ಮೆಟ್ರೊ ರೈಲು ಸಂಚಾರ ವಿಳಂಬ ಪ್ರಯಾಣಿಕರ ಪರದಾಟ

ಬೆಂಗಳೂರು

         ಮೆಟ್ರೊ ರೈಲು ಸಂಚಾರ ಕೆಲ ಕಾಲ ವಿಳಂಬದಿಂದ ಬುಧವಾರ ಬೆಳಿಗ್ಗೆ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಉಂಟಾಗಿದ್ದಕ್ಕೆ ಮೆಟ್ರೋ ಅಧಿಕಾರಿಗಳು ಜೇನು ಗೂಡು ತೆರವುಗೊಳಿಸುವ ಕಾರಣ ನೀಡಿದ್ದಾರೆ.

         ಬೈಯಪ್ಪನಹಳ್ಳಿ-ನಾಯಂಡಹಳ್ಳಿ ಮಾರ್ಗದ ಟ್ರಿನಿಟಿ ನಿಲ್ದಾಣದ ಬಳಿ ಪಿಲ್ಲರ್‍ನಲ್ಲಿ ಬಿರುಕು ಬಿಟ್ಟಿದ್ದು ರೈಲು ಸಂಚಾರ ವಿಳಂಬ ಎನ್ನಲಾಗಿತ್ತು. ಆದರೆ ಮೆಟ್ರೋ ಅಧಿಕಾರಿಗಳು ಪಿಲ್ಲರ್ ಬಿರುಕು ಬಿಟ್ಟಿಲ್ಲ, ಕಾಂಕ್ರೀಟ್ ಭೀಮ್‍ನಲ್ಲಿರುವ ಜೇನು ಗೂಡು ತೆರವು ಮಾಡಲು ರೈಲು ಸಂಚಾರದಲ್ಲಿ ವಿಳಂಬವಾಗಿತ್ತು ಎನ್ನುವ ಸ್ಪಷ್ಟನೆ ನೀಡಿದ್ದಾರೆ.

        ಟ್ರಿನಿಟಿ ಸರ್ಕಲ್ ಬಳಿ ಇರುವ ಮೆಟ್ರೋ ಪಿಲ್ಲರ್‍ನ ಮೇಲ್ಭಾಗದ ಸ್ಲೈಡರ್ ಸ್ವಲ್ಪ ಮಟ್ಟಿಗೆ ಜರಗಿದೆ. ಹೀಗಾಗಿ ಸದ್ಯ ಅದಕ್ಕೆ ಕಬ್ಬಿಣದ ಸ್ಲೈಡರ್ ಸಪೆರ್ಟ್ ಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಒಂದು ಬದಿಯ ಸಂಚಾರವನ್ನು ತಡೆದು ವಾಹನಗಳಿಗೆ ಏಕಮುಖದ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

         ಮೆಟ್ರೋ ಸಂಚರಿಸಲು ಎತ್ತರಿಸಿದಂತಹ ಮಾರ್ಗದಲ್ಲಿ ಕೊರತೆ ಕಂಡುಬಂದಿದೆ. ಸ್ಲೈಡರ್ ಸರಿದಿದ್ದು, ಜಾಯಿಂಟ್ ಮಾಡಲು ಬಳಸಿದ ಕಬ್ಬಿಣದ ತುಂಡುಗಳು ಕಳಚಿಕೊಂಡಿವೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಎಂಜಿನಿಯರ್ ಗಳು ತಪಾಸಣೆ ನಡೆಸುತ್ತಿದ್ದಾರೆ. ಪಿಲ್ಲರ್ ಬಳಿ ಜೇನು ಗೂಡು ಕಟ್ಟಿತ್ತು. ಹೀಗಾಗಿ ಅದನ್ನು ತೆರವುಗೊಳಿಸಲು ಬಂದಿದ್ದು, ಈ ವೇಳೆ ಹಾನಿ ಕಂಡುಬಂದಿದೆ.

       ಹೀಗಾಗಿ ಅಲ್ಲಿ ಕಬ್ಬಿಣದ ಸ್ಲೈಡರ್ ಹಾಕಿರುವುದಾಗಿ ಮೆಟ್ರೋ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.ಪ್ರತಿನಿತ್ಯ ಸಾವಿರಾರು ಮಂದಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಅಲ್ಲದೇ ಪಿಲ್ಲರ್ ಕೆಳಗಡೆಯೂ ಸಾವಿರಾರು ವಾಹನಗಳು ದಿನನಿತ್ಯ ಸಂಚರಿಸುತ್ತವೆ. ಹೀಗಾಗಿ ಆತಂಕ ಉಂಟಾಗಿದ್ದು, ಯಾವುದೇ ರೀತಿಯ ಹಾನಿಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

  ಪ್ರಯಾಣಿಕರ ಪರದಾಟ

         ನಿಗಧಿತ ಸಮಯಕ್ಕಿಂತ 15 ನಿಮಿಷಗಳ ಕಾಲ ರೈಲು ವಿಳಂಬದಿಂದ ಬೆಳಿಗ್ಗೆ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಉಂಟಾಗಿ ಆತಂಕಗೊಂಡ ಕೆಲ ಪ್ರಯಾಣಿಕರು ಟಿಕೆಟ್ ಹಣ ವಾಪಸ್ ಪಡೆದು ಆಟೋ ಬಸ್‍ಗಳಲ್ಲಿ ತೆರಳಿದರು.

        ಮೈಸೂರು ರಸ್ತೆಯ ನಾಯಂಡಹಳ್ಳಿಯಿಂದ ಬೈಯಪ್ಪನಹಳ್ಳಿಗೆ ಹೋಗುವ ರೈಲು ವಿಜಯನಗರ ನಿಲ್ದಾಣಕ್ಕೆ ಎಂದಿನಂತೆ 5.36ಕ್ಕೆ ಬರಬೇಕಾಗಿತ್ತು ಆದರೆ, 10 ರಿಂದ 12 ನಿಮಿಷ ಕಳೆದರೂ ರೈಲು ಬಾರದ ಹಿನ್ನೆಲೆಯಲ್ಲಿ ಪ್ರಯಾಣಿಕರು ಟಿಕೆಟ್ ಹಣ ವಾಪಸ್ ಪಡೆದು ಆಟೋ, ಬಸ್‍ಗಳನ್ನಿಡಿದು ಪ್ರಯಾಣಿಸಿದ್ದಾರೆ.

        ರೈಲು ತಡವಾದ ಬಗ್ಗೆ ಪ್ಲಾಟ್ ಫಾರಂನಲ್ಲಿ ಯಾವುದೇ ಸೂಚನೆಯನ್ನು ಬಿತ್ತರಿಸಿರಲಿಲ್ಲ ಮತ್ತು ಫಲಕಗಳಲ್ಲಿಯೂ ವಿಳಂಬ ಕುರಿತಂತೆ ವೇಳೆ ನಿಗಧಿ ಮಾಡಿರಲಿಲ್ಲ.ವಿಳಂಬ ಕುರಿತಂತೆ ಭದ್ರತಾ ಸಿಬ್ಬಂದಿಯನ್ನು ವಿಚಾರಿಸಿದರೆ ನಮಗೂ ಮಾಹಿತಿ ಇಲ್ಲ ಎನ್ನುವ ಹಾರಿಕೆ ಉತ್ತರ ನೀಡಿದ್ದಾರೆ

ಟಿಕೆಟ್ ಹಣ ವಾಪಸ್

        ನಂತರ ಎಚ್ಚೆತ್ತುಕೊಂಡ ಸಿಬ್ಬಂದಿ ಕೌಂಟರ್‍ಗೆ ತೆರಳಿ ಮಾಹಿತಿ ಪಡೆದು ರೈಲು ವಿಳಂಬ ಕುರಿತಂತೆ ಪ್ರಯಾಣಿಕರಿಗೆ ತಿಳಿಸಿದ್ದಾರೆ.ಆದರೆ, ನಿಗದಿತವಾಗಿ ಇಂತಿಷ್ಟೆ ಸಮಯಕ್ಕೆ ರೈಲು ಬರುವ ಕುರಿತಂತೆ ಅವರಿಗೂ ಮಾಹಿತಿ ಇರಲಿಲ್ಲ.ರೈಲು ವಿಳಂಬ ಕುರಿತಂತೆ ನಮಗೂ ಮಾಹಿತಿ ಇಲ್ಲ, ತಾಂತ್ರಿಕ ಸಮಸ್ಯೆಯಿಂದ ರೈಲು ವಿಳಂಬವಾಗಿರುವುದಷ್ಟೆ ನಮಗೆ ತಿಳಿದಿದೆ ಎನ್ನುವ ಉತ್ತರದಿಂದ ಬೇಸತ್ತ ಪ್ರಯಾಣಿಕರು ಕೌಂಟರ್‍ನಲ್ಲಿ ಹಣ ಪಡೆದು ವಾಪಸ್ ತೆರಳಿದ್ದಾರೆ.

        ರೈಲು ವಿಳಂಬ ಕುರಿತು ನಿಲ್ದಾಣದ ಭದ್ರತಾ ಸಿಬ್ಬಂದಿಯಾಗಲಿ ಅಥವಾ ನೌಕರರಾಗಲಿ ಮೊದಲೇ ಮಾಹಿತಿ ನೀಡಿದ್ದರೆ ಪ್ರಯಾಣಿಕರನ್ನು ಗೊಂದಲದಿಂದ ನಿವಾರಣೆ ಮಾಡಬಹುದಾಗಿತ್ತು.

ಪ್ರಯಾಣಿಕರಿಂದ ತರಾಟೆ

        ನಾನು ಇದೇ ಮೆಟ್ರೊ ರೈಲು ಮೂಲಕ ಮೆಜೆಸ್ಟಿಕ್‍ಗೆ ಪ್ರಯಾಣ ಬೆಳೆಸಿ ಅಲ್ಲಿಂದ ಶತಾಬ್ಧಿ ರೈಲಿನಲ್ಲಿ ಪ್ರಯಾಣ ಮುಂದುವರೆಸಬೇಕಾಗಿದೆ. ಈಗಾಗಲೇ ಟಿಕೆಟ್‍ನ್ನು ಕಾಯ್ದಿರಿಸಲಾಗಿದ್ದು, ಒಂದು ವೇಳೆ ರೈಲು ವಿಳಂಬವಾದರೆ ಶತಾಬ್ಧಿ ರೈಲು ಕೈತಪ್ಪಲಿದೆ. ಶತಾಬ್ಧಿ ಟಿಕೆಟ್ ಹಣವನ್ನು ನೀವು ಭರಿಸುತ್ತೀರ ಎಂದು ಪ್ರಶ್ನಿಸಿ ನಂತರ ಆಟೋದಲ್ಲಿ ಪ್ರಯಾಣಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link