ಕಗ್ಗಲೀಪುರ ಕೆರೆ ಬಳಿ ಗೋಣಿಚೀಲದಲ್ಲಿ ಶವ ಪತ್ತೆ…!!!

ಬೆಂಗಳೂರು

      ನಗರದ ಹೊರವಲಯದ ಕಗ್ಗಲೀಪುರದ ಕೆರೆಯ ಬಳಿ ಗೋಣಿ ಚೀಲದಲ್ಲಿಕಟ್ಟಿ ಎಸೆದು ಹೋಗಿದ್ದ ಕೊಲೆ ಪ್ರಕರಣವನ್ನು ಬೇಧಿಸಿರುವ ಕಗ್ಗಲೀಪುರದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

      ಕಬ್ಬಿಣದ ವಸ್ತುಗಳನ್ನು ಕಳವು ಮಾಡುತ್ತಿದ್ದವರನ್ನು ಕೆಲಸದಿಂದ ತೆಗೆಸಿ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದ ಕಾರಣಕ್ಕೆ ಸೂಪರ್ ವೈಸರ್ ನನ್ನು ಕೊಲೆ ಮಾಡಿದ್ದಾಗಿ ಬಂಧಿತ ನಾಲ್ವರು ಆರೋಪಿಗಳು ಒಪ್ಪಿಕೊಂಡಿದ್ದಾರೆ

      ಬೇರೆಲ್ಲೂ ಕೊಲೆಗೈದು ಗೋಣಿ ಚೀಲದಲ್ಲಿ ಕಗ್ಗಲೀಪುರದ ಕೆರೆ ಬಳಿಯ ರಸ್ತೆ ಕಾಮಗಾರಿ ಸ್ಥಳದಲ್ಲಿ ಎಸೆದು ಪರಾರಿಯಾದ್ದ ಬೆಂಗಳೂರು ದಕ್ಷಿಣ ತಾಲೂಕಿನ ಗಾಂಧಿನಗರದ ಮಹಮದ್ ಏಜಾಜ್ ಷರೀಫ್, ಮಹಮದ್ ಪ್ಯಾರು, ಸುಹೇಲ್ ಅಹಮದ್ ಹಾಗೂ ಸುಬ್ರಮಣ್ಯಪುರ ನಿವಾಸಿ ಇಸ್ಮಾಯಿಲ್ ನನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೋಣಿಯಲ್ಲಿ ಪತ್ತೆ

      ಕಗ್ಗಲೀಪುರದ ಕೆರೆಯ ಬಳಿಯ ರಸ್ತೆ ಅಗಲೀಕರಣದ ಸ್ಥಳದಲ್ಲಿ ಕಳೆದ ಫೆ.7 ರಂದು ಅಪರಿಚಿತ ವ್ಯಕ್ತಿಯ ಶವ ಗೋಣಿ ಚೀಲದಲ್ಲಿ ಪತ್ತೆಯಾಗಿತ್ತು. ಮೃತ ವ್ಯಕ್ತಿಯ ಎರಡು ಕಾಲುಗಳನ್ನು ಕತ್ತರಿಸಿ ಚೀಲದಲ್ಲಿ ಕಟ್ಟಿ ತಂದು ಎಸೆದಿದ್ದರು.

      ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡ ಕಗ್ಗಲೀಪುರ ಪೊಲೀಸರು ತನಿಖೆ ನಡೆಸಿದಾಗ ಮೃತ ವ್ಯಕ್ತಿ ಆಂಧ್ರಪ್ರದೇಶ ಕಡಪ ಜಿಲ್ಲೆ ಪುಲಿವೆಂದಲ ತಾಲೂಕಿನ ಗಂಗಾರಪುವಂಡ್ಲಪಲ್ಲಿ ಗ್ರಾಮದ ಸಗಿಲಿ ನಾಗೇಶ್ವರರೆಡ್ಡಿ (32) ಎಂದು ತಿಳಿದುಬಂದಿತ್ತು.

     ಕಗ್ಗಲೀಪುರ ಟೌನ್ ಬೈಪಾಸ್ ರಸ್ತೆಯ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಜೀಪ್ ಚಾಲಕನಾಗಿದ್ದ ಏಜಾಜ್ ಷರೀಫ್, ಕಾಮಗಾರಿಗೆ ಬಳಸುವ ಕಬ್ಬಿಣದ ವಸ್ತುಗಳನ್ನು ಹಾಕಿಕೊಳ್ಳಲು ಮತ್ತು ಕೆಲಸಗಾರರು ಉಳಿದುಕೊಳ್ಳಲು ನಿರ್ಮಿಸಿದ್ದ ಶೆಡ್ ಬಳಿ ಹಾಕಿದ್ದ ಸೆಂಟ್ರಿಂಗ್ ಕಬ್ಬಿಣದ ವಸ್ತುಗಳನ್ನು ಮಹಮದ್ ಪ್ಯಾರುನೊಂದಿಗೆ ಸೇರಿಕೊಂಡು ಆಗಾಗ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದರು.

ಕಬ್ಬಿಣದ ಪೈಪ್‍ನಿಂದ ಕೊಲೆ

     ಕಳ್ಳತನ ಗೊತ್ತಾಗಿ ಸೂಪರ್ ವೈಸರ್ ನಾಗೇಶ್ವರ ರೆಡ್ಡಿಗೆ ಗೊತ್ತಾಗಿ ಕೆಲಸದಿಂದ ತೆಗೆಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ಏಜಾಜ್ ಷರೀಫ್‍ಗೆ ಎಚ್ಚರಿಕೆ ನೀಡಿದ್ದರು. ಇದರಿಂದ ಆಕ್ರೋಶಗೊಂಡ ಷರೀಪ್ ನಾಗೇಶ್ವರ ರೆಡ್ಡಿ ಅವರನ್ನು ಕೊಲೆ ಮಾಡಲು ನಿರ್ಧರಿಸಿದ್ದ ಆರೋಪಿಗಳಾದ ಮಹಮ್ಮದ್ ಏಜಾಜ್ ಷರೀಫ್ ಮತ್ತು ಮಹಮ್ಮದ್ ಪ್ಯಾರು ಸಂಚು ರೂಪಿಸಿ ಫೆ.6 ರ ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಶೆಡ್ಡಿನಲ್ಲಿದ್ದ ಕಬ್ಬಿಣದ ಪೈಪಿನಿಂದ ತಲೆಗೆ ಹೊಡೆದು ನಾಗೇಶ್ವರ ರೆಡ್ಡಿರನ್ನು ಕೊಲೆ ಮಾಡಿದ್ದರು.

     ಕೊಲೆಯನ್ನು ಕೃತ್ಯವನ್ನು ಮರೆಮಾಚಲು ಮರುದಿನ ಫೆ.7 ರ ರಾತ್ರಿ ಮೃತನ ಎರಡೂ ಕಾಲುಗಳನ್ನು ಚಾಕುವಿನಿಂದ ಕತ್ತರಿಸಿ ಬಳಿಕ ಅವುಗಳನ್ನು ಅಲ್ಲೇ ಪಕ್ಕದಲ್ಲಿದ್ದ ಲೇಔಟ್ ಯುಜಿಡಿ ಮ್ಯಾನ್ ಹೋಲ್ ಗೆ ಎಸೆದು ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿ ಕಗ್ಗಲೀಪುರ ಕೆರೆಯ ಬಳಿ ತಂದು ಎಸೆದು ಪರಾರಿಯಾಗಿದ್ದರು.

     ಕೊಲೆ ಪ್ರಕರಣ ಬೇಧಿಸಿದ ಪೊಲೀಸರು ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ವಾಹನ, ಆಯುಧಗಳು ಮತ್ತು ಕಳ್ಳತನವಾಗಿದ್ದ ಸುಮಾರು ಮೂರೂವರೆ ಟನ್ ತೂಕದ ಕಬ್ಬಿಣದ ಸೆಂಟ್ರಿಂಗ್ ವಸ್ತುಗಳ ಸಮೇತ ವಾಹನವನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಸ್‍ಪಿ ರಮೇಶ್ ಬನ್ನೋತ್ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap