ವಿಲೀನ ಮಾಡುವ ಹೆಸರಿನಲ್ಲಿ ಮುಚ್ಚಬೇಡಿ

ಹಾವೇರಿ :

         ಸರ್ಕಾರಿ ಶಾಲೆಗಳನ್ನು ವಿಲೀನ ಮಾಡುವ ಹೆಸರಿನಲ್ಲಿ ಮುಚ್ಚಬಾರದು ಎಂದು ಜಯಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ರ್ಯಾಲಿ ಮಾಡಿ ಸಿಎಂ ಕುಮಾರಸ್ವಾಮಿಯವರಿಗೆ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಲಾಯಿತು.

         ಮನವಿ ಸಲ್ಲಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಆರ್ ಚಂದ್ರಪ್ಪ ಇಂದಿನ ಆಧುನಿಕನಿಕತೆಯ ಭರಾಟೆ ಹಾಗೂ ಇಂಗ್ಲೀಷ್ ಭಾಷೆಯ ವ್ಯಾಮೋಹದಿಂದ ಖಾಸಗಿ ಶಾಲೆಗಳನ್ನು ನಿಯಂತ್ರಣ ಮಾಡದೇ ಮಾತೃ ಭಾಷೆಗೆ ಹೆಚ್ಚು ಒತ್ತು ನೀಡದೇ ಖಾಸಗಿ ಶಾಲೆಗೆ ಪ್ರೋತ್ಸಾಹ ಮಾಡುವ ಧೋರಣೆಯನ್ನು ಸರ್ಕಾರ ಹಾಗೂ ಅಧಿಕಾರಿಗಳು ಕೈಬಿಡಬೇಕು. ಆರ್‍ಟಿಇ ಅಡಿ ರಾಜ್ಯದಲ್ಲಿ ಲಕ್ಷಾಂತರ ಮಕ್ಕಳು ಖಾಸಗಿ ಶಾಲೆಗೆ ಹೋದರೆ ಸರ್ಕಾರಿ ಶಾಲೆಗಳು ಹೇಗೆ ಉಳಿಯುತ್ತೇವೆ ? ಆರ್‍ಟಿಇ ಮೂಲಕ ಕೋಟ್ಯಾಂತರ ರೂ ಗಳು ಸಾರ್ವಜನಿಕ ಹಣ ಪೋಲಾಗುತ್ತಿರುವುದು ಖಾಸಗಿತನಕ್ಕೆ ಪ್ರೇರಣೆ ನೀಡಿದಂತಾಗುತ್ತದೆ.

          ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಿ ಸೂಕ್ತ ಶಿಕ್ಷಕ ಸಿಬ್ಬಂದಿಗಳನ್ನು ನೇಮಕ ಮಾಡಿ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಮುಂದಾಗಬೆಕು.ಕಡಿಮೆ ಮಕ್ಕಳ ನೆಪ ಹೇಳಿ 14.347 ಕನ್ನಡ ಶಾಲೆಗಳನ್ನು ಮುಚ್ಚುವ ಹುನ್ನಾರ ಮಾಡುವುದನ್ನು ಕೈಬಿಡಬೇಕು.ಸರ್ಕಾರಿ ಶಾಲೆಗಳ ಬಲವರ್ದನೆಗಾಗಿ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡುವಂತೆ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ರಾಜ್ಯದ ತುಂಬೆಲ್ಲ ಉಗ್ರವಾದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಮನವಿಯಲ್ಲಿ ತಿಳಿಸಲಾಗಿದೆ ಎಂದರು.

          ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಾಮು ಎಳ್ಳೂರ.ಮುಖಂಡರಾದ ಅಣ್ಣಪ್ಪ ಓಲೇಕಾರ.ಎಚ್ ರಾಮಚಂದ್ರಪ್ಪ.ರಮೇಶ ಆನವಟ್ಟಿ . ಸಂಜಯಗಾಂಧಿ ಸಂಜೀವಣ್ಣನವರ.ಸತೀಶ ಮಡಿವಾಳರ.ಶಿವರಾಜ ಪಾಟೀಲ. ರಮೇಶ ಜಾಲಗಾರ ಸೇರಿದಂತೆ ಅನೇಕರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link