ಸಿರುಗುಪ್ಪ :
ಕರ್ನಾಟಕ ಸರಕಾರ ರಾಜ್ಯದಲ್ಲಿ ಇರುವ ಒಂದು ಲಕ್ಷಕ್ಕೂ ಅಧಿಕ ದೇವದಾಸಿ ಮಹಿಳೆಯರ ಕುಟುಂಬಗಳನ್ನು ಗುರುತಿಸುವ ಸರ್ವೆ ಕಾರ್ಯ ಪೂರ್ಣಗೊಳಿಸದೆ ಇರುವುದರಿಂದ ದೇವದಾಸಿ ಮಹಿಳೆಯರ ಕುಟುಂಬಗಳ ಪುರ್ನವಸತಿ ಸಾಧ್ಯವಾಗುತ್ತಿಲ್ಲ ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನ ಸಂಘದ ಗೌರವ ರಾಜ್ಯಾಧ್ಯಕ್ಷ ಕಾಂ.ಯು.ಬಸವರಾಜ ತಿಳಿಸಿದರು
ನಗರದ ನೇತಾಜಿ ವ್ಯಾಯಮ ಶಾಲೆಯಲ್ಲಿ ದೇವಾದಾಸಿ ಮಹಿಳೆಯರ 3ನೇ ತಾಲೂಕು ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು ಸರಕಾರವು ಕೂಡಲೇ ರಾಜ್ಯದಲ್ಲಿರುವ ಎಲ್ಲಾ ದೇವದಾಸಿ ಮಹಿಳೆಯರನ್ನು ಹಾಗೂ ಅವರ ಕುಟುಂಬದಲ್ಲಿನ ಎಲ್ಲಾ ಸದಸ್ಯರ ಆರ್ಥಿಕ ಸಾಮಾಜೀಕ ಶೈಕ್ಷಣಿಕ ಸಮಿಕ್ಷೆಯನ್ನು ಮಾಡಿ ಅವರ ಕುಟುಂಬಗಳಿಗೆ ಮಾಸಿಕ 5ಸಾವಿರ ರೂಪಾಯಿ ವೇತನ ನೀಡಬೇಕು, ಹಾಗೂ ಪುರ್ನವಸತಿಗಾಗಿ ಸರಕಾರವು ಪ್ರತಿವರ್ಷ 5ಸಾವಿರ ಕೋಟಿ ಅನುದಾನವನ್ನು ಭೂಮಿ ಒದಗಿಸುವ ಯೋಜನೆಗೆ ಮಿಸಲಿಡಬೇಕು, ಸಾಲ ಮನ್ನ ಮಾಡಬೇಕು ಎಂದು ಒತ್ತಾಯಿಸಿದರು.
ಕ.ರಾ.ದೇ.ಮ.ವಿ.ಸಂಘದ ರಾಜ್ಯಾಧ್ಯಕ್ಷೆ ಮಾಳಮ್ಮ ಮಾತನಾಡಿ ದೇವದಾಸಿ ಮಹಿಳೆ ಅಕಾಲಿಕ ಮರಣ ಹೊಂದಿದಲ್ಲಿ ಅವಲಂಬಿತ ಕುಟುಂಬಕ್ಕೆ ಯಾವುದೇ ಸರಕಾರಿ ಸೌಲಭ್ಯ ದೊರೆಯದೆ ಇರುವುದಕ್ಕೆ ಕುಟುಂಬಗಳ ಗಣತಿ ನಡೆಯದೆ ಇರುವುದೆ ಕಾರಣವಾಗಿದ್ದು, ದೇವದಾಸಿ ಗಂಡು ಮಕ್ಕಳ ಮದುವೆಗೆ 3ಲಕ್ಷರೂ, ಹೆಣ್ಣು ಮಕ್ಕಳ ಮದುವೆಗೆ 5ಲಕ್ಷ ರೂ ನೀಡುವ ಸರಕಾರದ ಭರವಸೆ ಹಿಡೆರಿಲ್ಲ, ದೇವದಾಸಿ ಮಕ್ಕಳಿಗೆ ಜನನಕ್ಕೆ ಕಾರಣರಾದವರ ಆಸ್ತಿಯಲ್ಲಿ ಹಕ್ಕು ದೊರೆಯುವ ಕಾನೂನು ರೂಪಿಸಬೇಕು, ದೇವದಾಸಿ ಪದ್ದತಿಯಲ್ಲಿ ದೇವದಾಸಿ ಕುಟುಂಬದವರ ಮೇಲೆ ಮಾತ್ರ ಕಾನೂನುನಿಡಿ ಶಿಕ್ಷೆಗೆ ಗುರಿಪಡಿಸಬಹುದಾಗಿದ್ದು, ಈ ಕಾಯ್ದೆಗೆ ತಿದ್ದುಪಡಿಗೊಳಿಸಿ, ಈ ಅನಿಷ್ಟ ಪದ್ದತಿಗೆ ಪ್ರಚೋಧನೆ ಮಾಡುವವರನ್ನು ಗ್ರಾಮದ ದೈವಸ್ಥಾರನ್ನು ಪೂಜಾರಿಗಳನ್ನು ಕೂಡ ಅಪಾಧಿತರನ್ನಾಗಿಸಿ, ಕಾನೂನು ಕ್ರಮ ಕೈಗೊಳ್ಳಬೇಕು, ದೇವದಾಸಿ ಸ್ವಸಹಾಯ ಗುಂಪುಗಳಿಗೆ 15ಲಕ್ಷ ಸಾಲ ಹಾಗೂ ಸಹಾಯಧನ ವಿತರಿಸಬೇಕು, 5ಎಕರೆ ಕೃಷಿ ಭೂಮಿಯನ್ನು ನೀಡಬೇಕೆಂದು ಒತ್ತಾಯಿಸಿದರು.
ಸಮಾವೇಶದಲ್ಲಿ ಅಂಗನವಾಡಿ ನೌಕರರ ತಾ.ಅಧ್ಯಕ್ಷೆ ಉಮಾದೇವಿ, ದೇ.ಮ.ವಿ.ಸಂ.ತಾ.ಅಧ್ಯಕ್ಷೆ ಕೆ.ಈರಮ್ಮ, ಕಾರ್ಯದರ್ಶಿ ದುರುಗಮ್ಮ, ಉಪಾಧ್ಯಕ್ಷೆರಾದ ಹುಲಿಗಮ್ಮ, ಶೇಖಮ್ಮ, ಜಾಜಿ ಈರಮ್ಮ, ಶೇಖಮ್ಮ, ತಾಳೂರು ಈರಮ್ಮ, ತಿಪ್ಪಯ್ಯ, ಮಾರುತಿ, ನೀಲಪ್ಪ ಸೇರಿದಂತೆ ನೂರಾರು ದೇವದಾಸಿ ಮಹಿಳೆಯರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
