ಬೆಂಗಳೂರು
ಗಂಭೀರ ಸ್ವರೂಪದ ಅಪರಾಧ ಕೃತ್ಯಗಳನ್ನು ಎಸಗುವ ಆರೋಪಿಗಳ ವಿರುದ್ದ ದಾಳಿ ಮುಂದುವರೆಸಿರುವ ನಗರ ಪೊಲೀಸರು ಚಿಕ್ಕಜಾಲ ವಿಮಾಣ ನಿಲ್ದಾಣ ಪೊಲೀಸ್ ಠಾಣೆಗಳ ವ್ಯಾಪ್ತಿಯ 6 ಕಡೆಗಳಲ್ಲಿ ಸುಲಿಗೆ ಮಾಡಿ ಬೈಕ್‍ನಲ್ಲಿ ಬಂದು 6 ಕಡೆಗಳಲ್ಲಿ ಸುಲಿಗೆ ನಡೆಸಿ ಇಬ್ಬರ ಮೇಲೆ ಹಲ್ಲೆ ಮಾಡಿ, ಹಣ ದೋಚಿ ಪರಾರಿಯಾಗುತ್ತಿದ್ದ ಸುಲಿಗೆಕೋರನಿಗೆ ಗುಂಡು ಹೊಡೆದಿದ್ದಾರೆ.
ಪೊಲೀಸರ ಗುಂಡೇಟು ತಗುಲಿ ಗಾಯಗೊಂಡಿರುವ ದರೋಡೆಕೊರ ಆರ್.ಟಿ.ನಗರದ ಆಶ್ರಫ್ ಖಾನ್(19) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಬಂಧಿಸಲು ಹೋದಾಗ ಆಶ್ರಫ್ ಖಾನ್ ಲಾಂಗ್‍ನಿಂದ ಹೊಡೆದಿರುವುದರಿಂದ ಗಾಯಗೊಂಡಿರುವ ಪೊಲೀಸ್ ಪೇದೆ ಲೋಕೇಶ್ ಬಲಗೈಗೆ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.
ಸುಲಿಗೆಕೋರನ ಜತೆಗಿದ್ದ ಇನ್ನು ಮಂದಿ ಪರಾರಿಯಾಗಿದ್ದು, ಅವರಿಗಾಗಿ ತೀವ್ರ ಶೋಧ ನಡೆಸಲಾಗಿದೆ. ಸುಲಿಗೆ ನಡೆದ ಕೇವಲ 2 ಗಂಟೆಗಳ ಅವಧಿಯಲ್ಲೇ ಸುಲಿಗೆಕೋರನೊಬ್ಬನನ್ನು ಬಂಧಿಸುವಲ್ಲಿ ಚಿಕ್ಕಜಾಲ ಪೊಲೀಸರು ಯಶಸ್ವಿಯಾಗಿದ್ದಾರೆ ಪರಾರಿಯಾಗಿರುವವರ ಬಂಧನಕ್ಕೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ
ಚಿಕ್ಕಜಾಲ ಹಾಗೂ ಅಂತರ ರಾಷ್ಟ್ರೀಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಗುರುವಾರ ಮುಂಜಾನೆ 4 ರಿಂದ 5.30 ಒಳಗಿನ ಅವಧಿಯಲ್ಲಿ ಆರು ಕಡೆಗಳಲ್ಲಿ ಎರಡು ಬೈಕ್‍ಗಳಲ್ಲಿ ಬಂದಿದ್ದ ಮಂದಿ ಸುಲಿಗೆ ಕೋರರು ವಾಹನ ಸವಾರರನ್ನು ಅಡ್ಡಗಟ್ಟಿ ಸುಲಿಗೆ ಮಾಡಿದರು. ಸುಲಿಗೆಗೆ ಪ್ರತಿರೋಧ ತೋರಿದ್ದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಒಬ್ಬರ ಯಮಹಾ ಬೈಕ್‍ನ್ನು ಕಸಿದು ಪರಾರಿಯಾಗಿದ್ದರು.
ಸುಲಿಗೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಚಿಕ್ಕಜಾಲ ವಿಮಾನ ನಿಲ್ದಾಣ, ಇನ್ನಿತರ ಹತ್ತಿರದ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಾಖಾಬಂಧಿ ನಡೆಸಲಾಗಿತ್ತು. ಕಳವಾಗಿದ್ದ ಬೈಕ್‍ನ ಮಾಹಿತಿ ಪಡೆದಿದ್ದ ಚಿಕ್ಕಜಾಲ ಪೊಲೀಸ್ ಇನ್ಸ್‍ಪೆಕ್ಟರ್ ಪ್ರವೀಣ್ ಕುಮಾರ್ ಅವರಿಗೆ ಬೈಕ್ ವಿಮಾನ ನಿಲ್ದಾಣದ ಕಡೆಯಿಂದ ಬರುತ್ತಿರುವ ಖಚಿತ ಮಾಹಿತಿ ದೊರೆಯಿತು.
ಬೈಕ್‍ನಿಂದ ಸಿಕ್ಕಿಬಿದ್ದ
ಮಾಹಿತಿಯಾಧರಿಸಿ ಕಾರ್ಯಾಚರಣೆ ಕೈಗೊಂಡು ಭಾರತಿ ನಗರ ಕ್ರಾಸ್ ಬಳಿ ಬೈಕ್‍ನ್ನು ಅಡ್ಡಗಟ್ಟಲು ಮುಂದಾದಾಗ ಪೆÇಲೀಸರನ್ನು ನೋಡಿದ ಬೈಕ್ ಸವಾರ, ಬೈಕ್‍ನ್ನು ಯು ತಿರುವು ಪಡೆದುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಬೆನ್ನಟ್ಟಿದ ಪೊಲೀಸ್ ಪೇದೆ ಲೋಕೇಶ್, ಬಂಧಿಸಲು ಮುಂದಾದಾಗ ಸವಾರ ಲಾಂಗ್‍ನಿಂದ ಹಲ್ಲೆ ನಡೆಸಿದ್ದಾನೆ.
ಕೂಡಲೇ ಇನ್ಸ್‍ಪೆಕ್ಟರ್ ಪ್ರವೀಣ್ ಕುಮಾರ್ ಶರಣಾಗುವಂತೆ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಪೆÇಲೀಸರತ್ತ ಲಾಂಗ್ ಹಿಡಿದು ಬಂದಾಗ ಆತನ ಮೇಲೆ ಮತ್ತೊಂದು ಗುಂಡು ಹಾರಿಸಿದ್ದಾರೆ.
ಆ ಗುಂಡು ಕಾಲಿಗೆ ತಗುಲಿ ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಆರ್‍ಟಿ ನಗರದ ಅಶ್ರಫ್ ಖಾನ್ ಎಂಬುದು ಪತ್ತೆಯಾಗಿದೆ.ಈತ ಇನ್ನಿತರ ಮೂವರ ಜತೆ 6 ಕಡೆಗಳಲ್ಲಿ ನಡೆದಿದ್ದ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಬಾಯ್ಬಿಟ್ಟಿದ್ದು, ಆತನಿಂದ ಮಾಹಿತಿ ಪಡೆದು ಉಳಿದವರ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಕಲಾಕೃಷ್ಣಸ್ವಾಮಿ ತಿಳಿಸಿದರು.
ಘಟನೆ ನಡೆದ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
