ಸುಗ್ರೀವಾಜ್ಞೆ ವಿರೋಧಿಸಿ ರಾಜ್ಯಪಾಲರಿಗೆ ಕಾಂಗ್ರೆಸ್ ಪತ್ರ..!

ಬೆಂಗಳೂರು    

ಶಾಸನ ಸಭೆ ಅಂಗೀಕಾರ ಪಡೆಯದ ವಿಧೇಯಕಗಳ ಮರು ಸುಗ್ರೀವಾಜ್ಞೆ ಹೊರಡಿಸುವುದು ಸಂವಿಧಾನ ವಿರೋಧಿಯಾಗಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದು ಎಡಪಕ್ಷಗಳ ಮುಖಂಡರು ರಾಜ್ಯಪಾಲ ವಜೂಭಾಯಿ ವಾಲಾ ಅವರನ್ನು ಒತ್ತಾಯಿಸಿದ್ದಾರೆ.

    ಈ ಕುರಿತು ರಾಜ್ಯಪಾಲರಿಗೆ ಪತ್ರ ಬರೆದಿರುವ ಸಿಪಿಐಎಂ ಕಾರ್ಯದರ್ಶಿಗಳಾದ ಯು. ಬಸವರಾಜು, ಸ್ವಾತಿ ಸುಂದರೇಶ್, ಎಫ್.ಬಿ. ಕಾರ್ಯದರ್ಶಿ ಜಿ.ಆರ್.ಶಿವಶಂಕರ್, ಸಿಪಿಐಎಂಎಲ್ ಲಿಬರೇಷನ್ ಕಾರ್ಯದರ್ಶಿ ಕ್ಲಿಪ್ಟನ್? ರೈತ ವಿರೋಧಿ ಭೂ ಸುಧಾರಣೆ ತಿದ್ದುಪಡಿ ಸುಗ್ರೀವಾಜ್ಞೆ, ಎಪಿಎಂಸಿ ತಿದ್ದುಪಡಿ ಸುಗ್ರೀವಾಜ್ಞೆ, ಕಾರ್ಮಿಕ ವಿರೋಧಿ, ಕಾರ್ಮಿಕ ಕಾನೂನುಗಳ ತಿದ್ದುಪಡಿ ಸುಗ್ರೀವಾಜ್ಞೆ ಗಳ ವಿಧೇಯಕಗಳು ಕಳೆದ ವಿಧಾನ ಮಂಡಲದ ಅಧಿವೇಶನದಲ್ಲಿ ಶಾಸನ ಸಭೆಯ ಅನುಮೋದನೆ ಪಡೆಯಲು ವಿಫಲವಾಗಿವೆ. ಮಾತ್ರವಲ್ಲ, ರಾಜ್ಯದಾದ್ಯಂತ ರೈತರು, ಕೂಲಿಕಾರರು, ಕಾರ್ಮಿಕರು, ಪ್ರಗತಿಪರ ನಾಗರೀಕರು, ವಿರೋಧ ಪಕ್ಷಗಳು ಬೀದಿಗಿಳಿದು ಪ್ರತಿರೋಧಿಸಿವೆ. ಅಲ್ಲೂ ಜನಗಳ ವಿಶ್ವಾಸ ಗಳಿಸುವಲ್ಲಿ ಅವು ತೀವ್ರವಾಗಿ ಸೋತಿವೆ ಎಂದು ಹೇಳಿದ್ದಾರೆ.

   ಈ ಹಿನ್ನೆಲೆಯಲ್ಲಿ ಮತ್ತೆ ಸದರಿ ವಿಧೇಯಕಗಳನ್ನು ಪುನಃ ಹಿಂಬಾಗಿಲಿನಿಂದ ಮರಳಿ ಸುಗ್ರೀವಾಜ್ಞೆಗಳಾಗಿ ಜಾರಿಗೆ ತರಲು ಮಂತ್ರಿಮಂಡಲ ಕ್ರಮವಹಿಸಿರುವುದು ತೀವ್ರ ಖಂಡನೀಯವಾಗಿದೆ. ಸರ್ವೋಚ್ಛ ನ್ಯಾಯಾಲಯದ ಸಂವಿಧಾನ ಪೀಠವು 2017ರಲ್ಲಿ ?ಕೃಷ್ಣಕುಮಾರ್ ಸಿಂಗ್ ಮತ್ತು ಬಿಹಾರ ಸರ್ಕಾರ? ಪ್ರಕರಣದಲ್ಲಿ ಶಾಸನ ಸಭೆಯ ಅನುಮೋದನೆ ಪಡೆಯದ ಸುಗ್ರೀವಾಜ್ಞೆಗಳನ್ನು ಪುನರ್ ಸುಗ್ರೀವಾಜ್ಞೆಯಾಗಿ ಹೊರಡಿಸುವುದು ?ಸಂವಿಧಾನಕ್ಕೆ ಎಸಗುವ ವಂಚನೆಯಾಗಿದೆ? ಎಂದಿದೆ. ಆದಾಗಲೂ, ರಾಜ್ಯ ಸರಕಾರ ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ವಿರುದ್ದವಾಗಿ ಕ್ರಮವಹಿಸಲು ಮುಂದಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಆದ್ದರಿಂದ, ಯಾವುದೇ ಕಾರಣಕ್ಕೂ ರಾಜ್ಯ ಸಚಿವ ಸಂಪುಟದ ಶಿಫಾರಸ್ಸಿನಂತೆ ರೈತ ವಿರೋಧಿ, ಕಾರ್ಮಿಕ ವಿರೋಧಿ ತ್ರಿವಳಿ ಸುಗ್ರೀವಾಜ್ಞೆಗಳನ್ನು ಸಂವಿಧಾನ ವಿರೋಧಿಯಾಗಿ, ಮರಳಿ ಹೊರಡಿಸಬಾರದೆಂದು ಮತ್ತು ಅವುಗಳನ್ನು ತಡೆ ಹಿಡಿಯಬೇಕೆಂದು ಆಗ್ರಹಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap