ರಾಜಕೀಯದಲ್ಲಿ ಧರ್ಮದ ಹೆಸರು ಬಳಕೆ ಹೀನ ಕೃತ್ಯ : ದಿಂಗಾಲೇಶ್ವರ ಸ್ವಾಮೀಜಿ

ಹಾವೇರಿ:

       ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ರಾಜಕೀಯದಲ್ಲಿ ಧರ್ಮವನ್ನು ಸ್ವಾಮೀಜಿಗಳ ಹೆಸರನ್ನು ಬಳಸಿರುವದು ಹೀನ ಕೃತ್ಯ ಎಂದು ಬಾಲೇಹೊಸೂರು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

      ನಗರದ ನೆಹರೂ ಪಾಪ್ಯೂಲರ್ ಸ್ಕೂಲ್ ಆವರಣದಲ್ಲಿ ನಡೆದ ಶಾಸಕ ನೆಹರೂ ಓಲೇಕಾರ ಅವರ 62 ಹುಟ್ಟುಹಬ್ಬ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

      ಧರ್ಮ ಕಾರ್ಯ ಮಾಡುವದು ಮಠಾಧೀಶರು ಕೆಲಸ. ರಾಜಕಾರಣ ನಮ್ಮ ಕೆಲಸವಲ್ಲ. ರಾಜಕೀಯದಲ್ಲಿ ಯಾವುದೇ ಸ್ವಾಮೀಗಳ ಹೆಸರು ಬಳಕೆ ಮಾಡಬಾರದು. ಧರ್ಮವೇ ಬೇರೆ, ರಾಜಕೀಯವೇ ಬೇರೆಯಾಗಿದೆ. ಆದರೆ, ಇಂದು ಕೆಲವು ಮುಖಂಡರು ಅನಾವಶಕವಾಗಿ ರಾಜಕೀಯದಲ್ಲಿ ಧರ್ಮವನ್ನು ಎಳೆದು ತಂದಿರುವ ವಿಷರ್ಯಾಸ ಎಂದು ಪರೋಕ್ಷ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಾಡಿದ ಆರೋಪ್ಪಕ್ಕೆ ತೀಷ್ಣವಾಗಿ ಪ್ರತಿಕ್ರಿಯಿಸಿದರು.

       ಜಿಲ್ಲೆಯ ಬಿಜೆಪಿ ಅಧ್ಯಕ್ಷ ಶಿವರಾಜ ಸಜ್ಜನರ ಹಾಗೂ ಶಾಸಕ ಓಲೇಕಾರ ನಡೆವೆ ವಿಚಾರಗಳ ಭಿನ್ನಾಭಿಪ್ರಾಯಗಳು ಹೆಚ್ಚಾಗಿವೆ. ಆರೋಪ – ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. ಅವರಷ್ಟಕ್ಕೆ ಅವರು ಮಾಡಿಕೊಂಡಿದ್ದರೆ ಅದು ರಾಜಕಾರಣವಾಗುತ್ತಿತ್ತು. ಆದರೆ, ಅವರ ವಿಚಾರದಲ್ಲಿನ ಭಿನ್ನತೆಗೆ ನನ್ನ ಹೆಸರನ್ನು ಬಳಕೆ ಮಾಡಿಕೊಂಡಿರುವದು ಸರಿಯಲ್ಲ. ರಾಜಕೀಯದಲ್ಲಿ ಯಾವತ್ತು ಧರ್ಮ ಕೈ ಇಡಬಾರದು, ಧರ್ಮದಲ್ಲಿ ಯಾವತ್ತು ರಾಜಕಾರಣಿಗಳು ಹಸ್ತಕ್ಷೇಪ ಮಾಡಬಾರದು. ಈ ಇಬ್ಬರು ನಾಯಕರ ವಿಚಾರದಲ್ಲಿ ಜಿಲ್ಲೆಯ ಹಿರಿಯ ರಾಜಕಾರಣಿ ಹಾಗೂ ಮಾರ್ಗದರ್ಶಕರಾಗಿರುವ ಸಿ.ಎಂ. ಉದಾಸಿ ಇಬ್ಬರು ನಾಯಕರನ್ನು ಒಂದುಗೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಬಿಜೆಪಿ ಪರ ಒಲವು ಹೊಂದಿದ್ದು ನಿಜ, ಅದಕ್ಕೆ ಬಲವಾದ ಕಾರಣವಿತ್ತು. ಅಂದಿನ ಸರಕಾರ ಧರ್ಮದ ಹೆಸರಲ್ಲಿ ಜನರನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿತ್ತು. ಅಂದು ಸುಮಾರು 56 ಕ್ಕೂ ಸ್ವಾಮೀಜಿಗಳು ಮನವಿ ಮಾಡಿ, ಧರ್ಮ ಓಡೆಯುವ ಕಾರ್ಯ ಮಾಡಬೇಡಿ ಎಂದು ಮನವಿ ಮಾಡಿದರೂ ಅಂದಿನ ಸರಕಾರ ನಮ್ಮ ಮನವಿಗೆ ಕೀವಿಗೊಡಲಿಲ್ಲ. ಅದಕ್ಕಾಗಿ ನಾವು ಧರ್ಮ ಓಡೆಯುವವರ ವಿರುದ್ಧವಾಗಿ ಚುನಾವಣೆಯಲ್ಲಿ ಕೆಲಸ ಮಾಡಬೇಕಾಯಿತು ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link