿತ್ತು ಎಂದು ಹೇಳಿಕೆ ನೀಡಿರುವ ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ದೂರು ನೀಡಿದೆ.

      ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಚಿ. ನಾ. ರಾಮು ಅವರು ಇಂದು ಪೊಲೀಸ್ ಠಾಣೆಗೆ ತೆರಳಿ ಠಾಣಾಧಿಕಾರಿಗೆ ದೂರು ಸಲ್ಲಿಸಿದರು. ನಂತರ ಸುದ್ದಿಗಾರರ ಜೊತೆ ಮಾತನಾಡಿ, ಪುಲ್ವಾಮ ದಾಳಿ ನಡೆಯುತ್ತದೆ ಹಾಗೂ ಲೋಕಸಭಾ ಚುನಾವಣೆ ಗಿಂತ ಮೊದಲೇ ನಡೆಯುತ್ತದೆ ಎಂದು ಎರಡು ವರ್ಷಗಳ ಹಿಂದೆಯೇ ನನಗೆ ತಿಳಿದಿತ್ತು ನಿವೃತ್ತ ಸೈನಿಕ ಅಧಿಕಾರಿಯೊಬ್ಬರು ನನಗೆ ಈ ವಿಚಾರ ತಿಳಿಸಿದ್ದರು ಎಂದು ಕುಮಾರಸ್ವಾಮಿ ತಿಳಿಸಿದ್ದರು.

      ಈ ವಿವರ ತಿಳಿದಿದ್ದೂ ಅವರು ವಿವರ ಮುಚ್ಚಿಟ್ಟದ್ದು ಸರಿಯಲ್ಲ. ಸಂವಿಧಾನ ಬದ್ಧವಾಗಿ ಪ್ರಮಾಣವಚನ ಸ್ವೀಕರಿಸಿದ ಅವರು ಕೇಂದ್ರ ಸರ್ಕಾರಕ್ಕೆ ಮಾಹಿತಿ ಕೊಡಬೇಕಿತ್ತು. ಅವರು ಈ ಮಾಹಿತಿ ನೀಡಿದ್ದರೆ ಪುಲ್ವಾಮಾ ಘಟನೆ ನಡೆಯುತ್ತಲೇ ಇರಲಿಲ್ಲವೇನೋ. ಸಿಎಂ ಹೇಳಿಕೆಯನ್ನು ನಾವುಧಾಕಲಿಸಿಕೊಂಡಿದ್ದೇವೆ. ಸಿಎಂ ಮಾತಿನ ಸಿಡಿ ಮಾಡಿಕೊಂಡಿದ್ದು ಈ ದಾಖಲೆಯನ್ನೂ ಪೊಲೀಸ್ ಅಧಿಕಾರಿಗಳಿಗೆ ನೀಡಿದ್ದೇವೆ.ಪರಿಶೀಲಿಸುವ ಭರವಸೆ ಸಿಕ್ಕಿದೆ ಎಂದರು.

      ದೇಶದ ಜವಾಬ್ದಾರಿಯುತ ನಾಗರೀಕರಾಗಿ ಸಿಎಂ ಈ ಹೇಳಿಕೆ ನೀಡಿಲ್ಲ. ಕಾನೂನು ಬಾಹಿರ ಹೇಳಿಕೆಯನ್ನು ಸಿಎಂ ನೀಡಿದ್ದಾರೆ ಅಲ್ಲದೆ ಇದ್ದಾರೆ ಎಂದು ನಾವು ದೂರಿನಲ್ಲಿ ತಿಳಿಸಿದ್ದೇವೆ. ಸಂವಿಧಾನ ಬದ್ಧವಾಗಿ ನಡೆದುಕೊಳ್ಳುತ್ತೇನೆ ಸಂವಿಧಾನದ ರಕ್ಷಣೆ ಮಾಡುತ್ತೇನೆ ಎಂದು ಹೇಳಿದವರು ದೇಶದ ಮಹತ್ವದ ಕಾನೂನುಬಾಹಿರ ಚಟುವಟಿಕೆಯನ್ನು ತಿಳಿದು ಮುಚ್ಚಿಟ್ಟಿರುವುದು ಅಕ್ಷಮ್ಯ ಅಪರಾಧ.

       ದೇಶದ ಭದ್ರತಾ ಕಾಯ್ದೆ ಅಡಿ ಅವರು ತಪ್ಪು ಮಾಡಿದ್ದಾರೆ. ಇದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದೇವೆ. ರಾಷ್ಟ್ರೀಯ ಭದ್ರತಾ ಕಾಯ್ದೆ, ದೇಶದ್ರೋಹ, ಭಯೋತ್ಪಾದಕ ನಿಗ್ರಹ ಕಾಯ್ದೆ, ಕಾನೂನು ಬಾಹಿರ ಚಟುವಟಿಕೆ ಗಳ ನಿಗ್ರಹ ಕಾಯ್ದೆ ಅಡಿ ನಾವು ದೂರು ಸಲ್ಲಿಸಿದ್ದೇವೆ. ಅಲ್ಲದೇ ಭಾರತೀಯ ದಂಡಸಂಹಿತೆ 123, ಕಲಂ 121 ಎ ಅಡಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೇವೆ. ಪರಿಶೀಲಿಸುವ ಭರವಸೆ ಸಿಕ್ಕೆ, ಇದೇ ಆಧಾರದ ಅಡಿ ನ್ಯಾಯಲಯ, ರಾಜ್ಯಪಾಲರು, ರಾಷ್ಟ್ರಪತಿ ಗಳವರೆಗೂ ನ್ಯಾಯಕ್ಕಾಗಿ ಮನವಿ ಮಾಡುತ್ತೇವೆ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap