ಹುಳಿಯಾರು:
ಹುಳಿಯಾರು ಹೋಬಳಿಯ ದಬ್ಬಗುಂಟೆಯಲ್ಲಿ ಸೋಮವಾರ ಸಂಜೆ ಬಾರಿ ಮಳೆಗಾಳಿ ಬಂದಿದ್ದು ಇಡೀ ಊರನ್ನೇ ತಲ್ಲಣಗೊಳಿಸಿದೆ.
ಮಳೆಗಾಳಿಗೆ ಅನೇಕ ಮರಗಳು ಧರೆಗುರುಳಿದ್ದು ಸಿದ್ದಮ್ಮ ಹಾಗೂ ಪುಟ್ಟಯ್ಯ ಎಂಬುವವರ ವಾಸದ ಮನೆಯ ಮೇಲ್ಚಾವಣಿಯ ಶೀಟ್‍ಗಳು ಹಾರಿ ಹೋಗಿವೆ. ಅಲ್ಲದೆ ಹತ್ತನ್ನೆರಡು ಮನೆಗಳ ಹೆಂಚುಗಳು ಹಾರಿ ಹೋಗಿವೆ.
ಊರಿನ ಸಮೀಪದ ಅನೇಕ ಮಂದಿಯ ತೋಟದಲ್ಲಿ ತೆಂಗು, ಅಡಿಗೆ ಮರಗಳು ಧರೆಗುರುಳಿದ್ದು ಅಪಾರ ನಷ್ಟ ಸಂಭವಿಸಿದೆ.
ರಸ್ತೆಗೆ ಅಡ್ಡವಾಗಿ ಮರವೊಂದು ಬಿದ್ದಿದ್ದು ಸಂಚಾರಕ್ಕೆ ತೊಡಕಾಗಿತ್ತು. ಅರಣ್ಯ ಇಲಾಖೆಯವರನ್ನು ಕಾಯದೆ ಗ್ರಾಮದ ಯುವಕರು ಮರ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ