ಹೊಳಲ್ಕೆರೆ:
ಮುಸ್ಲಿಮರಿಗೆ ಪವಿತ್ರವಾದ ಎರಡು ಹಬ್ಬಗಳಾದ ರಂಜಾನ್ ಹಾಗೂ ಬಕ್ರಿದ್ ಆದ ಬಳಿಕ ಪ್ರಮುಖವಾದ ದಿನವೆಂದರೆ ಮೀಲಾದುನ್ನಬಿ ಅಥವಾ ಈದ್ ಮೀಲಾದ್ ಆಗಿದೆ. ಇದು ಪ್ರವಾದಿಯವರ ಜನ್ಮ ಮತ್ತು ಪುಣ್ಯ ತಿಥಿಯ ದಿನದಲ್ಲಿ ಆಚರಿಸಲಾಗುತ್ತದೆ.
ಪಟ್ಟಣದಲ್ಲಿ ಬುಧವಾರ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮ ದಿನದ ಪ್ರಯುಕ್ತ ಮುಸ್ಲಿಂ ಬಾಂಧವರ ಜೊತೆಗೆ ಎಲ್ಲಾ ಸಮುದಾಯದವರು ಒಂದಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿ ಸಂತೋಷವನ್ನು ಹಂಚಿಕೊಂಡರು.
ಮದ್ಯಾಹ್ನ 3 ಗಂಟೆಯಿಂದ ಮೊಹ್ಮದ್ ಪೈಗಂಬರ್ ಅವರ ಜನ್ಮ ದಿನ ಪ್ರಯುಕ್ತ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟಿ ರಸ್ತೆಯಲ್ಲಿ ಸಾರ್ವಜನಿಕರಿಗೆ ಪಾನಕ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರುಗಳಾದ ಅಲೀಮುಲ್ಲಾ ಷರೀಫ್, ಇಲಿಯಾಸ್ ಖಾನ್, ಅಲ್ತಾಫ್ ಬೇಗ್, ದಾವುದ್, ಸಯ್ಯದ್, ನುಸರತ್ ಅಲಿಖಾನ್, ಪ.ಪಂ ಸದಸ್ಯರುಗಳಾದ ಕೆ.ಸಿ.ರಮೇಶ್, ಸಜೀಲ್, ಹಬೀಬ್‍ಉರ್ ರಹಮಾನ್, ಇಂದೂಧರ್ ಮೂರ್ತಿ, ತಾ.ಪಂ. ಮಾಜಿ ಅಧ್ಯಕ್ಷ ಮೋಹನ್ ನಾಗರಾಜ್, ಮಾಜಿ ತಾಲ್ಲೂಕು ಘಟಕದ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ರುದ್ರಪ್ಪ. ಪಿ.ಎಸ್.ಐ ಮಹೇಶ್ ಹಾಗೂ ಮುಸ್ಲಿಂ ಸಮುದಾಯ ಮುಖಂಡರುಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
