ಬೆಂಗಳೂರು
ಮುಂದೆ ಹೋಗುತ್ತಿದ್ದ ಲಾರಿಗೆ ಹಿಂದಿನಿಂದ ವೇಗವಾಗಿ ಬಂದ ಸ್ಕೂಟರ್ ಡಿಕ್ಕಿ ಹೊಡೆದು ದಂಪತಿ ಮೃತಪಟ್ಟಿರುವ ದುರ್ಘಟನೆ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಆರ್‍ಟಿ ನಗರದ ಶಂಬರಸನ್ (29) ಹಾಗೂ ಅವರ ಪತ್ನಿ ಪುಷ್ಪಾ (24)ಎಂದು ಮೃತ ದಂಪತಿಯನ್ನು ಗುರುತಿಸಲಾಗಿದೆ.ಟೆಂಪೋ ಚಾಲಕರಾಗಿದ್ದ ಸೆಲಂಬರಸನ್, ಕೆಲಸಕ್ಕೆ ರಜೆ ಇದ್ದಿದ್ದರಿಂದ ಸ್ವಂತ ಊರಾದ ಧರ್ಮಪುರಿಗೆ ಪತ್ನಿಯೊಂದಿಗೆ ಹೋಗಿದ್ದರು.
ಅಲ್ಲಿಂದ ರಾತ್ರಿ 8.45ರ ವೇಳೆ ಹೋಂಡಾ ಆಕ್ಟಿವಾ ಸ್ಕೂಟರ್‍ನಲ್ಲಿ ಆರ್‍ಟಿ ನಗರದ ಮನೆಗೆ ಬರುತ್ತಿದ್ದ ಸೆಲಂಬರಸನ್ ಮಾರ್ಗ ಮಧ್ಯೆ ವೀರಸಂದ್ರ ಟೋಲ್ ಬಳಿ ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ.ಡಿಕ್ಕಿಯ ರಭಸಕ್ಕೆ ಸೆಲಂಬರಸನ್ ಹಾಗೂ ಹಿಂದೆ ಕುಳಿತಿದ್ದ ಪುಷ್ಪಾ ಗಂಭೀರವಾಗಿ ಗಾಯಗೊಂಡಿದ್ದಾರೆ, ತಲೆಗೆ ಪೆಟ್ಟಾಗಿದ್ದ ಶಂಬರಸನ್ ಅವರನ್ನು ನಿಮ್ಹಾನ್ಸ್‍ಗೆ ಹಾಗೂ ಪುಷ್ಪಾ ಅವರನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.ಪ್ರಕರಣ ದಾಖಲಿಸಿರುವ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಜಗದೀಶ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ