ಡಿ ಕೆ ಶಿವಕುಮಾರ್ ಅಂಡ್ ಟೀಮ್ ಅರೆಸ್ಟ್..!

ಬೆಂಗಳೂರು

      ಮಧ್ಯಪ್ರದೇಶ ಸರ್ಕಾರವನ್ನು ಉರುಳಿಸಲು ಸಜ್ಜಾಗಿ ಬೆಂಗಳೂರಿಗೆ ಬಂದಿರುವ ಕಾಂಗ್ರೆಸ್ ಶಾಸಕರು ಬಿಡಾರ ಹೂಡಿರುವ ರೆಸಾರ್ಟ್ ಮೇಲೆ ಇಂದು ವಾರ್ ಡಿಕ್ಲೇರ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಂಡ್ ಮತ್ತಿತರ ನಾಯಕರನ್ನ ಪೋಲೀಸರು ಬಂಧಿಸಿದ್ದಾರೆ.

    ಮಧ್ಯಪ್ರದೇಶದ ಹತ್ತೊಂಬತ್ತು ಮಂದಿ ಕಾಂಗ್ರೆಸ್ ಶಾಸಕರು ಬೆಂಗಳೂರಿನ ದೇವನಹಳ್ಳಿ ಸಮೀಪದ ರೆಸಾರ್ಟ್ ಒಂದರಲ್ಲಿ ತಂಗಿದ್ದು ಆಪರೇಷನ್ ಕಮಲ ಕಾರ್ಯಾಚರಣೆಯ ಮೂಲಕ ಬಿಜೆಪಿ ಇವರನ್ನು ಅಪಹರಿಸಿದೆ ಎಂದು ಆರೋಪಿಸಿದ ಡಿಕೆಶಿ ಹಾಗೂ ದಿಗ್ವಿಜಯ್‍ಸಿಂಗ್ ಮತ್ತಿತರ ನಾಯಕರು ಸದರಿ ರೆಸಾರ್ಟ್‍ಗೇ ಇಂದು ಮುತ್ತಿಗೆ ಹಾಕಿದರು.

     ಆಕ್ರಮವಾಗಿ ನಮ್ಮ ಪಕ್ಷದ ಶಾಸಕರನ್ನು ಬಂಧಿಸಿ ಇಲ್ಲಿರಿಸಲಾಗಿದೆ.ತಕ್ಷಣವೇ ಅವರನ್ನು ಬಿಡುಗಡೆ ಮಾಡಿ,ಇಲ್ಲವೇ ಮಾತನಾಡಲು ಅವಕಾಶ ಕೊಡಿ ಎಂದು ಒತ್ತಾಯಿಸಿ ಡಿಕೆಶಿ ಅಂಡ್ ಗ್ಯಾಂಗ್ ನಡೆಸಿದ ಧಾಳಿ ಕೆಲ ಕಾಲ ಅಲ್ಲಿದ್ದವರನ್ನು ದಂಗು ಬಡಿಸಿತ್ತು.

    ಆದರೆ ತಕ್ಷಣವೇ ಎಚ್ಚೆತ್ತುಕೊಂಡ ಪೋಲೀಸರ ತಂಡ ನಿಯೋಜಿತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲರನ್ನೂ ಬಂಧಿಸಿ ಅಮೃತಹಳ್ಳಿ ಪೋಲೀಸ್ ಠಾಣೆಗೆ ತಂದು ಕೂರಿಸಿತು.ಇದರ ವಿರುದ್ಧ ಡಿಕೆಶಿ ಅಂಡ್ ಗ್ಯಾಂಗ್ ಪ್ರತಿಭಟನೆ ನಡೆಸುತ್ತಿದ್ದ ಕಾಲದಲ್ಲೇ ವಿಷಯ ವಿಧಾನಸಭೆಯಲ್ಲೂ ಮೊಳಗಿದ್ದಲ್ಲದೆ ಆಪರೇಷನ್ ಕಮಲ ಕಾರ್ಯಾಚರಣೆಯ ಮೂಲಕ ಬಿಜೆಪಿ ಆಕ್ರಮವಾಗಿ ಬಂಧಿಸಿಟ್ಟಿರುವ ಶಾಸಕರನ್ನು ಬಿಡುಗಡೆ ಮಾಡಬೇಕು ಎಂಬ ಕೂಗು ವ್ಯಾಪಕವಾಗಿ ಕೇಳಿ ಬಂತು.

  ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್‍ನ ಹೆಚ್.ಕೆ.ಪಾಟೀಲ್:ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರನ್ನು ಇಲ್ಲಿ ಕರೆತಂದು ರೆಸಾರ್ಟ್‍ನಲ್ಲಿ ಬಂಧಿಸಿಡಲಾಗಿದೆ.ಇದಕ್ಕೆ ಬಿಜೆಪಿಯೇ ಕಾರಣ.ಪ್ರಜಾತಂತ್ರವನ್ನು ಕಗ್ಗೊಲೆ ಮಾಡಲು ಬಿಜೆಪಿ ಹೊರಟಿರುವ ರೀತಿ ಸರಿಯಲ್ಲ ಎಂದು ಆರೋಪಿಸಿದರು.

    ಹಲವು ದಿನಗಳಿಂದ ಮಧ್ಯಪ್ರದೇಶದ ಹತ್ತೊಂಭತ್ತು ಕಾಂಗ್ರೆಸ್ ಶಾಸಕರನ್ನು ಬಂಧಿಸಿಡಲಾಗಿದೆ.ಇದನ್ನು ಪ್ರಶ್ನಿಸಿ,ಆ ಶಾಸಕರ ಜತೆ ಮಾತುಕತೆ ನಡೆಸಲು ಹೋದ ನಿಯೋಜಿತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತಿತರರನ್ನು ಬಂಧಿಸಲಾಗಿದೆ.ನಿಮಗೆ ಬಂಧಿಸಲು ಅಧಿಕಾರ ಕೊಟ್ಟವರ್ಯಾರು?ಅಂತ ಪೋಲೀಸ್ ಕಮೀಷ್ನರ್ ಅವರಿಗೆ ಕೇಳಿದರೆ ಪೋಲೀಸ್ ಮಹಾನಿರ್ದೇಶಕರ ಬಳಿ ಕೇಳಿ ಎಂದು ಅವರು ಹೇಳುತ್ತಾರೆ.ಪೋಲೀಸ್ ಮಹಾನಿರ್ದೇಶಕರಿಗೆ ಹೇಳಿದರೆ ಅವರು ಕಮೀಷ್ನರ್ ಅವರನ್ನು ಕೇಳಿ ಎನ್ನುತ್ತಾರೆ.

    ಹೀಗೆ ಆಕ್ರಮವಾಗಿ ನಮ್ಮ ಪಕ್ಷದ ನಾಯಕರನ್ನು ಬಂಧಿಸಿರುವುದೇ ನಿಮ್ಮ ಪಕ್ಷ ಮಧ್ಯಪ್ರದೇಶದ ಶಾಸಕರನ್ನು ಕರೆ ತಂದು ಕೂಡಿಟ್ಟಿದೆ ಎಂಬುದಕ್ಕೆ ಸಾಕ್ಷಿ ಎಂದು ಹೆಚ್.ಕೆ.ಪಾಟೀಲ್ ಆರೋಪಿಸಿದಾಗ ಸದನದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಮಾತಿನ ಸಮರ ಆರಂಭವಾಯಿತು.

    ಈ ಹಂತದಲ್ಲಿ ಯಾರ ಮಾತು ಯಾರಿಗೂ ಕೇಳದ ಪರಿಸ್ಥಿತಿ ಸೃಷ್ಟಿಯಾದಾಗ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸದನ ಕಲಾಪವನ್ನು ಕೆಲ ಕಾಲ ಮುಂದೂಡಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link