ದೇವೇಗೌಡರ ಸೋಲು ನಿಶ್ಚಿತ: ಸುರೇಶ್ ಗೌಡ

ಬೆಂಗಳೂರು

      ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಉಪಮುಖ್ಯಮಂತ್ರಿ ಪರಮೇಶ್ವರ್ ಮಾಡಿದ ಮಾಸ್ಟರ್ ಪ್ಲಾನ್ ಪರಿಣಾಮವಾಗಿ ಮಾಜಿ ಪ್ರಧಾನಿ ದೇವೇಗೌಡ ನಿಶ್ಚಿತವಾಗಿ ಸೋಲು ಅನುಭವಿಸಲಿದ್ದಾರೆ ಎಂದು ಮಾಜಿ ಶಾಸಕ ಸುರೇಶ್ ಗೌಡ ಇಂದು ಬಾಂಬ್ ಸಿಡಿಸಿದ್ದಾರೆ.

        ಪರಮೇಶ್ವರ್ ಅವರ ಮಾಸ್ಟರ್ ಪ್ಲಾನಿನ ವಿವರ ದೇವೇಗೌಡರಿಗೆ ಗೊತ್ತಿಲ್ಲದೆ ಇರಬಹುದು.ಹಾಗೆಯೇ ಲೋಕಸಭಾ ಚುನಾವಣೆಯ ಫಲಿತಾಂಶ ಬರುವವರೆಗೆ ಅವರು ಪರಮೇಶ್ವರ್ ಅವರ ಮಾಸ್ಟ್ರರ್ ಸ್ಟ್ರೋಕ್ ಹೇಗಿದೆ?ಅನ್ನುವುದನ್ನು ನೋಡಲು ಕಾಯಬೇಕಾಗಬಹುದು.ಆದರೆ ಏನೇ ಆದರೂ ಫಲಿತಾಂಶ ಬಂದಾಗ ಅವರಿಗೆ ಸತ್ಯ ಅರಿವಾಗಲಿದೆ ಎಂದು ಹೇಳಿದ್ದಾರೆ.

       ಬಿಜೆಪಿ ರಾಜ್ಯಾಧ್ಯಕ್ಷಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದಅವರು, ಬಿಎಸ್ವೈಜೊತೆ ಕೆಲಕಾಲ ಮಾತುಕತೆ ನಡೆಸಿದರು. ನಂತರ ಸುದ್ದಿಗಾರರಜೊತೆ ಮಾತನಾಡಿ, ಮುದ್ದಹನುಮೇಗೌಡರಿಗೆಟಿಕೆಟ್ ತಪ್ಪಿಸಿದ್ದೂ ಕೂಡಾ. ಜಿ. ಪರಮೇಶ್ವರ್. ಈ ಸಂಬಂಧಆಡಿಯೋ, ಸಿಡಿ ಬಿಡುಗಡೆ ಹಿಂದೆಯೂ ಪರಮೇಶ್ವರ್‍ಅವರಕೈವಾಡವಿದೆ. ಹಾಗಾಗಿ ಈ ಬಾರಿ ತುಮಕೂರಲ್ಲಿ ದೇವೇಗೌಡರಿಗೆ ಮುಖಭಂಗ ನಿಶ್ಚಿತ ಎಂದರು.

     ದೇವೇಗೌಡರು ತುಮಕೂರಿನಿಂದ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಮಾಡಿದಾಗ ಸ್ಥಳೀಯ ನಾಯಕರು 2 ಲಕ್ಷ ಮತಗಳ ಅಂತರದ ಗೆಲುವು ಸಿಗಲಿದೆ ಎಂದಿದ್ದರು. ಆದರೆಇಂದು 5 ಸಾವಿರ ಮತಗಳ ಅಂತರಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಕಾಂಗ್ರೆಸ್, ಜೆಡಿಎಸ್ನವರು ನಮ್ಮಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ. ತುಮಕೂರಿನಲ್ಲಿಕಾಂಗ್ರೆಸ್ ಮತಗಳು ಬಿಜೆಪಿಗೆ ಬಂದಿವೆ. ಹಾಗಾಗಿ 25 ಸಾವಿರ ಮತಗಳ ಅಂತರದ ಗೆಲುವು ಸಿಗುವ ವಿಶ್ವಾಸಎಂದು ಸುರೇಶ್‍ಗೌಡ ಹೇಳಿದ್ರು.

      ದೇವೇಗೌಡರನ್ನು ಸೋಲಿಸಲು ಅವರ ಪಕ್ಷದವರೇ ನಿರ್ಧಾರ ಮಾಡಿದ್ದಾರೆ. ಮಧುಗಿರಿ ಶಾಸಕ ರಾಜಣ್ಣಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರಲ್ಲಿ ವೀರಭದ್ರಯ್ಯ ವಿಫಲರಾಗಿದ್ದಾರೆ. ಆ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ನಮಗೆ ಬರೀ 3 ಸಾವಿರ ಮತಗಳು ಬಂದಿದ್ದವು. ಈಗ 5 ಸಾವಿರ ಲೀಡ್ ಬರುತ್ತದೆ. ಮಧುಗಿರಿರಾಜಣ್ಣ, ಗುಬ್ಬಿ ಶ್ರೀನಿವಾಸ್ ಹಾಗೂ ಶಾಸಕ ಗೌರಿಶಂಕರ್ ಅವರೇ ದೇವೇಗೌಡರ ವಿರುದ್ಧ ಕೆಲಸ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ