ಮಾಸ್ಕ್ ದಂಡ ವಸೂಲಿಗೆ ಕಾಂಗ್ರೆಸ್ ಆಕ್ರೋಶ

ಬೆಂಗಳೂರು

      ಮಾಸ್ಕ್ ದಂಡ ವಸೂಲಿಗೆ ರಾಜ್ಯ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ,ಮಾಸ್ಕ್ ಬಗ್ಗೆ ಸರ್ಕಾರ ಸರಿಯಾಗಿ ಅರಿವು ಮೂಡಿಸಬೇಕು.

      ತುಂಬಾ ಹೊತ್ತು ಮಾಸ್ಕ್ ಧರಿಸಿದರೆ ಉಸಿರಾಟಡಲು ಸಮಸ್ಯೆಯಾಗುತ್ತದೆ.ಹೀಗೆ ಹಲವು ಸಮಸ್ಯೆ ಇದೆ.ಮಾಸ್ಕ್ ದಂಡ ಹೆಚ್ಚಳ ಮೂಲಕ ಅಧಿಕಾರಿಗಳಿಗೆ ವಸೂಲಿಗೆ ದಾರಿ ಮಾಡಿಕೊಟ್ಟಿದೆ.ಮಾಸ್ಕ್ ದಂಡದ ನೆಪದಲ್ಲಿ ಸರ್ಕಾರ ಜನರಿಗೆ ಕಿರುಕುಳ ಕೊಡುತ್ತಿದೆ.ಜನರನ್ನು ಹೆದರಿಸಿ ಬೆದರಿಸುವುದು ಅಲ್ಲ.ಕಾಂಟ್ರಾಕ್ಟರ್ ಗಳು ಮತ್ತು ಅಧಿಕಾರಿಗಳನ್ನು ಹೆದರಿಸುವ ರೀತಿಯಲ್ಲಿ ಜನರನ್ನು ಹೆದರಿಸುತ್ತಿದ್ದಾರೆ.ಮಾಸ್ಕ್ ಬಗ್ಗೆ ಸರಿಯಾಗಿ ತಿಳುವಳಿಕೆ ಮೂಡಿಸಬೇಕೇ ಹೊರತು ವಸೂಲಿಗೆ ಅವಕಾಶ ಕೊಡಬಾರದು ಎಂದರು.

      ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ,ಸರ್ಕಾರ ಮಾಸ್ಕ್ ಬಗ್ಗೆ ಸಮರ್ಪಕವಾಗಿ ಜಾಗೃತಿ ಮೂಡಿಸಬೇಕು.ಜನಕ್ಕೆ ಮಾಸ್ಕ್ ಬಗ್ಗೆ ಅರಿವು ಮೂಡಿಸಿ ಒತ್ತಾಯ ಹೇರಲಿ.ದಂಡದ ಪ್ರಮಾಣ ಹೆಚ್ಚಳ ಸರಿಯಲ್ಲ.ಯಾವ ಕಾನೂನು ಮೂಲಕ ದಂಡ ಹೆಚ್ಚಿಸಿದ್ದಾರೆಯೋ ಗೊತ್ತಿಲ್ಲ.ಹಾಲಿ ಇರುವ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ.ಆದರೆ ದಂಡ ಹೆಚ್ಚಳ ಮೂಲಕ ಮಾರ್ಷಲ್ ಲಾ ಜಾರಿಗೆ ತಂದಿರುವುದು ಸರಿಯಲ್ಲ ಎಂದು ಟೀಕಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link