ಬೆಂಗಳೂರು
ರಾಜ್ಯದ ಕೊರೋನಾ ಹಾಟ್ ಸ್ಪಾಟ್ ಗಳಲ್ಲಿ ಒಂದಾಗಿರುವ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಪರೀಕ್ಷೆಗೆ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ.ಇನ್ನು ಮುಂದೆ ನಿಮ್ಮ ಮನೆ ಬಾಗಿಲಿಗೆ ಕೊರೊನಾ ಟೆಸ್ಟಿಂಗ್ ವ್ಯವಸ್ಥೆ ಮನೆ ಬಾಗಿಲಿಗೆ ಬರಲಿದೆ. ಕೊರೊನಾ ಟೆಸ್ಟಿಂಗ್ ಮೊಬೈಲ್ ಬೂತ್ ಬೆಂಗಳೂರಿನಲ್ಲಿ ಶುರುವಾಗಲಿದೆ. ಇದು ಡೋರ್ ಟೂ ಡೋರ್ ಸೇವೆ ನೀಡಲಿದೆ. ನಾಳೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೊರೊನಾ ಟೆಸ್ಟಿಂಗ್ ಮೊಬೈಲ್ ಬೂತ್‌ಗಳನ್ನು ಉದ್ಘಾಟನೆ ಮಾಡಲಿದ್ದಾರೆ.
ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಮೊಬೈಲ್ ಬೂತ್ ಪರಿಚಯ ಮಾಡಲಾಗುತ್ತಿದೆ. ಮನೋಜ್ ಎಂಬ ವ್ಯಕ್ತಿ ಈ ಮೊಬೈಲ್ ಬೂತ್ ಪರಿಚಯ ಮಾಡಿದ್ದಾರೆ. ಸದ್ಯ ಪ್ರಾಯೋಗಿಕವಾಗಿ 2 ಬೂತ್‌ಗಳನ್ನು ತಯಾರಿ ಮಾಡಲಾಗಿದೆ.
ಸರ್ಕಾರದ ಮಾನ್ಯತೆ ಕೊಟ್ಟರೆ ಮತ್ತಷ್ಟು ಬೂತ್ ಗಳು ಬೆಂಗಳೂರಿಗೆ ಬರಲಿದೆ. ಮನೋಜ್ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆ ಜೊತೆ ಟೈ ಅಪ್ ಮಾಡಿಕೊಂಡಿದ್ದಾರೆ. ಮನೋಜ್ ಅವರ ಈ ಆವಿಷ್ಕಾರ ಮನೆ ಮನೆಗೆ ಹೋಗಿ ಕೊರೊನಾ ಪರೀಕ್ಷೆ ಮಾಡಲು ಸಹಾಯ ಮಾಡುತ್ತದೆ.