ದಾವಣಗೆರೆ:
ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕತಿಕ ಸಂಘ ಹಾಗೂ ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ವತಿಯಿಂದ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರ ಧರ್ಮಪತ್ನಿ ದಿ.ಪಾರ್ವತಮ್ಮ ಶಾಮನೂರು ಶಿವಶಂಕರಪ್ಪನವರ ಸ್ಮರಣಾರ್ಥ ನಗರದಲ್ಲಿ ಇಂದಿನಿಂದ (ನ.28 ರಿಂದ) ಡಿ.2 ರವರೆಗೆ 11ನೇ ಬಾರಿಗೆ ಶಾಮನೂರು ಡೈಮಂಡ್ ಹಾಗೂ ಶಿವಗಂಗಾ ಕಪ್-2018 ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಟಿನ್ನಿಸ್‍ಬಾಲ್(ಲೀಗ್ ಕಂ ನಾಟೌಟ್) ಕ್ರಿಕೆಟ್ ಟೂರ್ನಿಮೆಂಟ್ ಆಯೋಜಿಸಲಾಗಿದೆ.
ಈ ಕುರಿತು ಮಂಗಳವಾರ ಸಂಜೆ ಪ್ರೌಢಶಾಲಾ ಮೈದಾನದಲ್ಲಿ ಸುದ್ದಿಗೋಷ್ಠಿ ಡೆನಸಿ ಮಾತನಾಡಿದ ಸಂಘದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಇಂದಿನಿಂದ ನಗರದ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ 5 ದಿನಗಳ ಕಾಲ ಟೂರ್ನಿಮೆಂಟ್ ನಡೆಯಲಿದ್ದು, ಇಂದು ಸಂಜೆ 6 ಗಂಟೆಗೆ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಲಿದ್ದಾರೆ. ಅತಿಥಿಗಳಾಗಿ ಮೇಯರ್ ಶೋಭಾ ಪಲ್ಲಾಗಟ್ಟೆ, ಉದ್ಯಮಿಗಳಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ರವಿರಾಜ್ ಇಳಂಗೋ, ನಿಟ್ಟುವಳ್ಳಿ ಶೇಖರಪ್ಪ, ಉದಯ ಶಿವಕುಮಾರ್, ರಾಜುರೆಡ್ಡಿ, ಇಂದ್ರಪ್ಪ, ಮಹಾದೇವ್, ಶಿವಗಂಗಾ ಶ್ರೀನಿವಾಸ್, ವಿನಾಯಕ ಬಸ್ ಹರೀಶ್, ಶಾಮನೂರು ಬಸವರಾಜ್, ಮೇಕಾ ಮುರುಳಿಕೃಷ್ಣ, ದೇವರಮನೆ ಶಿವಕುಮಾರ್, ತಿಮ್ಮಾರೆಡ್ಡಿ, ಶ್ರೀನಿವಾಸಮೂರ್ತಿ, ಡೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಇದಾಯತ್, ಟಿ.ಎಸ್.ವಸುಪಾಲ್, ಕ್ರೀಡಾಪಟುಗಳಾದ ಜಾಕೀರ್, ಶಫೀಕ್ ಪಂಡಿತ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಮತ್ತಿತರರು ಭಾಗವಹಿಸಲಿದ್ದಾರೆಂದು ಮಾಹಿತಿ ನೀಡಿದರು.
ಟೂರ್ನಿಯಲ್ಲಿ ಕೇರಳ, ಚನ್ನೈ, ಗೋವಾ, ಮಹಾರಾಷ್ಟ್ರ ರಾಜ್ಯಗಳು ಹಾಗೂ ಕರ್ನಾಟಕದ ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ, ಸೇರಿದಂತೆ 30 ತಂಡಗಳು ಭಾಗವಹಿಸಲಿವೆ. ಹೊರಗಿನಿಂದ ಬಂದಂತ ತಂಡಗಳಿಗೆ ಉಚಿತವಾಗಿ ಊಟ ಹಾಗೂ ವಸತಿ ವ್ಯವಸ್ಥೆ ಮಾಡಲಾಗುವುದು ಎಂದರು.
ಟೂರ್ನಿಯಲ್ಲಿ ವಿಜೇತರಿಗೆ ಪ್ರಥಮ ಸ್ಥಾನಕ್ಕೆ 3.55 ಲಕ್ಷ ರೂ. ನಗದು ಬಹುಮಾನ ಹಾಗೂ ಶಾಮನೂರು ಡೈಮಂಡ್ ಕಪ್, ದ್ವಿತೀಯ ಸ್ಥಾನಕ್ಕೆ 2.25 ಲಕ್ಷ ರೂ ನಗದು ಬಹುಮಾನ ಹಾಗೂ ಶಿವಗಂಗಾ ಕಪ್, ತೃತೀಯ ಸ್ಥಾನಕ್ಕೆ 1.25 ಲಕ್ಷ ರೂ ಮತ್ತು ಆಕರ್ಷಕ ಕಪ್ ನೀಡಲಾಗುವುದು. ಅದೇ ರೀತಿ ವೈಯಕ್ತಿಕ ಉತ್ತಮ ಅಲ್‍ರೌಂಡರ್‍ಗೆ ಹಿರೋ ಹೊಂಡಾ ಬೈಕ್ ನೀಡಲಾಗುವುದು ಎಂದು ಹೇಳಿದರು.
ಪಂದ್ಯಾವಳಿಯನ್ನು ಕುಳಿತು ವೀಕ್ಷಿಸಲು ಅನುವಾಗುವಂತೆ, ಸಾರ್ವಜನಿಕರಿಗೆ ಗ್ಯಾಲರಿಯ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಈ ಬಾರಿ ಟೂರ್ನಿಯನ್ನು ಯೂಟ್ಯೂಬ್‍ನಲ್ಲಿ ಲೈವ್ ನೀಡಲಾಗುತ್ತಿದೆ.
ಒಟ್ಟು ಈ ಟೂರ್ನಿಯ ಅಂದಾಜು ವೆಚ್ಚ 30 ಲಕ್ಷ ರೂ., ವಿಶೇಷವಾಗಿ ಪೊಲೀಸ್ ತಂಡ, ಪತ್ರಕರ್ತರ ತಂಡ, ವರ್ತಕರ ತಂಡ, ಜಿಲ್ಲಾಧಿಕಾರಿಗಳ ತಂಡ, ಮಹಾನಗರ ಪಾಲಿಕೆ ಸದಸ್ಯರ ತಂಡ, ವಕೀಲರ ತಂಡ ಒಟ್ಟು 6 ತಂಡಗಳ ಅಫೀಶಿಯಲ್ ಕಪ್ ಪಂದ್ಯಾವಳಿಯನ್ನು ಸಹ ನಡೆಯಲಿದೆ. 5 ಸಾವಿರಕ್ಕೂ ಹೆಚ್ಚು ಕ್ರೀಡಾಭಿಮಾನಿಗಳು ಕುಳಿತು ಪಂದ್ಯಾವಳಿ ವೀಕ್ಷಣೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕ್ರೀಡಾಪಟುಗಳ ಕ್ರೀಡಾ ಮತ್ತು ಸಾಂಸ್ಕತಿಕ ಸಂಘದ ಉಪಾಧ್ಯಕ್ಷ ಶ್ರೀನಿವಾಸ್ ಶಿವಗಂಗಾ, ಕಾರ್ಯದರ್ಶಿ ಕುರುಡಿ ಗಿರೀಶ್ (ಅಯ್ಯಪ್ಪಸ್ವಾಮಿ), ಖಜಾಂಚಿ ಜಯಪ್ರಕಾಶ್ ಗೌಡ, ಆರ್.ಹೆಚ್.ಶಿವಕುಮಾರ್(ಚಾಮುಂಡಿ), ದಿನೇಶ್, ಚಂದ್ರಶೇಖರಯ್ಯ, ಬಿ.ಟಿ.ಸುಪುತ್ರ, ಕ್ಯಾಪ್ಟನ್ ಹಾಲಪ್ಪ, ಸೋಮಣ್ಣ, ಚಂದ್ರು, ಪ್ರಕಾಶ್, ಸಂತೋಷ್, ಆಕಾಶ್, ಯೋಗೀಶ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
