ಬಳ್ಳಾರಿ
ಬಳ್ಳಾರಿ ಜಿಲ್ಲಾಡಳಿತ ಹಾಗೂ ಎನ್‍ಇಕೆಎಸ್‍ಆರ್‍ಟಿಸಿ ವತಿಯಿಂದ ವಿಶೇಷವಾಗಿ ವಿನ್ಯಾಸ ಮಾಡಿದ ಸಂಚಾರಿ ಸ್ವ್ಯಾಬ್ ಲ್ಯಾಬ್ ಹಾಗೂ ಫೀವರ್ ಕ್ಲಿನಿಕ್ ಬಸ್ ಸಿದ್ದಪಡಿಸಲಾಗಿದ್ದು,ಈ ಸಂಚಾರಿ ಬಸ್ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಕಡೆ ಸಂಚರಿಸಿ ಗಂಟಲು ಮತ್ತು ಮೂಗಿನ ದ್ರವ್ಯ ಸಂಗ್ರಹಿಸಲಿದೆ ಹಾಗೂ ಫೀವರ್ ಕೂಡ ತಪಾಸಣೆ ಮಾಡಲಾಗುತ್ತಿದೆ.
ವಿಶೇಷವಾಗಿ ವಿನ್ಯಾಸಗೊಳಿಸಿ ಸಿದ್ದಪಡಿಸಿ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಿದ್ದಪಡಿಸಿ ನಿಲ್ಲಿಸಲಾಗಿದ್ದ ಸಂಚಾರಿ ಸ್ವ್ಯಾಬ್ ಲ್ಯಾಬ್,ಫೀವರ್ ಕ್ಲಿನಿಕ್ ಬಸ್‍ನ್ನು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್,ಜಿಪಂ ಸಿಇಒ ಕೆ.ನಿತೀಶ್ ಹಾಗೂ ಎನ್‍ಇಕೆಎಸ್‍ಆರ್‍ಟಿಸಿ ಡಿಸಿ ಚಂದ್ರಶೇಖರ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹಾಗೂ ಜಿಪಂ ಸಿಇಒ ಕೆ.ನಿತೀಶ್ ಅವರು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ದೇಶದಲ್ಲಿ ಕೊರೋನಾ ಕೇಸ್‍ಗಳು ದಿನೆ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸೊಂಕು ಹೆಚ್ಚಾಗಿ ಹರಡದಂತೆ ಸಾರ್ವಜನಿರಲ್ಲಿ ಜಾಗೃತಿ ಮೂಡಿಸಲು ಹಾಗೂ ಸೋಂಕು ಪರೀಕ್ಷಿಸಲು ಜಿಲ್ಲಾಡಳಿತ ಮತ್ತು ಕೆಎಸ್‍ಆರ್‍ಟಿಸಿ ಘಟಕದ ವತಿಯಿಂದ ಸಂಚಾರಿ ಸ್ವ್ಯಾಬ್ ಲ್ಯಾಬ್ ಹಾಗೂ ಫೀವರ್ ಕ್ಲಿನಿಕ್ ಬಸ್ ವ್ಯವಸ್ಥೆ ಮಾಡಲಾಗಿದೆ.ಈ ವಾಹನವು ಮೊದಲಿಗೆ ಜಿಂದಾಲ್‍ಗೆ ಸಂಚರಿಸಲಿದೆ. ಇದಾದ ನಂತರ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಲಿದ್ದು, ವಾಹನದಲ್ಲಿ ಒಬ್ಬ ವೈದ್ಯ, ಲ್ಯಾಬ್ ಟೆಕ್ನಿಷಿಯನ್ ಹಾಗೂ ಸಹಾಯಕ ಸಿಬ್ಬಂದಿಗಳನ್ನು ಹೊಂದಿರುತ್ತದೆ. ಶಂಕಿತರು ಮತ್ತು ಸೋಂಕಿತರು ಇರುವ ಸ್ಥಳದಲ್ಲಿಯೆ ಹೋಗಿ ತಪಾಸಣೆ ನಡೆಸಿ ವರದಿಯನ್ನು 24 ಗಂಟೆಗಳಲ್ಲಿ ನೀಡಲಾಗುತ್ತದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
