ಬೆಂಗಳೂರು
ನಮ್ಮ ಮೆಟ್ರೋ ಪಿಲ್ಲರ್ನಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದ್ದು, ಮೆಟ್ರೋ ಪ್ರಯಾಣಿಕರು ಆತಂಕಗೊಂಡಿದ್ದಾರೆ.ಜಯನಗರ ಸೌತ್ ಎಂಡ್ ಸರ್ಕಲ್ ಬಳಿಯಿರುವ ಮೆಟ್ರೋ ಪಿಲ್ಲರ್ನಲ್ಲಿ ಎರಡು ಕಡೆ ಬಿರುಕು ಕಾಣಿಸಿಕೊಂಡಿದೆ.
ಮೆಟ್ರೋ ಪಿಲ್ಲರ್ 66 & 67ರಲ್ಲಿ ಬಿರುಕು ಉಂಟಾಗಿದ್ದು, ಏನಾಗುವುದೋ ಎಂದು ಜನರು ಗಾಬರಿಗೊಂಡಿದ್ದಾರೆ.
ಪಿಲ್ಲರ್ ನಂ.67ರಲ್ಲಿನ ಬಿರುಕನ್ನು ಬಿಎಂಆರ್ಸಿಎಲ್ ಅಧಿಕಾರಿಗಳು ಸರಿಪಡಿಸುತ್ತಿದ್ದಾರೆ.ಟ್ರಿನಿಟಿ ಸರ್ಕಲ್ ಬಳಿಯೂ 6ತಿಂಗಳ ಹಿಂದೆಬಿರುಕು ಕಾಣಿಸಿಕೊಂಡಿತ್ತು.ಇದೀಗ ಮತ್ತೊಂದು ಕಡೆ ಬಿರುಕು ಕಾಣಿಸಿಕೊಂಡಿದೆ. ಪಿಲ್ಲರ್ಗಳಲ್ಲಿ ಮತ್ತೆ ಮತ್ತೆ ಬಿರುಕು ಕಾಣಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.ಅಲ್ಲದೆ,7ವರ್ಷಕ್ಕೇ ಪಿಲ್ಲರ್ಗಳಲ್ಲಿ ಬಿರುಕು ಉಂಟಾಗಿರುವುದು ಕಾಮಗಾರಿ ಬಗ್ಗೆ ಅನುಮಾನವನ್ನೂ ಹುಟ್ಟುಹಾಕುತ್ತಿದೆ.