ಕೊರಟಗೆರೆ-ಗೌರಿಬಿದನೂರು ಗಡಿ ಭಾಗ : ಕೊರೋನಾ ಚೆಕ್ ಪೋಸ್ಟ್..!

ಕೊರಟಗೆರೆ

     ಕೊರಟಗೆರೆ ಗಡಿ ಭಾಗದ ಗೌರಿಬಿದನೂರು ತಾಲ್ಲೂಕಿನಲ್ಲಿ ಎರಡು ಸೋಂಕಿತ ಕೊರೋನಾ ಪತ್ತೆಯಾದ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಕೊರಟಗೆರೆ ಗಡಿಭಾಗದ ಅರಸಾಪುರ ಬಳಿಯ ಕಾಶಾಪುರ ಗೇಟ್ ಬಳಿ ಚೆಕ್‍ಪೋಸ್ಟ್ ನಿರ್ಮಿಸಿ ಕೊರಟಗೆರೆ ಭಾಗದ ಕಡೆ ಬರುವ ಎಲ್ಲಾ ಜನರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.

     ಇತ್ತೀಚೆಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಕೊರೋನಾ ವೈರಸ್ ಮಹಾಮಾರಿಗೆ ಭಯ ಪಡುತ್ತಿರುವ ಸಂದರ್ಭದಲ್ಲಿ, ಕೊರಟಗೆರೆ ಗಡಿ ಭಾಗದ ಗೌರಿಬಿದನೂರು ತಾಲ್ಲೂಕಿನಲ್ಲಿ ಕೊರೋನಾ ಸೋಂಕಿತರು ಪತ್ತೆಯಾದ ಕಾರಣ ತಾಲ್ಲೂಕಿನಲ್ಲೂ ಭಯದ ವಾತಾವರಣ ಸೃಷ್ಟಿಯಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಗೌರಿಬಿದನೂರು ಭಾಗದ ಕಡೆಯಿಂದ ಬರುವಂತಹ ಎಲ್ಲರನ್ನು ಚೆಕ್‍ಪೋಸ್ಟ್‍ನಲ್ಲಿ ಪರೀಕ್ಷೆಗೆ ಒಳ ಪಡಿಸಲಾಗುತ್ತಿದೆ.

     ಕೊರೋನಾ ಮಾಹಾಮಾರಿಗೆ ಇಡೀ ರಾಜ್ಯವೇ ಭಯ ಪಡುತ್ತಿದೆ. ಇಂತಹ ಸಂದರ್ಭದಲ್ಲಿ ಕೊರಟಗೆರೆ ಗಡಿ ಭಾಗ ಗೌರಿಬಿದನೂರಿನಲ್ಲಿ ಕೊರೋನಾ ಸೋಂಕಿತ ವ್ಯಕ್ತಿ ಪತ್ತೆಯಾಗಿರುತ್ತಾನೆ. ಗೌರಿಬಿದನೂರು ಭಾಗದ ಜನತೆಯು ಕೊರಟಗೆರೆ ತಾಲ್ಲೂಕಿನಲ್ಲಿ ಹೆಚ್ಚು ವ್ಯವಹಾರ ಇಟ್ಟುಕೊಂಡಿದೆ. ಈ ದೃಷ್ಟಿಯಿಂದ ಗೌರಿಬಿದನೂರು ಕಡೆಯಿಂದ ಬರುವಂತಹ ಎಲ್ಲಾ ಜನರ ಮೇಲೆ ಕೊರಟಗೆರೆ ಆರೋಗ್ಯ ಇಲಾಖೆ ವಿಶೇಷ ಕಾಳಜಿ ವಹಿಸಿ, ಮುನೆಚ್ಚರಿಕಾ ಕ್ರಮವಾಗಿ ಸೋಂಕು ತಡೆಯುವ ಉದ್ದೇಶದಿಂದ ಚೆಕ್‍ಪೋಸ್ಟ್ ಹಾಗೂ ಆಸ್ಪತ್ರೆಯಲ್ಲಿ ವಿಶೇಷ ಕಾಳಜಿ ವಹಿಸಲಾಗುತ್ತಿದೆ.

     ರಾಜ್ಯ ಆರೋಗ್ಯ ಇಲಾಖೆಯ ಮುನ್ನೆಚ್ಚರಿಕಾ ಕ್ರಮದಂತೆ, ಕೊರೋನಾ ವೈರಸ್ ತಡೆಗೆ ತಾಲ್ಲೂಕಿನಲ್ಲೂ ಆರೋಗ್ಯ ಇಲಾಖೆಯಿಂದ ಅನೇಕ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳಿಗೂ ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಕೈಗೊಂಡು, ಅನಾವಶ್ಯಕವಾಗಿ ಜನರನ್ನು ಆಸ್ಪತ್ರೆಯ ಒಳಗೆ ಬರದಂತೆ ತಡೆಯಲಾಗುತ್ತಿದೆ. ಅನಿವಾರ್ಯತೆ ಇರುವ ರೋಗಿಗಳ ಭೇಟಿಗಷ್ಟೆ ಜನರನ್ನು ಆಸ್ಪತ್ರೆಯ ಒಳಗೆ ಬಿಡುತ್ತಿದ್ದು, ಕೆಮ್ಮು, ಶೀತ, ನೆಗಡಿ ಇರುವ ರೋಗಿಗಳಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆಕೈಗೊಂಡು ಕೊರೊನಾ ವೈರಸ್ ತಡೆಗೆ ವಿಶೇಷ ಕ್ರಮ ಜರುಗಿಸಲಾಗುತ್ತಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ