ಬೆಂಗಳೂರು
ಕೊಕೇನ್,ಎಂಡಿಎಂಎ,ಗಾಂಜಾ ಇನ್ನಿತರ ಮಾಧಕ ವಸ್ತುಗಳನ್ನು ಮಾರಾಟ ಮಾಡುತ್ತಾ ಸಮಾಜಕ್ಕೆ ಕಂಟಕವಾಗಿದ್ದ ನೈಜೀರಿಯಾದ ಡ್ರಗ್ ಪೆಡ್ಲರ್ನೊಬ್ಬನನ್ನು ಗೂಂಡಾ ಕಾಯ್ದೆಯಡಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಮ್ಮನಹಳ್ಳಿಯ ಮಕುಕೊ ಕುಚುವಾ ಅಲಿಯಾಸ್(26) ಗೂಂಡಾ ಕಾಯ್ದೆಯಡಿ ಬಂಧಿತ ಆರೋಪಿಯಾಗಿದ್ದಾನೆ ,ನಗರದಲ್ಲಿ ಮೊದಲ ಬಾರಿ ಮಾದಕ ವಸ್ತು ಮಾರಾಟದ ಡ್ರಗ್ ಪೆಡ್ಲರ್ಮೇಲೆ ಗೂಂಡಾ ಕಾಯ್ದೆ ಜಾರಿ ಮಾಡಲಾಗಿದೆ .ಆರೋಪಿ ಮಕುಕೊ ಕೊಕೇನ್,ಎಂಡಿಎಂಎ,ಗಾಂಜಾ ಮಾರಾಟ ಮಾಡುವಾಗ ಹಲವು ಬಾರಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಈತನ ವಿರುದ್ಧ 5 ಪ್ರಕರಣಗಳು ದಾಖಲಾಗಿವೆ.ನೈಜೀರಿಯಾದಿಂದ ವಿದ್ಯಾರ್ಥಿ ವೀಸಾ ಮೇಲೆ ಬಂದಿದ್ದ ಆರೋಪಿಯು ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನಗರದಲ್ಲಿ ನೆಲೆಸಿ ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ಪಾಟೀಲ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
