ನಾಳೆಯಿಂದ ಮೈಸೂರು ದಸರಾ ಖಾಸಗಿ ದರ್ಬಾರ್ ಆರಂಭ..!

ಮೈಸೂರು

    ಮೈಸೂರು ಅರಮನೆಯಲ್ಲಿ ರಾಜವಂಶಸ್ಥರ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ನಾಳೆಯಿಂದ ಆರಂಭವಾಗಲಿದೆ. ನಾಳೆಯೇ ಕಂಕಣಧಾರಿಗಳಾಗುವ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಿಂಹಾಸರೋಹಣ ಮಾಡುವ ಮೂಲಕ ಖಾಸಗಿ ದರ್ಬಾರ್ ಆರಂಭವಾಗಲಿದೆ.

   ಕೊರೊನಾ ವೈರಸ್ ಆತಂಕ ಇರುವ ಕಾರಣ ರಾಜ್ಯ ಸರ್ಕಾರ ನಡೆಸುವ ದಸರಾದಂತೆ ಮೈಸೂರು ರಾಜವಂಶಸ್ಥರು ನಡೆಸುವ ದಸರಾ ಕೂಡ ಸರಳ ಮತ್ತು ಸಾಂಪ್ರದಾಯಿಕವಾಗಿ ನಡೆಯಲಿದೆ.

   ನಾಳೆ ಶನಿವಾರ ಬೆಳಿಗ್ಗೆ ಕಂಕಣಧಾರಿಗಳಾಗುವ ಯದುವೀರ್ ಅವರು, ಹೋಮ ಹವನದಲ್ಲಿ ಭಾಗಿಯಾಗಲಿದ್ದಾರೆ. ತರುವಾಯ ನಾಳೆ ಬೆಳಿಗ್ಗೆ 7 ಗಂಟೆ 45 ನಿಮಿಷದಿಂದ 8 ಗಂಟೆ 15 ನಿಮಿಷದೊಳಗೆ ಸಲ್ಲುವ ಶುಭ ಲಗ್ನದಲ್ಲಿ ಯದುವೀರ್ ಅವರು ಸಿಂಹಾಸನರೋಹಣ ಮಾಡಲಿದ್ದಾರೆ. ಈ ಮೂಲಕ ನಾಳೆಯಿಂದ 9 ದಿನಗಳ ಕಾಲ ಖಾಸಗಿ ದರ್ಬಾರ್ ನಡೆಲಿದೆ.ಕೊರೊನಾ ಸೋಂಕು ಹೆಚ್ಚುತ್ತಿರುವ ಇರುವ ಕಾರಣ ಕೇವಲ ಬೆರಳಣಿಕೆಯಷ್ಟು ಜನರಿಗೆ ಮಾತ್ರ ಅರಮನೆಯೊಳಗೆ ಪ್ರವೇಶವಿರುತ್ತದೆ ಎಂದು ರಾಜ ಮನೆತನದವರು ಈಗಾಗಲೇ ತಿಳಿಸಿದ್ದಾರೆ.ಜನ ಜಗುಂಳಿಯಿಂದ ಕೊರೊನಾ ಹರಡದಂತೆ ತಡೆಗಟ್ಟಲು ಈ ಬಾರಿ ಜಟ್ಟಿ ಕಾಳಗ ಕೂಡ ಇರುವುದಿಲ್ಲ. ಒಟ್ಟಾರೆ ಸರಳವಾದರೂ ಮೈಸೂರಿನಲ್ಲಿ ದಸರಾ ಮಹೋತ್ಸವದ ಸಂಭ್ರಮ ಮನೆ ಮಾಡಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link