ಕೊಟ್ಟೂರು
ಪಟ್ಟಣದ ಪ್ರಧಾನ ಅಂಚೆ ಕಚೇರಿ ಮೂಲಕ ಗುಣಮಟ್ಟದ ಎಲ್‍ಇಡಿ ಬಲ್ಬಗಳನ್ನು ಮಾರಾಟ ಆರಂಭಿಸಿದಾಗ ಜನರು ಮುಗೆಬಿದ್ದಿ ಖರೀದಿಸಿದರು.
ಇಲ್ಲಿನ ಪ್ರಧಾನ ಅಂಚೆ ಕಚೇರಿ ಮತ್ತು ಗ್ರಾಮೀಣ ಭಾಗದ ಶಾಖಾ ಅಂಚೆ ಕಚೇರಿಯಲ್ಲಿ ದಾಖಲೆ ಮಟ್ಟದ ಎಲ್‍ಇಡಿ ಬಲ್ಬಗಳು ಮಾರಾಟವಾದವು.
ಗ್ರಾಹಕರು ಅಂಚೆ ಕಚೇರಿಯಲ್ಲಿ ಎಲ್‍ಇಡಿ ಬಲ್ಬಗಳನ್ನು ಮಾರಾಟಮಾಡುವುದನ್ನು ಪ್ರಶಂಸೆ ಮಾಡಿದರು. ಆದರೆ ಕಳೆದ ನಾಲ್ಕು ತಿಂಗಳಿಂದ ಇಲ್ಲಿನ ಪ್ರಧಾನ ಅಂಚೆ ಕಚೇರಿ ಸೇರಿದಂತೆ ಗ್ರಾಮೀಣ ಭಾಗದ ಯಾವುದೇ ಅಂಚೆ ಕಚೇರಿಯಲ್ಲಿ ಎಲ್‍ಸಿಡಿ ಬಲ್ಬಗಳು ಲಭ್ಯವಿಲ್ಲ.
ಪಟ್ಟಣದಲ್ಲಿ ಹಾಗೂ ಹಳ್ಳಿಗಳಲ್ಲಿ ಅಂಚೆಕಚೇರಿಗೆ ಬಲ್ಬಗಳಿಗಾಗಿ ದಿನವೂ ಪರದಾಡುತ್ತಿದ್ದಾರೆ. ಯಾವುದೇ ಅಂಚೆ ಕಚೇರಿಗಳಲ್ಲಿ ಎಲ್‍ಸಿಡಿ ಬಲ್ಬಗಳಿಲ್ಲ. ಇದರಿಂದ ಗ್ರಾಹಕರು ಅಂಚೆ ಕಚೇರಿಗೆ ಇಡಿ ಶಾಪ ಹಾಕುತ್ತಿದ್ದಾರೆ.
ಅಂಚೆ ಕಚೇರಿ ಸಿಬ್ಬಂದಿ ಎಲ್‍ಇಡಿ ಬಲ್ಬಗಳು ಸರಬರಾಜು ಇಲ್ಲ ಅನ್ನುತ್ತಿದ್ದಾರೆ. ಯಾಕೆ ಬಂದಿಲ್ಲವೆಂದರೆ ಅವರಿಂದ ಸಮರ್ಪಕ ಉತ್ತರವಿಲ್ಲ. ಇದರಿಂದ ಗ್ರಾಹಕರು ಕುಪಿತಗೊಂಡು ಮನೆಗೆ ಮರುಳುತ್ತಿದ್ದಾರೆ.
ಎಲ್‍ಇಡಿ ಬಲ್ಬಗಳನ್ನು ಫಿಲಿಫ್ಸ್, ಕ್ರಾಫ್ಟನ್, ವಿಪ್ರೋ ಕಂಪನಿಗಳು ಸರಬರಾಜು ಮಾಡುತ್ತಿದ್ದರು. ಈಗ ನಿಲ್ಲಿಸಿದ್ದಾರೆ. ಯಾಕೆ ಸರಬರಾಜು ಮಾಡುತ್ತಿಲ್ಲವೆಂಬುದು ಗೊತ್ತಿಲ್ಲ ಅನ್ನುತ್ತಾರೆ.
ಆರಂಭದಲ್ಲಿ ಅಂಚೆ ಇಲಾಖೆ, ಇನ್ನು ಮುಂದೆ ಅಂಚೆ ಕಚೇರಿಯಲ್ಲಿ ಎಲ್‍ಇಡಿ ಬಲ್ಬಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ಭಾರೀ ಪ್ರಚಾರ ಮಾಡಿದ್ದರು. ಅದರಂತೆ ಗ್ರಾಹಕರು ಬಲ್ಬಗಳನ್ನು ಖರೀದಿಸಿದ್ದರು. ಆದರೆ ಕಳೆದ ನಾಲ್ಕು ತಿಂಗಳಿಂದ ಬಲ್ಬಗಳು ಅಂಚೆ ಇಲಾಖೆಗೆ ಬಾರದಿರುವುದು ಯಕ್ಷ ಪ್ರಶ್ನೆಯಾಗಿದ್ದು, ಹಲವಾರು ಅನುಮಾನಗಳಿಗೆ ಅವಕಾಶ ನೀಡಿದೆ.