ಬಿಎಸ್‍ಎನ್‍ಎಲ್‍ ಮುಚ್ಚುವಿಕೆ : ಉಹಾಪೋಹಕ್ಕೆ ಕಿವಿಗೊಡಬೇಡಿ..!

ಬೆಂಗಳೂರು

    ಯಾವುದೇ ಕಾರಣಕ್ಕೂ ಬಿಎಸ್‍ಎನ್‍ಎಲ್ ಮುಚ್ಚುವುದಿಂದ ಈ ಬಗೆಗಿ ಊಹಾಪೋಹದ ಸುದ್ದಿಗಳನ್ನು ನಂಬಬೇಡಿ ಎಂದು ಬಿಎಸ್‍ಎನ್‍ಎಲ್ ಕರ್ನಾಟಕದ ಮುಖ್ಯ ಮಹಾ ವ್ಯವಸ್ಥಾಪಕ ಸುಶೀಲ್ ಕುಮಾರ್ ಮಿಶ್ರಾ ಸ್ಪಷ್ಟಪಡಿಸಿದ್ದಾರೆ.

    ಬಿಎಸ್‍ಎನ್‍ಎಲ್‍ನ ಪ್ರತಿಯೊಂದು ಸೇವೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬಿಎಸ್‍ಎನ್‍ಎಲ್ ಅನ್ನು ಪುನರುಜ್ಜೀವನಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದರು.ಬಿಎಸ್‍ಎನ್‍ಎಲ್ ಭಾರತದಾದ್ಯಂತ ವ್ಯಾಪಕವಾದ ಮೊಬೈಲ್ ವ್ಯಾಪ್ತಿಯನ್ನು ಹೊಂದಿದೆ ಮತ್ತು ಎಲ್ಲಾ ಟೆಲಿಕಾಂ ವಿಭಾಗಗಳಲ್ಲಿ ಸೇವೆಗಳನ್ನು ಒದಗಿಸುವ ಏಕೈಕ ಆಪರೇಟರ್ ಬಿಎಸ್‍ಎನ್‍ಎಲ್, ರಾಜ್ಯದ 18 ಜಿಲ್ಲೆಗಳಲ್ಲಿ ಇತ್ತೀಚಿನ ಪ್ರವಾಹ ಪರಿಸ್ಥಿತಿಯಲ್ಲಿ ಅನಿಯಮಿತ ಉಚಿತ ಕರೆಗಳು ಮತ್ತು ಉಚಿತ ಡೇಟಾವನ್ನು 8 ದಿನಗಳವರೆಗೆ ವಿಸ್ತರಿಸಿದ ಏಕೈಕ ಆಪರೇಟರ್ ಬಿಎಸ್‍ಎನ್‍ಎಲ್ ಆಗಿದೆ ಎಂದರು.

    ನೈಸರ್ಗಿಕ ವಿಪತ್ತುಗಳ ಕಷ್ಟದ ಸಮಯದಲ್ಲಿ ಬಿಎಸ್‍ಎನ್‍ಎಲ್ ಯಾವಾಗಲೂ ರಾಷ್ಟ್ರಸೇವೆ ಸಲ್ಲಿಸುತ್ತಿದೆ. ಭಾರತದಾದ್ಯಂತ ದೂರದ ಸ್ಥಳಗಳಿಗೂ ಸಹ ಕೈಗೆಟುಕುವ ಸೇವೆಗಳನ್ನು ನೀಡುತ್ತಿದ್ದು ಮತ್ತು ಭವಿಷ್ಯದಲ್ಲಿ ಇದನ್ನು ಮುಂದುವರಿಸುವುದಾಗಿ ಗ್ರಾಹಕರಿಗೆ ಭರವಸೆ ನೀಡುತ್ತೇವೆ ಎಂದು ಕುಮಾರ್ ಮಿಶ್ರಾ ಹೇಳಿದರು.ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಬಿಎಸ್‍ಎನ್‍ಎಲ್ ಮುಚ್ಚುವಿಕೆಯ ವದಂತಿಗಳನ್ನು ಹರಡುತ್ತಿವೆ, ಅದು ನಿಜವಲ್ಲ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link